ಸೌತ್‌ಕೆನರಾ ಡಾಟ್ ಇನ್‌ನಿಂದ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿ ಎಲ್‌ಇಡಿ ಲೈಟ್ಸ್ ಪ್ರದರ್ಶನ, ಮಾರಾಟ ಬೃಹತ್ ಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವ್ಯವಹಾರಸ್ಥರು ಕೂಡ ನೇಷನ್ ಬಿಲ್ಡರ್‍ಸ್-ಕೇಶವಪ್ರಸಾದ್ ಮುಳಿಯ

ಪುತ್ತೂರು: ದೀಪದಿಂದ ದೀಪ ಹಚ್ಚಿ, ಬೆಳಕಿನಿಂದ ಬೆಳಕನ್ನ ಹಚ್ಚಿ ಎಂಬಂತೆ ವಿದ್ಯುಚ್ಛಕ್ತಿ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿಸುವಲ್ಲಿ ಎಲ್‌ಇಡಿ ಲೈಟ್ಸ್‌ಗಳು ಪರಿಣಾಮಕಾರಿಯಾಗಿದ್ದು ಇದು ದೇಶದ ಪ್ರಗತಿಗೆ ಬೆಳಕಾಗಬಲ್ಲುದು. ಹೇಗೆ ಶಿಕ್ಷಕರನ್ನು ನೇಷನ್ ಬಿಲ್ಡರ್‍ಸ್ ಎಂದು ಕರೆಯುತ್ತೇವೆಯೋ ಹಾಗೆಯೇ ವ್ಯವಹಾರಸ್ಥರು ಕೂಡ ನೇಷನ್ ಬಿಲ್ಡರ್‍ಸ್ ಆಗಿದ್ದಾರೆ ಎಂದು ಪುತ್ತೂರು ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯರವರು ಹೇಳಿದರು.ಕೊರೊನಾ ಸಂದರ್ಭದಲ್ಲಿ ಇತರ ಎಲ್ಲಾ ವ್ಯವಸ್ಥೆ ಪುತ್ತೂರು-ಸುಳ್ಯ ರಸ್ತೆಯ ಸಂತ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಬಳಿ ವ್ಯವಹರಿಸುತ್ತಿರುವ ಸೌತ್‌ಕೆನರಾ ಡಾಟ್ ಇನ್ ಇದರ ಆಶ್ರಯದಲ್ಲಿ ಸೆ.30 ರಿಂದ ಅ.3ರ ತನಕ ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯಲಿರುವ ಎಲ್‌ಇಡಿ ಲೈಟ್ಸ್ ಪ್ರದರ್ಶನ ಹಾಗೂ ಮಾರಾಟದ ಬೃಹತ್ ಮೇಳವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೊರೋನಾ ಸಂದರ್ಭದಲ್ಲಿ ಬಾಕಿ ಎಲ್ಲಾ ವ್ಯವಸ್ಥೆ ನಡೀತಿತ್ತು. ಆನ್‌ಲೈನ್ ಮೂಲಕ ಶಿಕ್ಷಣ ಕೂಡ ನಡೀತಿತ್ತು. ಯಾವಾಗ ವ್ಯವಹಾರಕ್ಕೆ ಪೆಟ್ಟು ಬಿತ್ತೋ ಆವಾಗ ಜನಜೀವನ ಅಸ್ತವ್ಯಸ್ತವಾಗಿತ್ತು. ವ್ಯವಹಾರ ಎಂದರೆ ದೇಶದ ಜೀವಾಳ. ದೇಹದಲ್ಲಿ ರಕ್ತವು ಒಂದು ಕಡೆ ಹೆಪ್ಪುಗಟ್ಟಿದರೆ ಆವಾಗ ಆ ಭಾಗಕ್ಕೆ ಪಾರ್ಶ್ವವಾಯು ಆಗುವುದು ಖಂಡಿತಾ. ಹಾಗೆಯೇ ಗಳಿಕೆಯ ಹಣ ಶೇಖರಣೆ ಮಾಡದೆ ಚಲಾವಣೆಯಾದಾಗ ಮಾತ್ರ ದೇಶ ಬೆಳೆಯಬಲ್ಲುದು ಎಂದ ಅವರು ಹುಟ್ಟು ಹೋರಾಟಗಾರಾಗಿರುವ ಸೌತ್‌ಕೆನರಾ ಸಂಸ್ಥೆಯ ಪಶುಪತಿಶರ್ಮರವರು ಐದು ಎಲ್‌ಇಡಿ ಕಂಪೆನಿಗಳನ್ನು ಒಂದೇ ಸೂರಿನಡಿಯಲ್ಲಿ ತಂದು ವ್ಯವಹಾರ ಮಾಡುವ ಮೂಲಹೊಸ ಹೆಜ್ಜೆಯನ್ನು ಇಟ್ಟಿದ್ದು ಮುಂದಿನ ದಿನಗಳಲ್ಲಿ ಇದು ಬೆಳೆದು ಜೀವನದಲ್ಲಿ ಯಶಸ್ವಿ ಉದ್ಯಮಿ ಎನಿಸಿಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಅನುಮೋದಿಸಲಾದ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್‍ಸ್ ಅಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷ ಹರಿಪ್ರಸಾದ್ ಪಿ.ಕೆ.ರವರು ಮಾತನಾಡಿ, ಇಂದಿನ ಆಧುನಿಕ ದಿನಗಳಲ್ಲಿ ಕಡಿಮೆ ವಿದ್ಯುಚ್ಛಕ್ತಿ ಬಳಸಿ, ಹೆಚ್ಚು ಬೆಳಕನ ಪ್ರಖರತೆ ಹೊಂದಿರುವ ಎಲ್‌ಇಡಿ ಬಲ್ಬ್‌ಗಳ ಬಳಕೆಯು ಅನಿವಾರ್ಯ ಎನಿಸಿದೆ. ಇಂದಿನ ಜನಸಂಖ್ಯಾ ಸ್ಫೋಟದಲ್ಲಿ ವಿದ್ಯುಚ್ಛಕ್ತಿ ಕಡಿಮೆ ಮಾಡುವಲ್ಲಿ ಎಲ್‌ಇಡಿ ಬಲ್ಬ್‌ಗಳು ಬಹಳ ಉಪಯುಕ್ತವಾಗಿವೆ. ವಿವಿಧ ಕಂಪೆನಿಗಳನ್ನು ಒಂದೇ ಸೂರಿನಡಿ ತಂದು ಅವುಗಳ ಬಳಕೆ, ಹೇಗೆ ಬಳಸಬಹುದು, ಅದರ ಪ್ರಯೋಜನಗಳೇನು ಎಂಬುದರ ಕುರಿತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ಪೇಸ್ ಪುತ್ತೂರು ಅಧ್ಯಕ್ಷ ರಮೇಶ್ ಭಟ್ ಮಿತ್ತೂರುರವರು ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಎಲ್‌ಇಡಿ ಬಲ್ಬ್‌ಗಳ ಪಾತ್ರ ಬಹಳ ಹಿರಿದು. ಸ್ವಾತಂತ್ರ್ಯಾ ನಂತರ ೩೫ ಕೋಟಿ ಜನಸಂಖ್ಯೆ ಇರುವಾಗ ಸುಮಾರು ಒಂದು ಕೋಟಿ ಜನರು ವಿದ್ಯುಚ್ಛಕ್ತಿಯನ್ನು ಬಳಸುತ್ತಿದ್ದರು. ಆದರೆ ಈಗ ೧೩೫ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಎಲ್ಲರೂ ವಿದ್ಯುಚ್ಛಕ್ತಿಯನ್ನು ಬಳಸುತ್ತಿದ್ದು, ಬಳಸುತ್ತಿರುವ ಪ್ರಮಾಣವು ನೂರು ಪ್ರತಿಶತ ಆಗಿದೆ. ವಿದ್ಯುಚ್ಛಕ್ತಿ ಬಳಕೆಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಸೌತ್‌ಕೆನರಾ ಸಂಸ್ಥೆ ಎಲ್‌ಇಡಿ ಬಲ್ಬ್‌ಗಳ ಸಂಸ್ಥೆಯನ್ನು ಆರಂಭಿಸಿರುವುದು ಒಂದರ್ಥದಲ್ಲಿ ದೇಶಸೇವೆ ಎನ್ನಬಹುದು. ಈ ನಿಟ್ಟಿನಲ್ಲಿ ನಮ್ಮ ಇಂಜಿನಿಯರ್‍ಸ್ ಒಳಗೊಂಡ ಪೇಸ್ ಸಂಸ್ಥೆಯು ಸದಾ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿ ಶುಭ ಹಾರೈಸಿದರು.

ಕ್ಲಾಸ್-೧ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಹಾಗೂ ಜೆ.ಕೆ ಕನ್ಸ್‌ಟ್ರಕ್ಷನ್‌ನ ಮಾಲಕ ಜಯಕುಮಾರ್ ನಾಯರ್, ಸೌತ್‌ಕೆನರಾ ಡಾಟ್ ಕಾಮ್ ಮುಖ್ಯಸ್ಥ ಪಶುಪತಿ ಶರ್ಮರವರ ಸಹೋದರ ಟಿವಿ ಕ್ಲಿನಿಕ್‌ನ ಸತ್ಯಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದರ್ಬೆ ಶ್ರೀರಾಮ ಸೌಧ ಕಟ್ಟಡ ಮಾಲಕ ಉಮೇಶ್ ನಾಯಕ್, ರೋಟರಿ ಸಿಟಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣಮೋಹನ್, ವಿಜಯಲಕ್ಷ್ಮೀ ಎಲೆಕ್ಟ್ರಿಕಲ್ಸ್‌ನ ಬಾಲಕೃಷ್ಣ, ಪವರ್‌ಪ್ಯಾಕ್‌ನ ಕಿರಣ್ ಶೆಟ್ಟಿ, ಸನ್ ಡೈರೆಕ್ಟ್‌ನ ಪ್ರದೀಪ್, ಇಕೋ ವುಡ್‌ನ ಪ್ರಜ್ವಲ್, ಕೋರ್ಟ್‌ರೋಡ್ ಫೊಟೋಶಾಪ್ ಸ್ಟುಡಿಯೋದ ರಾಘು ಶೆಟ್ಟಿ, ಸೀತಾರಾಮ್ ಶೆಟ್ಟಿ ಕಂಬಳತ್ತಡ್ಡ, ಜೇಸಿಐ ಉಮೇಶ್ ಶೆಟ್ಟಿ ಸಹಿತ ಹಲವರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದ್ದಾರೆ. ಸೌತ್‌ಕೆನರಾ ಡಾಟ್ ಕಾಮ್‌ನ ಅನ್ನಪೂರ್ಣ ಶರ್ಮ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸೌತ್‌ಕೆನರಾ ಡಾಟ್ ಇನ್‌ನ ಮುಖ್ಯಸ್ಥ ಪಶುಪತಿ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು.

ಒಂದೇ ಸೂರಿನಡಿ ಬ್ರಾಂಡೆಡ್ ಕಂಪೆನಿ ಐಟಂಗಳು…
ವಿವಿಧ ವ್ಯಾಟ್‌ಗಳನ್ನೊಳಗೊಂಡ ಕಡಿಮೆ ಅಥವಾ ಜಾಸ್ತಿ ದರದ ಎಲ್‌ಇಡಿ, ಎಲ್‌ಇಡಿ ಪ್ಯಾನಲ್ಸ್ ಸಿಗುತ್ತದೆ. ಆದರೆ ಬ್ರಾಂಡೆಡ್ ಕಂಪೆನಿಗಳಾದ ಕ್ರಾಂಪ್ಟನ್, ಫಿಲಿಪ್ಸ್, ಇಕೋಲಿಂಕ್, ಪೋಲಿಕ್ಯಾಬ್, ವಿಪ್ರೊವನ್ನೊಳಗೊಂಡ ಕಂಪೆನಿಗಳು ನಮ್ಮೊಂದಿಗೆ ಸೇರಿಕೊಂಡು ಎಲ್‌ಇಡಿಗಳನ್ನು ಒಂದೇ ಸೂರಿನಡಿ ಪ್ರದರ್ಶನ ಹಾಗೂ ಮಾರಾಟಕ್ಕೆ ನಾವು ಅನುವು ಮಾಡಿಕೊಟ್ಟಿದ್ದೇವೆ. ಉದಾಹರಣೆಗೆ 70 ವ್ಯಾಟ್‌ನ ಬಲ್ಬ್ ಅಥವಾ ಫ್ಯಾನ್ ಅನ್ನು 30-40 ವ್ಯಾಟ್‌ನಲ್ಲಿ ಪೂರೈಸಿ ವಿದ್ಯುತ್ತನ್ನು ಉಳಿಸುವುದನ್ನು ಈ ಹೆಸರಾಂತ ಕಂಪೆನಿಗಳು ಮಾಡ್ತಾ ಇವೆ. ಗ್ರಾಹಕರು ಆಗಮಿಸಿ ಮಾಹಿತಿಯನ್ನು ಪಡೆದುಕೊಳ್ಳುವುದರ ಜೊತೆಗೆ ಖರೀದಿ ಕೂಡ ಮಾಡಬಹುದು. ಆರ್ಡರ್‌ಗಳನ್ನು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲೂ ಖರೀದಿಗೆ ಅವಕಾಶವಿದೆ. ತ್ರಿ ಸ್ಟಾರ್, ಫೈವ್ ಸ್ಟಾರ್ ಸ್ಟೆಬಿಲೈಸರ್ ಬಲ್ಬ್ಸ್ ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಹಾಗೂ ಮನೆಗಳಲ್ಲಿ ಮಹಿಳೆಯರಿಗೆ/ವಿದ್ಯಾರ್ಥಿನಿಯರಿಗೆ ಅತ್ಯಗತ್ಯವಾಗಿರುವ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಕೂಡ ಇಲ್ಲಿ ಲಭ್ಯವಿದ್ದು ಸ್ಯಾನಿಟರಿ ಪ್ಯಾಡ್ ಎಲ್ಲೆಂದರಲ್ಲಿ ಬಿಸಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಲೇವಾರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಉತ್ತಮ ಪರಿಹಾರವಾಗಿದೆ.
-ಪಶುಪತಿ ಶರ್ಮ, ಮುಖ್ಯಸ್ಥರ, ಸೌತ್‌ಕೆನರಾ ಡಾಟ್ ಇನ್

ನ್ಯಾಯವಾದಿ ಜೇಸಿಐ ಜಗನ್ನಾಥ್ ರೈಯವರು ನಿರ್ಮಾಣ ಮಾಡುತ್ತಿರುವ ತಮ್ಮ ನೂತನ ಆಫೀಸಿಗೆ ಎಲ್‌ಇಡಿ ಬಲ್ಬ್ಸ್ ಹಾಗೂ ಫ್ಯಾನ್‌ಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಪ್ರಥಮ ಗ್ರಾಹಕರಾಗಿ ಬಲ್ಬ್ ಹಾಗೂ ಫ್ಯಾನ್ ಒಳಗೊಂಡ ಕಿಟ್‌ನ್ನು ಜಗನ್ನಾಥ್ ರೈಯವರಿಗೆ ಹಸ್ತಾಂತರಿಸುವ ಮೂಲಕ ಸೌತ್‌ಕೆನರಾ ಸಂಸ್ಥೆಯ ಪಶುಪತಿ ಶರ್ಮರವರು ಸಭೆಯಲ್ಲಿ ಉಲ್ಲೇಖಿಸಿದರು.

ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಪ್ರದರ್ಶನ..
ಪ್ರದರ್ಶನದಲ್ಲಿ ಕ್ರಾಂಪ್ಟನ್, ಫಿಲಿಪ್ಸ್, ಇಕೋಲಿಂಕ್, ಪೋಲಿಕ್ಯಾಬ್, ವಿಪ್ರೊ ಮುಂತಾದ ಹೆಸರಾಂತ ಕಂಪೆನಿಗಳ ಎಲ್‌ಇಡಿ ಲೈಟ್ಸ್‌ಗಳ ಪ್ರದರ್ಶನ ಹಾಗೂ ಮಾರಾಟವಿದೆ ಅಲ್ಲದೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಪ್ರದರ್ಶನ ಕೂಡ ಇಲ್ಲಿ ಲಭ್ಯವಿದೆ. ಜೊತೆಗೆ ಲಕ್ಕಿ ಡ್ರಾ ಮುಖಾಂತರ ಕ್ರಾಂಪ್ಟನ್ ಫ್ಯಾನ್ ವಿಜೇತರಾಗುವ ಸುವರ್ಣ ಅವಕಾಶವನ್ನು ಕೂಡ ಗ್ರಾಹಕರು ಪಡೆಯಲಿದ್ದಾರೆ. ಈ ನಾಲ್ಕು ದಿನಗಳ ಪ್ರದರ್ಶನ ಮೇಳದಲ್ಲಿ ಆಗಮಿಸುವ ಗ್ರಾಹಕರಿಗೆ ಉಚಿತ ಪ್ರವೇಶವಿದ್ದು, ಗ್ರಾಹಕರು ಕಡ್ಡಾಯವಾಗಿ ಕೋವಿಡ್ ನಿಯಮವನ್ನು ಪಾಲಿಸಿ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ 9448546663, 9845522020 ನಂಬರಿಗೆ ಸಂಪರ್ಕಿಸಬಹುದು ಎಂದು ಸೌತ್‌ಕೆನರಾ ಡಾಟ್ ಇನ್ ಸಂಸ್ಥೆಯ ಮುಖ್ಯಸ್ಥರಾದ ಪಶುಪತಿ ಶರ್ಮ ಹಾಗೂ ಅನ್ನಪೂರ್ಣ ಶರ್ಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.