ಅ.3: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

ಪುತ್ತೂರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2020-21ನೇ ಸಾಲಿನ ಮಹಾಸಭೆ ಅ.3ರಂದು ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ, ಬಿ.ಸಿ.ರೋಡ್ ಇದರ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಕೆಡೆಂಜಿ, ನಿಕಟಪೂರ್ವಾಧ್ಯಕ್ಷ ಜಯಂತ ನಡುಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತ್ಯಧಿಕ ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಮಹಾಸಭೆಯಲ್ಲಿ ಗೌರವಿಸಲಾಗುವುದು. ಅದರಂತೆ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಕಡಬ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ನಿಹಾರ ರೈ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ರಾಮಕುಂಜ ಪ.ಪೂ.ಕಾಲೇಜಿನ ರಾಮ್‌ಚರಣ್(ವಾಣಿಜ್ಯ), ಶ್ರೇಯಾ ಕೆ(ವಿಜ್ಞಾನ ವಿಭಾಗ), ಅಪೂರ್ವ ಲಕ್ಷ್ಮೀ(ಕಲಾವಿಭಾಗ)ಯವರನ್ನು ಗೌರವಿಸಲಾಗುವುದು. ಅಲ್ಲದೇ ಸಂಘದ ಸದಸ್ಯರ ಮಕ್ಕಳ ಪೈಕಿ ಪ್ರತಿಭಾನ್ವಿತರಿಗೆ, ಮೂರ್ತೆದಾರರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಸಂಘದ ಮಾಜಿ ನಿರ್ದೇಶಕ ನೈಯಲ್ಗ ದಿ.ಗಿರಿಯಪ್ಪ ಪೂಜಾರಿಯವರ ಸ್ಮರಣಾರ್ಥ, ದಿ.ನೈಯಲ್ಗ ದೇರಣ್ಣ ಪೂಜಾರಿ ಮತ್ತು ಪದ್ಮಾವತಿ ಸ್ಮರಣಾರ್ಥ, ಮಾಜಿ ನಿರ್ದೇಶಕ ಕೇರ್ಪುಡೆ ದಿ. ಗುಡ್ಡಪ್ಪ ಪೂಜಾರಿಯವರ ಸ್ಮರಣಾರ್ಥ, ದಿ.ದೇವು ಪೂಜಾರಿ ಗೇರ್ತಿಲ ಇವರ ಸ್ಮರಣಾರ್ಥ ಒಟ್ಟು 5 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು. ಸಂಘದ ಹಿರಿಯ ಮೂರ್ತೆದಾರರಾದ ಮಾಧವ ಬೆಳ್ಚಪಾಡರವರಿಗೆ ಸನ್ಮಾನ ನಡೆಯಲಿದೆ. ಮೂರ್ತೆದಾರರಿಗೆ ಪ್ರತಿ ಲೀಟರ್‌ಗೆ 0.30 ಪೈಸೆಯಂತೆ ಪ್ರೋತ್ಸಾಹಧನ ಮತ್ತು ಕಡ್ಡಾಯ ಠೇವಣಿಯನ್ನು ಬಡ್ಡಿ ಸಹಿತ ವಿತರಿಸಲಾಗುವುದು. ಸಂಘದ ಪ್ರವರ್ತನೆಯಲ್ಲಿ 84 ಗುರುಶ್ರೀ ಸ್ವಸಹಾಯ ಸಂಘಗಳು ಕಾರ್ಯಾಚರಿಸುತ್ತಿದ್ದು ಇದರ ಸದಸ್ಯರಿಗೆ ವರದಿ ವರ್ಷದಲ್ಲಿ 6.50 ಲಕ್ಷ ರೂ.ಲಾಭಾಂಶ ವಿತರಿಸಲಾಗಿದೆ. ಸಂಘದ ನಿರ್ದೇಶಕರುಗಳು, ಸಲಹಾ ಸಮಿತಿಯ ಅಧ್ಯಕ್ಷರು, ಸದಸ್ಯರ, ನೌಕರರ, ಪಿಗ್ಮಿಸಂಗ್ರಾಹಕರ ಹಾಗೂ ಗ್ರಾಹಕರ ಸಹಕಾರದಿಂದ ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ನೈಯಲ್ಗ ಮುತ್ತಪ್ಪ ಪೂಜಾರಿ, ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯಲ್ಗ ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

92.17 ಕೋಟಿ ರೂ.,ವ್ಯವಹಾರ:
ಸಂಘಕ್ಕೆ ಆಲಂಕಾರಿನಲ್ಲಿ ಸ್ವಂತ ನಿವೇಶನದಲ್ಲಿ ಬೈದಶ್ರೀ ಸಹಕಾರ ಸೌಧ ಕಟ್ಟಡವಿದ್ದು ಈ ಕಟ್ಟಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ ಹಾಗೂ ಕೊಯಿಲದಲ್ಲಿ ಬ್ಯಾಂಕಿಂಗ್ ವ್ಯವಹಾರದ ಶಾಖೆಗಳಿವೆ. 2020-21ನೇ ಸಹಕಾರ ವರ್ಷದಲ್ಲಿ ಸಂಘವು 92.17ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿ 24.86 ಲಕ್ಷ ರೂ.,ನಿವ್ವಳ ಲಾಭಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಎ ತರಗತಿ ವರ್ಗೀಕರಣದಲ್ಲಿ ಗುರುತಿಸಿಕೊಂಡಿದೆ ಎಂದು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.