ವಿಶ್ವ ಹಿರಿಯರ ದಿನಾಚರಣೆ ಪ್ರಯುಕ್ತ ಆನಂದಾಶ್ರಮ ಸೇವಾ ಟ್ರಸ್ಟ್‌ನಿಂದ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಕ್ಟೋಬರ್ ಒಂದರಂದು ವಿಶ್ವದಾದ್ಯಂತ ಆಚರಿಸುತ್ತಿರುವ ವಿಶ್ವ ಹಿರಿಯರ ದಿನದಂದು ಮುಕ್ರಂಪಾಡಿ ಆನಂದಾಶ್ರಮ ಸೇವಾ ಟ್ರಸ್ಟ್ ಸಂಸ್ಥೆಯು ಕಳೆದ 23 ವರ್ಷಗಳಿಂದ ಸಮಾಜಕ್ಕೆ ಕೊಡುಗೆಯನ್ನು ನೀಡಿದ ಹಿರಿಯ ಸೇವಾ ಸಾಧಕರನ್ನು ಗುರುತಿಸಿ ಆನಂದಾಶ್ರಮದಲ್ಲಿಯೇ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದರು. ಪ್ರಸ್ತುತ ಕೊರೋನಾ ಹಿನ್ನೆಲೆಯಲ್ಲಿ ಸಮಾರಂಭ ಏರ್ಪಡಿಸುವ ಅನುಮತಿ ಇಲ್ಲದ್ದರಿಂದ ಸನ್ಮಾನಿತ ಹಿರಿಯರನ್ನು ಕಳೆದೆರಡು ವರ್ಷಗಳಿಂದ ಗುರುತಿಸಿ ಅವರುಗಳನ್ನು ಅವರ ಮನೆಯಲ್ಲಿಯೇ ಸನ್ಮಾನಿಸುವ ಕಾರ್ಯಕ್ರಮವನ್ನು ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಗೌರಿ ಪೈರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೌರಿಸ್ ಮಸ್ಕರೇನ್ಹಸ್‌ರವರಿಗೆ ಸನ್ಮಾನ:
ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯದಲ್ಲಿದ್ದು ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಹೀಗೆ ನಾಲ್ಕು ತಾಲೂಕುಗಳಲ್ಲಿ ಉತ್ತಮ ಜನಸ್ನೇಹಿ ಉದ್ಯೋಗಿಯಾಗಿ ಹೆಸರನ್ನು ಗಳಿಸಿರುವ, ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇಲ್ಲಿನ ಇಂದಿರಾ ಕ್ಯಾಂಟೀನ್ ಬಳಿಯಲ್ಲಿನ ಸಾರಥಿ ಭವನ ಕಟ್ಟಡ ರೂವಾರಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇಲ್ಲಿನ ಪುತ್ತೂರು-ಬಪ್ಪಳಿಗೆ ರಸ್ತೆಯ ರಾಧಾಕೃಷ್ಣ ಮಂದಿರದ ಬಳಿಯ ಸರಕಾರಿ ನೌಕರರ ಸಮುದಾಯ ಭವನ ಕಟ್ಟಡದ ನಿರ್ಮಾತೃರೂ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಪ್ರಸ್ತುತ ಉಪಾಧ್ಯಕ್ಷರೂ, ಕ್ರಿಶ್ಚಿಯನ್ ಯೂನಿಯನ್ ಇದರ ಸ್ಥಾಪಕರೂ, ಪ್ರಸ್ತುತ ಅಧ್ಯಕ್ಷರೂ ಆಗಿರುವ ಮೌರಿಸ್ ಮಸ್ಕರೇನ್ಹಸ್‌ರವರು ಸಮಾಜಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈರವರ ನೇತೃತ್ವದ ತಂಡವು ಸಾಮೆತ್ತಡ್ಕದಲ್ಲಿನ ಮೌರಿಸ್ ಮಸ್ಕರೇನ್ಹಸ್‌ರವರ ಮನೆಗೆ ತೆರಳಿ ಮೌರಿಸ್ ಮಸ್ಕರೇನ್ಹಸ್‌ರವರ ತಾಯಿ ಮರಿಯ ಬೆಂಝಿನಾ ಮಸ್ಕರೇನ್ಹಸ್‌ರವರ ಸಮ್ಮುಖದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಕಾರ್ಯದರ್ಶಿ ಗೋಪಾಲಕೃಷ್ಟ ಶೆಣೈ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ರೋಶನ್ ಡಾಯಸ್, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಎಂಸಿಸಿ ಬ್ಯಾಂಕ್ ಉದ್ಯೋಗಿ ಪಾವ್ಲ್ ಮೊಂತೇರೋ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಸುರೇಶ್ ಸಾಲ್ಯಾನ್ ಸಾಮೆತ್ತಡ್ಕ, ಗುರುಪ್ರಸಾದ್ ಕಲ್ಲಾರೆ ಉಪಸ್ಥಿತರಿದ್ದರು. ಆನಂದಾಶ್ರಮ ಸೇವಾ ಟ್ರಸ್ಟ್ ಸದಸ್ಯ ಸದಾಶಿವ ಪೈ ಕಾರ್ಯಕ್ರಮ ನಿರೂಪಿಸಿದರು.

ಭಾವುಕರಾದ ಮೌರಿಸ್ ಮಸ್ಕರೇನ್ಹಸ್….
ಸನ್ಮಾನ ಸ್ವೀಕರಿಸಿದ ಮೌರಿಸ್ ಮಸ್ಕರೇನ್ಹಸ್‌ರವರು, ಜಾತಿ-ಧರ್ಮ ಮರೆತು ತನ್ನನ್ನು ಗುರುತಿಸಿ ಮನೆಗೆ ಬಂದು ಸನ್ಮಾನ ಮಾಡಿದ ಆನಂದಾಶ್ರಮ ಸೇವಾ ಟ್ರಸ್ಟ್‌ಗೆ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಒಮ್ಮೆಲೇ ಭಾವುಕರಾಗಿ ತಮ್ಮ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಗೌರಿ ಪೈರವರು, ಜಾತಿ-ಧರ್ಮ ಮನುಷ್ಯ ಮಾಡಿಕೊಂಡದ್ದು. ಈ ಭೂಮಿಯಲ್ಲಿ ಇರುವುದು ಒಂದೇ ಗಂಡು ಮತ್ತು ಹೆಣ್ಣು ಜಾತಿ ಮಾತ್ರ. ಎಲ್ಲರೂ ಒಗ್ಗಟ್ಟಾಗಿ ಬಾಳಬೇಕೆಂದು ಮಾತ್ರ ಮನುಷ್ಯ ಧರ್ಮ ಹೇಳುತ್ತದೆ ಎಂದರು. ಇದೇ ಸಂದರ್ಭದಲ್ಲಿ ಹಿರಿಯರಾದ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನ ಮಾಲಕರಾದ ವಲೇರಿಯನ್ ಡಾಯಸ್‌ರವರು ಮೌರಿಸ್‌ರವರು ಇದೇ ಮೊದಲ ಬಾರಿಗೆ ಮೌರಿಸ್‌ರವರು ಅತ್ತದ್ದು. ಇಲ್ಲಿವರೆಗೆ ಅವರು ಅತ್ತದ್ದಿಲ್ಲ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.