ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಎಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್( ಪೇಸ್ ) ಇದರ ಮಹಾ ಸಭೆಯು ರೋಟರಿ ಮನಿಷ ಕಟ್ಟಡದ ಡಾ| ಸೂರ್ಯ ರೋಟರಿ ಸಭಾಂಗಣದಲ್ಲಿ ಅಧ್ಯಕ್ಷರಾದ ರಮೇಶ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವಾಧ್ಯಕ್ಷರಾದ ಆನಂದ್ ಕುಮಾರ್ ಎಸ್.ಕೆ ರವರು ಮಾತನಾಡಿ ವರುಷದಿಂದ ವರುಷಕ್ಕೆ ಸದಸ್ಯರ ಭಾಂದವ್ಯ ಬೆಳೆಯುತ್ತಿರುವುದರ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ವ್ಯವಹಾರ ಮತ್ತು ಅಭಿವೃದ್ಧಿ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು. ಅಧ್ಯಕ್ಷರಾದ ರಮೇಶ್ ಭಟ್ ರವರು ಮಾತನಾಡಿ ಕೊರೋನಾ ದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಪೂರ್ತಿ ವರುಷ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಗೌರವಾದ್ಯಕ್ಷರಿಗೆ, ಮಾಜಿ ಅಧ್ಯಕ್ಷರಿಗೆ ಹಾಗೂ ಎಲ್ಲಾ ಸದಸ್ಯರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಪೇಸ್ ಸಂಸ್ಥೆಯೊಂದು ಪ್ರತಿಷ್ಠಿತ ವೃತ್ತಿಪರ ಸಂಸ್ಥೆಯಾಗಿದ್ದು, ಯಾವುದೇ ಸಂದರ್ಭ ಗಳಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ತನ್ನ ಸಮಾಜಮುಖಿ ಚಿಂತನೆಗಳಿಂದ ಇಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.

ಸಭೆಯಲ್ಲಿ ಸಂಸ್ಥೆಯ ಚಟುವಟಿಕೆಗಳಾದ ತರ್ಡ್‌ಪಾರ್ಟಿ ಇನ್ಸ್ ಪೆಕ್ಷನ್, ಇಂಜಿನಿಯರ್‍ಸ್ ಡೇ ಆಚರಣೆ, ಕೊರೋನಾ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗೆ ನೀಡಿದ ದೇಣಿಗೆ ಹಾಗೂ ನಡೆದ ಸಭೆಗಳ ಕುರಿತು ಸದಸ್ಯರು ಮೆಚ್ಚುಗೆ ವ್ಯಕ್ತ ಪಡಿಸಿ, ಅಧ್ಯಕ್ಷರಾದ ರಮೇಶ್ ಭಟ್ ರವರನ್ನು ಅಭಿನಂದಿಸಿದರು. ಸದಸ್ಯರಾದ ಪ್ರಶಾಂತ್ ಆಚಾರ್, ರವೀಂದ್ರ, ವಸಂತ ಭಟ್, ಪ್ರಸನ್ನ ಪ್ರಭು, ಸತ್ಯನಾರಾಯಣ ಭಟ್, ರವಿರಾಮ್, ಸಂತೋಶ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಹರೀಶ್ ಪುತ್ತೂರಾಯ, ಶಿವರಾಮ್ ಎಂ.ಎಸ್.,ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಪುತ್ತೂರಾಯ, ನಿಯೋಜಿತ ಅಧ್ಯಕ್ಷ ಅಕ್ಷಯ್ ಎಸ್.ಕೆ., ಉಪಾಧ್ಯಕ್ಷ ರಾಘವೇಂದ್ರ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ರಮೇಶ್ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಸತ್ಯಗಣೇಶ್ ಕಳೆದ ಗತ ಮಹಾಸಭೆಯ ವರದಿ ಹಾಗು ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಜಯಪ್ರಕಾಶ್ ಅಯವ್ಯಯ ಮತ್ತು ಮುಂಗಡಪತ್ರವನ್ನು ಮಂಡಿಸಿದರು. ಕಾರ್ಯದರ್ಶಿ ಸತ್ಯಗಣೇಶ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.