ಬಡಗನ್ನೂರುಃ ಗ್ರಾ.ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ಗ್ರಾಮಕರಣಿಕರನ್ನು ವರ್ಗಾವಣೆ ಮಾಡಿ ಖಾಯಂ ಗ್ರಾಮಕರಣಿಕರನ್ನು ನೇಮಕ ಮಾಡುವಂತೆ ತಹಶಿಲ್ದಾರರವರಿಗೆ ಬರೆದುಕೊಳ್ಳಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಸೆ 29 ರಂದು ನಡೆಯಿತು. ಬಡಗನ್ನೂರು ಗ್ರಾ.ಪಂ ನಿವೇಶನ ರಹಿತ ಕುಟುಂಬಕ್ಕೆ ನಿವೇಶನ ನೀಡುವ ಸಲುವಾಗಿ ಪಡುವನ್ನೂರು ಗ್ರಾಮದ ಕನ್ನಡ್ಕ ಪ್ರದೇಶದಲ್ಲಿ  10ಎಕ್ರೆ.25 ಸೆನ್ಸ್ ಜಾಗ ಕಾದಿರಿಸಲಾಗಿತ್ತು.ಇತ್ತೀಚೆಗೆ ವರ್ಗಾವಣೆ ಗೊಂಡು ಪಡುವನ್ನೂರು ಗ್ರಾಮದಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಕಾವಡಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಸಕ್ರಮದಲ್ಲಿ ಭೂ ಪರಿವರ್ತನೆ ಮಾಡಿಕೊಡುವ ಭರವಸೆ ನೀಡಿದ  ಘಟನೆ ಬೆಳಕಿಗೆ ಬಂದಿರುವ ಬಗ್ಗೆ   ಸದಸ್ಯರು ಸಭೆಯಲ್ಲಿ ಪ್ರಸ್ತಾಪ ಮಾಡಿದ ಬಗ್ಗೆ  ಸಭೆಯಲ್ಲಿ ಚರ್ಚ ನಡೆದು .8ವರ್ಷದ ಮೊದಲು ನಿವೇಶನಕ್ಕೆ ಕಾದಿರಿಸಿದ ಜಾಗವನ್ನು ಈತನಕ  ಬಂದ ಯಾವೊಬ್ಬ ಗ್ರಾಮಕರಣಿಕರು ಮುಟ್ಟಲು ಹೋಗಿಲ್ಲ. ಆದರೆ ಇವರು ಪಂಚಾಯತ್ ಬುಡಕ್ಕೆ ಕೈ ಹಾಕಿದ್ದಾರೆ  ಪಂಚಾಯತ್ ಆಸ್ತಿ ಕೈ ಹಾಕಿದ್ದಾರೆ ಎಂದರೆ ಇನ್ನೂ ಸಾಮಾನ್ಯ ಜನರ ಪಾಡು ಏನೂ ಎಂದು ಸದಸ್ಯ ರವಿರಾಜ ರೈ ಸಜಂಕಾಡಿ ಸಬೆಯ ಗಮನಕ್ಕೆ ತಂದರು  .ಇವರೊಂದಿಗೆ ಉಪಾಧ್ಯಕ್ಷ ಸಂತೋಷ್ ಆಳ್ವ  ಧ್ವನಿ ಗೂಡಿಸಿ  ಜನರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುವ ಅಧಿಕಾರಿಗಳಿಗೆ ನಮ್ಮ ಬೆಂಬಲ ಯಾವತ್ತೂ ಇದೆ. ಲಂಚ ಭಷ್ಟ  ಅಧಿಕಾರಿಗಳಿಗೆ ಬೆಂಬಲ ಇಲ್ಲ  ಅಂತರವನ್ನು ವರ್ಗಾವಣೆ ಅಗಬೇಕು ಎಂದ ಅವರು ಬಡಗನ್ನೂರು ಗ್ರಾಮದ ಗ್ರಾಮಕರಣಿಕರು  ಸರಿಯಾಗಿ ಕೆಲಸ ಮಾಡುತ್ತಿಲ್ಲ, ಕಛೇರಿಯಲ್ಲೂ ಸರಿಯಾದ ಅವಧಿಯಲ್ಲಿ ಸಿಗದೆ. ಇರುವಂತ ಅವಧಿಯಲ್ಲಿ.  ಯಾವುದೇ ಕೆಲಸ  ಬಗ್ಗೆ ಸರಿಯಾದ ಮಾಹಿತಿ ನೀಡದೆ  ಪದೇಪದೇ ಅದು ಬೇಕು ಇದು ಬೇಕು ಎಂದು ತಿಂಗಳು ಗಟ್ಟಲೆ ಅಲೆದಾಡಿಸುತ್ತಿದ್ದಾರೆ   ಇದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ ಈ ಬಗ್ಗೆ ಸದಸ್ಯರು ಒಮ್ಮತದಿಂದ ಪಡುವನ್ನೂರು ಗ್ರಾಮಕರಣಿ ಉಮೇಶ್ ಕಾವಡಿ ಹಾಗೂ  ಬಡಗನ್ನೂರು ಗ್ರಾಮದ ಗ್ರಾಮಕರಣಿ ಸುಮನ್ ಇವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.ಈ ಬಗ್ಗೆ ಸದಸ್ಯರ ಒಮ್ಮತದಿಂದ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ಇಬ್ಬರೂ ಮಕರಣಿಕರನ್ನು ವರ್ಗಾವಣೆ ಮಾಡಿ  ಖಾಯಂ ಗ್ರಾಮಕರಣಿಕ  ನೇಮಕ ಮಾಡುವಂತೆ   ಜಿಲ್ಲಾಧಿಕಾರಿ ಬರೆಯಲು ತೀರ್ಮಾನ ಕೈಗೊಂಡಿತು. ವೇದಿಕೆಯಲ್ಲಿ ಅಧ್ಯಕ್ಷೆ ಶ್ರೀಮತಿ ಕೆ,ಉಪಾಧ್ಯಕ್ಷ ಸಂತೋಷ್ ಆಳ್ವ, ಪಿಡಿಒ ವಸೀಮ ಗಂಧದ ಉಪಸ್ಥಿತರಿದ್ದರು.
ಸಭೆಯಲ್ಲಿ  ಸದಸ್ಯರಾದ ರವಿರಾಜ ರೈ ಸಜಂಕಾಡಿ, ವೆಂಕಟೇಶ್ ಸುಳ್ಯಪದವು,, ಪದ್ಮನಾಭ, ರವಿಂದ್ರ ಅರೆಪ್ಪಾಡಿ, ವಸಂತ ಪೆರಿಗೇರಿ,ಧರ್ಮೇಂದ್ರ ಪದಡ್ಕ, ಲಿಂಗಪ್ಪ ಮೋಡಿಕೆ, ಕಲಾವತಿ ಗೌಡ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೂಂಡೋಳೆ, ಪುಷ್ಪಲತಾ ಸವಿತಾ ನೇರೋಳ್ತಡ್ಕ ಸುಶೀಲ ಪಕ್ಕೊಡ್, ಸುಜಾತ ಮೈಂದನಡ್ಕ.ಉಪಸ್ಥಿತರಿದ್ದರು. ಗ್ರಾ.ಪಂ ಪಿಡಿಒ ವಸೀಮ ಗಂಧದ ಸ್ವಾಗತಿಸಿದರು, ಗುಮಾಸ್ತ ಜಯಾಪ್ರಸಾದ್ ರೈ ವಂದಿಸಿದರು ಸಿಬ್ಬಂದಿಗಳು ಸಹಕಾರಿಸಿದರು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ.ರವರ ಅಧ್ಯಕ್ಷತೆಯಲ್ಲಿ ನಡೆಯಿತು.
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.