ಪೇಸ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಿರಿಯರ ಅನುಭವ, ಕಿರಿಯರ ಉತ್ಸಾಹಗಳು ಸಮ್ಮಿಳಿತವಾದಾಗ ಯಶಸ್ಸು ಖಂಡಿತಾ: ಪ್ರೊಫೆಸರ್ ಡಾ.ಬಾಬು ನಾರಾಯಣ್ ಕೆ.ಎಸ್
  • ಪೇಸ್ ನಲ್ಲಿ ಸ್ಪರ್ಧೆ ಇಲ್ಲ ಸಹಾಕಾರವಿದೆ: ಆನಂದ ಕುಮಾರ್ ಎಸ್.ಕೆ.
  • ನಾವು ಮಾಡುತ್ತಿರುವ ಸಮಾಜಮುಖಿ ಕಾರ್ಯದಿಂದಾಗಿ ಸಮಾಜ ನಮ್ಮನ್ನು ಗುರುತಿಸುವಂತಾಗಿದೆ: ರಮೇಶ್ ಭಟ್ ಎಂ.ಹೆಚ್.
  • ಅನಾರೋಗ್ಯಕರ ಸ್ಪರ್ದೆಯನ್ನು ಕಡಿಮೆಗೊಳಿಸುವುದೇ ಪೇಸ್ ನ ಮೊದಲ ಹೆಜ್ಜೆ: ರವೀಂದ್ರ ಪಿ.
  • ಹಲವರ ಪ್ರಯತ್ನದಿಂದ ಪೇಸ್ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ: ಅಕ್ಷಯ್ ಎಸ್.ಕೆ.

ಪುತ್ತೂರು: ಹಿರಿಯರ ಅನುಭವ ಮತ್ತು ಕಿರಿಯರ ಉತ್ಸಾಹಗಳು ಸಮ್ಮಿಳಿತವಾದಾಗ ಯಶಸ್ಸು ಖಂಡಿತಾ.   ಸಂಸ್ಥೆಯೊಂದರ ಯಶಸ್ಸಿನ ಗುಟ್ಟು ಅದರ ಸದಸ್ಯರಲ್ಲಿ ಅಡಗಿದೆ‌. ಪೇಸ್ ನಿಂದ ಇದೀಗಾಗಲೇ ಆಗಿರುವ ಸಮಾಜಮುಖಿ ಕಾರ್ಯಗಳು ಪ್ರಶಂಸನೀಯವಾಗಿದೆ. ಯುವ ನಾಯಕನ ಸಾರಥ್ಯದಲ್ಲಿ ಪೇಸ್ ಸಂಸ್ಥೆಯ ಕೀರ್ತಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಸುರತ್ಕಲ್ ನ ಎನ್.ಐ.ಟಿ.ಕೆಯ ಪ್ರೊಫೆಸರ್ ಡಾ.ಬಾಬು ನಾರಾಯಣ್ ಕೆ.ಎಸ್ ರವರು ಹೇಳಿದರು.

ಅವರು ಅ.2ರಂದು  ನೆಹರೂನಗರದಲ್ಲಿರುವ ಮಾಸ್ಟರ್ ಪ್ಲ್ಯಾನರಿಯ ಸರ್. ಎಂ.ವಿ. ಸಭಾಂಗಣದಲ್ಲಿ ನಡೆದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಇದೀಗ ಪೇಸ್ ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಅಕ್ಷಯ್ ನನ್ನ  ಸ್ಟುಡೆಂಟ್. ಓರ್ವ ಶಿಕ್ಷಕನಿಗೆ ತಾನು ಕಲಿಸಿದ ವಿದ್ಯಾರ್ಥಿ ಉನ್ನತ ಸ್ಥಾನಕ್ಕೇರುವಾಗ ಆಗುವ ಕುಶಿ ಬೇರೊಂದಿಲ್ಲ‌.

ಪೇಸ್ ನಡೆದು ಬಂದ ಹಾದಿ ನೋಡಿದರೆ ತುಂಬಾ ಸಂತಸವಾಗುತ್ತದೆ. ಇಂಜಿನಿಯರ್ಸ್ ಗಳೆಲ್ಲರೂ ಪೇಸ್ ನಂತಹ ಸಂಸ್ಥೆಯಿಂದಾಗಿ ಒಟ್ಟುಗೂಡಿ ಸಮಾಲೋಚನೆ ನಡಸಿ ಸಮಾಜಕ್ಕೆ ತಮ್ಮಿಂದಾದ ಕೊಡುಗೆಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಸ್ಥೆಯಲ್ಲಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಚಾಕಚಕ್ಯತೆ ಅಧ್ಯಕ್ಷರಲ್ಲಿರಬೇಕು. ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿರುವವರು ಮಾತ್ರ ಕೆಲಸ‌ಮಾಡಿದರೆ ಸಾಲದು ಪ್ರತಿಯೊಬ್ಬನೂ ಸಂಸ್ಥೆ ನಮ್ಮದೆಂಬ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ನೀವು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನಿಮ್ಮ ಉದ್ದೇಶದ ಅರಿವು ನಿಮಗಿರಬೇಕು. ಆಗ ಮಾತ್ರ ಒಂದು ಸಂಸ್ಥೆ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.

ಪೇಸ್ ನ ಗೌರವಾಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಆನಂದ ಕುಮಾರ್ ಎಸ್.ಕೆ. ಮಾತನಾಡಿ ಪೇಸ್ ಗೆ ಅದ್ಬುತ ಶಕ್ತಿ ಇದೆ. ಯಾಕೆಂದರೆ ಇದೀಗ ಅದರಲ್ಲಿ ಯಂಗ್ ಸ್ಟಾರ್ಸ್ ಗಳೆ ತುಂಬಿದ್ದಾರೆ. ಇದರಿಂದಾಗಿ ಪೇಸ್ ನ ಸ್ಟ್ರೆಂತ್ ಹೆಚ್ಚಾಗಿದೆ. ಈ ಯುವ ಶಕ್ತಿಯನ್ನು ಉಪಯೋಗಿಸುವ ಜಾಣ್ಮೆ ಹೊಸ ಅಧ್ಯಕ್ಷರಿಗೆ ಬೇಕು. ಇಂಜಿನಿಯರಿಂಗ್ ಕಲಿಯುವ ವೇಳೆ ನಾವು ಸಬ್ಜೆಕ್ಟ್  ತೆಗೆದು ಸಿವಿಲ್ ಇಂಜಿನಿಯರ್ ಗಳಾಗುತ್ತೇವೊ ಆಗಲೇ ಬದುಕಿನ ಅರ್ದ ಸಕ್ಸಸ್ ಕಂಡಂತೆ. ಸಿವಿಲ್ ಇಂಜಿನಿಯರಿಂಗ್ ಮಾಡಿದರೆ ಅದರಲ್ಲಿ ಒಳಿತುಗಳೆ ಹೆಚ್ಚು. ಸಿವಿಲ್ ಇಂಜಿನಿಯರಿಂಗ್ ಮಾಡಿದವರಿಗೆ ಜನರೊಂದಿಗೆ ಬೆರೆತುಕೊಳ್ಳುವ ಅವಕಾಶಗಳೇ ಹೆಚ್ಚು. ಭಾವನಾತ್ಮಕ ಸಂಬಂಧಗಳು ವಿಷೇಶವಾದದ್ದು, ಪೇಸ್ ನಲ್ಲಿ ಸ್ಪರ್ದೆ ಇಲ್ಲ ಸಹಾಕಾರವಿದೆ. ಕಾಂಪಿಟೇಶನ್ ಇದ್ದಲ್ಲಿ ಸಕ್ಸಸ್ ರೇಟ್ ಕಡಿಮೆ. ಕೋಪರೇಶನ್ ಇದ್ದಲ್ಲಿ ಸಕ್ಸಸ್ ರೇಟ್ ಹೆಚ್ಚು ಎಂದರು.

 ಪೇಸ್ ನ ನಿರ್ಗಮಿತ ಅಧ್ಯಕ್ಷರಾದ ರಮೇಶ್ ಭಟ್ ಎಂ.ಹೆಚ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನನ್ನ ಅವಧಿಯಲ್ಲಿ ಹಿರಿಯರ ಸಲಹೆ ಹಾಗೂ ಕಿರಿಯರ ಸಹಕಾರದಿಂದ ಹಲವಾರು ಸಮಾಜಮುಖಿ ಕಾರ್ಯವನ್ನು‌ ಮಾಡಿದ್ದೇನೆ.‌ ನಾಯಕರನ್ನು ತಯಾರು ಮಾಡುವುದೇ ಪೇಸ್ ನ ಉದ್ದೇಶ. ನಾವು ಮಾಡುತ್ತಿರುವ ಸಮಾಜಮುಖಿ ಕಾರ್ಯದಿಂದಾಗಿ ಸಮಾಜ ನಮ್ಮನ್ನು ಗುರುತಿಸುವಂತಾಗಿದೆ.  ಇದೀಗ ಯುವ ಅಧ್ಯಕ್ಷರಾಗಿ‌ ಅಕ್ಷಯ್ ರವರು ಆಯ್ಕೆಯಾಗಿದ್ದಾರೆ. ಅವರಿಂದ ಪೇಸ್ ನ ಹೆಸರು ಇನ್ನಷ್ಟು‌ ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು.

ಪೇಸ್ ನ ಮಾಜಿ‌ ಅಧ್ಯಕ್ಷರಾದ ರವೀಂದ್ರ ಪಿ.ರವರು ಮಾತನಾಡಿ ಹದಿನೇಳನೇ ಅಧ್ಯಕ್ಷರಾಗಿ  ಅಕ್ಷಯ್‌ ಎಸ್.ಕೆ. ರವರನ್ನು ಆಯ್ಕೆ ಮಾಡಿರುವುದು ಉತ್ತಮ ವಿಚಾರ. ಅನಾರೋಗ್ಯಕರ ಸ್ಪರ್ದೆಯನ್ನು ಕಡಿಮೆಗೊಳಿಸುವುದೇ ಪೇಸ್ ನ ಮೊದಲ ಹೆಜ್ಜೆ.  ಒಂದೇ ಪ್ರೊಫೆಷನ್ ರವರನ್ನು ಒಟ್ಟು ಸೇರಿಸುವುದು ಇದರ ಮೊದಲ ಉದ್ದೇಶ. ಮೊದಲ ಹೆಜ್ಜೆಯನ್ಜು ನಾವು ದಿಟ್ಟತನದಿಂದ ಇಟ್ಟಿದ್ದೇವೆ. ನಮ್ಮೊಳಗಡೆ ಸ್ಪರ್ದೆ ಇಲ್ಲ,ಪರಸ್ಪರ ಸಹಕಾರವಿದೆ. ಆದಾಯ ಹೆಚ್ಚಾದಾಗ ಸಮಾಜದಲ್ಲಿರುವವರ ನೋವಿಗೆ ಸ್ಪಂಧಿಸುವ ಕಾರ್ಯ ನಿರಂತವಾಗಿ ನಡೆಯುತ್ತಿದೆ ಎಂದರು.

ನೂತನ ಅಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ.ರವರು ಮಾತನಾಡಿ ಪೇಸ್ ಸಂಸ್ಥೆಯು ಹಲವಾರು ವರುಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪುತ್ತೂರಿನ ಇಂಜಿನಿಯರ್ ಕಮ್ಯೂನಿಟಿಯನ್ನು ಒಟ್ಟುಗೂಡಿಸುವ ಹಾಗೂ ಸಾಮಾಜಿಕ‌ ಕ್ಷೇತ್ರದಲ್ಲಿರುವ  ಸಮಸ್ಯೆಗಳಿಗೆ ಇಂಜಿನಿಯರ್ ಗಳಿಂದ ಆಗುವ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಬಹಳಷ್ಟು ಮಟ್ಟಿನಲ್ಲಿ ಯಶಸ್ಸಾಗಿದೆ. ಎಲ್ಲಾ ಇಂಜಿನಿಯರ್ ಗಳು ಪ್ರತಿಸ್ಪರ್ದಿಯಾಗುವ ಬದಲು ಎಲ್ಲರನ್ನೂ ಸ್ನೇಹಿತರನ್ನಾಗಿ ಮಾಡುವ ಪ್ರಯತ್ನ‌ ಪೇಸ್ ನಿಂದ ಆಗಿದೆ. ಹಲವಾರು ವರುಷಗಳಿಂದ ಹಲವಾರು ಅಧ್ಯಕ್ಷರುಗಳ ಪ್ರಯತ್ನದಿಂದಾಗಿ ಪೇಸ್ ಅತ್ಯುನ್ನತ ಸ್ಥಾನ‌ತಲುಪಿದೆ.ಹಿಂದಿನ ಆಡಳಿತ ಮಂಡಳಿಯವರ ಸಹಿತ ಸರ್ವ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಪೇಸ್ ಅನ್ನು ಮುನ್ಮಡೆಸುತ್ತೇನೆ. ಹಲವರು ಹಿರಿಯರಿದ್ದರು ಕಿರಿಯ ವಯಸ್ಸಿನ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ. ಪೇಸ್ ಸಂಸ್ಥೆಯ ಒಳಿತಿಗಾಗಿ ಶಕ್ತಿಮೀರಿ ಕೆಲಸ‌ಮಾಡುವೆ ಎಂದರು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಆದ ವಿದ್ಯಾರ್ಥಿಗಳಿಗೆ ಸಿವಿಲ್ ಇಂಜಿನಿಯರ್ ಬಗ್ಗೆ ಮಾಹಿತಿ ನೀಡುವುದು. ವಾರದ ಮೀಟಿಂಗ್ ನಲ್ಲಿ ಸದಸ್ಯರಿಂದ ಸಲಹೆಗಳನ್ನು‌ಪಡೆದು ಅದನ್ನು ಕಾರ್ಯರೂಪಕ್ಕೆ ತರುವುದು. ಇತರ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನವರೊಂದಿಗೆ ಜಂಟಿ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳುವುದು ಹಾಗೂ ಈ ವರೆಗಿನ ಅಧ್ಯಕ್ಷರುಗಳು ನಡೆಸಿದ ಕೆಲಸ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದು ಇಷ್ಟು‌ಮಾತ್ರವಲ್ಲದೆ ಇನ್ನೂ ಹಲವಾರು ಯೋಚನೆ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರು ತನ್ನ‌ ಅವಧಿಯಲ್ಲಿ ಸಹಕರಿಸಿದ ಪೇಸ್ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ‌ ನೀಡಿದರು. ಮಾಜಿ ಅಧ್ಯಕ್ಷರಾದ  ಪ್ರಸನ್ನ ಭಟ್ ಹಾಗೂ ಸತ್ಯನಾರಾಯಣ ಭಟ್ ಅತಿಥಿಗಳಿಗೆ ಹೂ ನೀಡಿದರು‌. ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಪುತ್ತೂರಾಯ, ಉಪಾಧ್ಯಕ್ಷ ರಾಘವೆಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸತ್ಯಗಣೇಶ್ ವಾರ್ಷಿಕ ವರದಿ ವಾಚಿಸಿದರು. ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್.ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸುರತ್ಕಲ್ ನ ಎನ್.ಐ.ಟಿ.ಕೆಯ ಪ್ರೊಫೆಸರ್ ಡಾ.ಬಾಬು ನಾರಾಯಣ್ ಕೆ.ಎಸ್. ರವರ ಪರಿಚಯ ಮಾಡಿದರು. ಪೇಸ್ ಗೆ ನೂತನ ವಾಗಿ ಸೇರಿ ಸದಸ್ಯರಾದ ಋಷಿಕೇಶ್, ಪ್ರತೀಕ್, ಪ್ರದೀಪ್ ರವರಿಗೆ ಹೂ ನೀಡಿ ಸ್ವಾಗತಿಸಲಾಯಿತು. ಸಿಂಚನ ಪ್ರಾರ್ಥಿಸಿ, ನಿರ್ಗಮಿತ ಅಧ್ಯಕ್ಷ ರಮೇಶ್ ಭಟ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ವಸಂತ ಭಟ್ ಹಾಗೂ ಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರವೀಶ್ ಎಲ್. ಆರ್. ವಂದಿಸಿದರು. ಉಪಾಧ್ಯಕ್ಷರಾದ  ಶಿವರಾಮ್ ಎಂ.ಎಸ್., ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಎ.ಎಲ್., ಕೊಶಾಧಿಕಾರಿ ಪ್ರವೀಣ್ ಆಚಾರ್ಯ, ನಿರ್ದೇಶಕರಾದ ಶಿವಪ್ರಸಾದ್ ಟಿ., ರಾಘವೆಂದ್ರ ಭಟ್, ಪ್ರಶಾಂತ್, ರಾಮ್ ಪ್ರಕಾಶ್ ಟಿ.ಎಸ್., ದಿನೇಶ್ ವಿ.ಭಟ್, ರಾಜಶೇಖರ್, ಜಯಗುರು ಆಚಾರ್ ಹೆಚ್, ಶ್ರೀಕಾಂತ್ ಕೊಳತ್ತಾಯ ರವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.