ಅ.22: ಶಾರ್ಜಾದಲ್ಲಿ ನೆಟ್ಟಣಿಗೆ ಮುಡ್ನೂರು ಪ್ರೀಮಿಯರ್ ಲೀಗ್ ಕ್ರಿಕೆಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನೆ.ಮುಡ್ನೂರಿನ ಅನಿವಾಸಿ ಭಾರತೀಯರಿಂದ ಪಂದ್ಯಾಟ ಆಯೋಜನೆ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಅನಿವಾಸಿ ಭಾರತೀಯರು ಯು.ಎ.ಇ ಇದರ ಆಶ್ರಯದಲ್ಲಿ ಎನ್.ಪಿ.ಎಲ್-2021 (ನೆಟ್ಟಣಿಗೆ ಮುಡ್ನೂರು ಪ್ರೀಮಿಯರ್ ಲೀಗ್ ಸೀಸನ್-2) ಹೊನಲು ಬೆಳಕಿನ ಕ್ರಿಕೆಟ್ ಫೆಸ್ಟ್ ಅ.22ರಂದು ಶಾರ್ಜಾ ಅಲ್ ಆಲಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಿಗದಿತ ಓವರ್‌ಗಳ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಈ ಕ್ರಿಕೆಟ್ ಕೂಟದಲ್ಲಿ ಇಶಾಕ್ ಕರ್ನೂರು ಮಾಲಕತ್ವದ ಬ್ಲಿಟ್ಜ್ ವಾರಿಯರ್ಸ್ ಅಶ್ರಫ್ ಸಿ.ಎಚ್ ಮಾಲಕತ್ವದ ಸುಲ್ತಾನ್ಸ್, ಯೂಸುಫ್ ಪಟ್ರೊಡಿ ಮತ್ತು ಅಮ್ಮಿ ಬಿ ಸಿ ಮಾಲಕತ್ವದ ಎಕ್ಸ್ ಫ್ಯಾಕ್ಟರ್ಸ್, ಅಬ್ದುಲ್ಲಾ ಕರ್ನೂರು ಮತ್ತು ಅಶ್ರಫ್ ಕರ್ನೂರು ಮಾಲಕತ್ವದ ಇಮಾರಾತಿ ಫೈಟರ್ಸ್, ಇಸ್ಮಾಯಿಲ್ ಕರ್ನೂರು ಮಾಲಕತ್ವದ ರಾಯಲ್ ಸ್ಟ್ರೈಕರ್ಸ್, ಸಿದ್ದಿಕ್ ಕರ್ನೂರು ಮತ್ತು ಫಹದ್ ಕರ್ನೂರು ಮಾಲಕತ್ವದ ರೆಡ್ ರೇಂಜರ್‍ಸ್ ತಂಡಗಳು ಭಾಗವಹಿಸಲಿದೆ. ಪ್ರಥಮ ಬಹುಮಾನವಾಗಿ ರೂ.7,777 ದಿರ್ಹಮ್ಸ್ ಮತ್ತು ಎನ್‌ಪಿಎಲ್ ಟ್ರೋಫಿ, ದ್ವಿತೀಯ ಬಹುಮಾನ ರೂ. 4.444 ದಿರ್ಹಮ್ಸ್ ಮತ್ತು ಎನ್‌ಪಿಎಲ್ ಟ್ರೋಫಿ ನೀಡಲಾಗುವುದು. ಅಲ್ಲದೇ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುವುದು ಎಂದು ಎನ್‌ಪಿಎಲ್ ಆಯೋಜಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.