ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮಹಾಸಭೆ -ವರದಿ ಸಾಲಿನಲ್ಲಿ ರೂ.71.29 ಲಕ್ಷ ಲಾಭ, ಶೇ.12 ಡಿವಿಡೆಂಡ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮಹಾಸಭೆಯು ಅ.3 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ವರದಿ ಸಾಲಿನಲ್ಲಿ ರೂ.71,29,815 ಲಾಭ ಪಡೆದಿದ್ದು, ಶೇ.12 ಡಿವಿಡೆಂಡ್ ಸದಸ್ಯರಿಗೆ ನೀಡುವುದಾಗಿ ಘೋಷಣೆ ಮಾಡಿದರು. ಸಂಘದ ನಾಲ್ಕು ಶಾಖೆಗಳಲ್ಲಿ ಸಾಧನೆ, ಸಾಲವಸೂಲಾತಿ, ಲಾಭಂಶದ ಕುರಿತು ಗುರುತಿಸಿದ ಸಂಘಕ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ‌ ಸಂಘದ‌ ನಿರ್ದೇಶಕರಾದ ಶಿವರಾಮ ಗೌಡ ಇಡ್ಯಪೆ, ನಾಗೇಶ್ ನುಳಿಯಾರು, ಸಾಂತಪ್ಪ ಗೌಡ ಪಿಜಕ್ಕಳ, ಜಿನ್ನಪ್ಪ ಗೌಡ ಮಳುವೇಲು, ನೇತ್ರಾವತಿ ಕೆ.ಪಿ.ಗೌಡ, ರೇಖಾ ರಾಘವ ಗೌಡ, ಮಂಜುನಾಥ ಎನ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಶಾಖೆಯ ಪ್ರಭಾರ ವ್ಯವಸ್ಥಾಪಕಿ ತೇಜಸ್ವಿನಿ ಮಹಾಸಭೆಯ ತಿಳುವಳಿಕೆ ಪತ್ರ ಮಂಡಿಸಿದರು. ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ರೇವತಿ ಎಚ್ 2019-20 ನೇ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಮಂಡಿಸಿದರು. ಆಲಂಕಾರು ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕ ವಿನೋದ್ ರಾಜ್ ವಾರ್ಷಿಕ ವರದಿ ಮಂಡಿಸಿದರು. ಪ್ರಧಾನ ಕಚೇರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ ಅವರು 2020-21 ನೇ ಲೆಕ್ಕಪತ್ರ ಮಂಡಿಸಿದರು. ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಶಿವಪ್ರಸಾದ್ ಅವರು 2020-21 ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಜೂರಾತಿ ಮತ್ತು ನ್ಯೂನ್ಯತೆಗಳ ಸಮಾಜಾಯಿಕೆ ವಿವರ ಮಂಡಿಸಿದರು. ಕಡಬ ಶಾಖೆಯ ವ್ಯವಸ್ಥಾಪಕ ಧರ್ಮರಾಜ್ ಕೆ ಅವರು ಅಂದಾಜು ಬಜೆಟ್ ಗಿಂತ ಜಾಸ್ತಿ ಖಾರ್ಚಾದ ಐವೇಜುಗಳ ಮಂಜೂರಾತಿ ಕುರಿತು ತಿಳಿಸಿದರು. ಕುಂಬ್ರ ಶಾಖೆಯ ವ್ಯವಸ್ಥಾಪಕ ದಿನೇಶ್ ಪಿ ಅವರು ಅಂದಾಜು‌ ಬಜೆಟ್ ಮಂಜೂರಾತಿ ಮಂಡಿಸಿದರು. ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಸ್ವಾಗತಿಸಿದರು. ಸಂಘದ ನಿರ್ದೇಶಕ ರಾಮಕೃಷ್ಣ ಗೌಡ ಕರ್ಮಲ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.