ಕೋಳಿಸಾಕಾಣಿಕೆದಾರರಿಗೊಂದು ಸಿಹಿ ಸುದ್ದಿ – ಅ.4 ಕರಾವಳಿ ಪೌಲ್ಟ್ರಿಫೀಡ್ಸ್ ಮತ್ತು ಫಾರ್ಮ್ಸ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಕ್ರಂಪಾಡಿಯಲ್ಲಿ ನಾಳೆ (ಅ.೪) ಸೋಮವಾರದಂದು ಕರಾವಳಿ ಪೌಲ್ಟ್ರಿಫೀಡ್ಸ್ ಮತ್ತು ಫಾಮ್ಸ್ ಶುಭಾರಂಭಗೊಳ್ಳಲಿದೆ.
ಸಯ್ಯದ್ ಅಲೀತಂಙಳ್ ಕುಂಬೋಳ್ ಉದ್ಘಾಟನೆ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಕರ್ನಾಟಕ ಸರಕರದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪುತ್ತೂರು ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್, ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಇದರ ಅಧ್ಯಕ್ಷ ಜಾನ್ ಕುಟಿನೋ, ಕಮ್ಮಾಡಿ ಪ್ಲೈವುಡ್‌ನ ಅಶ್ರಫ್ ಕಮ್ಮಾಡಿ ಭಾಗವಹಿಸಲಿದ್ದಾರೆ.

ನೂತನವಾಗಿ ಶುಭಾರಂಭಗೊಳ್ಳಲಿರುವ ಕರಾವಳಿ ಪೌಲ್ಟ್ರಿ ಫೀಡ್ಸ್ ಮತ್ತು ಫಾರ್ಮ್ಸ್‌ನಲ್ಲಿ ಕೋಳಿ ಮರಿಗಳಿಗೆ ಬೇಕಾದ ಕೋಳಿ ಆಹಾರ, ಪಿಬಿಎಸ್, ಬಿಎಸ್, ಮತ್ತು ಬಿಎಫ್ ಸೇರಿದಂತೆ ಮೂರು ಹಂತದಲ್ಲಿ ಕೊಡಲಾಗುವ ಫುಡ್,ಬ್ರಾಯ್ಲರ್ ಕೋಳಿ ಮರಿಗಳು ಲಭ್ಯವಿದೆ.
ಪುತ್ತೂರು, ಸುಳ್ಯ, ಸಂಪಾಜೆ, ಬೆಳ್ಳಾರೆ, ಕಡಬ, ಉಪ್ಪಿನಂಗಡಿ, ಬೆಳ್ತಂಗಡಿ, ಬಂಟ್ವಾಳ, ಮಾನಿ, ಕಲ್ಲಡ್ಕ, ಪಾಣಾಜೆ, ಆರ್ಲಪದವು, ಗಾಳಿಮುಖ, ಈಶ್ವರಮಂಗಲ, ಕರ್ನೂರು, ಕಬಕ, ವಿಟ್ಲ, ಕನ್ಯಾನ, ಪೆರ್ಲದವರೆಗೂ ಫೀಡ್ಸ್ ಮತ್ತು ಮರಿಗಳ ಸಾಗಾಟ ವ್ಯವಸ್ಥೆ ಇರುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ವಂತ ತಯಾರಿಕೆಯಲ್ಲಿ ಕೋಳಿ ಫೀಡ್ಸ್ ಮತ್ತು ಮರಿಗಳನ್ನು ತಯಾರು ಮಾಡಲಾಗುತ್ತದೆ. ಗ್ರಾಹಕರು ಸಹಕರಿಸುವಂತೆ ಪಾಲುದಾರರಾದ ಕೆ ಉಮ್ಮರ್, ಅಬ್ದುಲ್ ಜಬ್ಬಾರ್ ಮತ್ತು ಆಯಿಝ್ ಮೊಹಮ್ಮದ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.