HomePage_Banner
HomePage_Banner
HomePage_Banner
HomePage_Banner

ಗುಂಪುಗಾರಿಕೆ ಮಾಡುವವರನ್ನು ಪಕ್ಷದಿಂದ ದೂರವಿಡಲಾಗುವುದು – ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಮಾರ್ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವ್ಯಕಿ ಪೂಜೆಯನ್ನು ಬಿಟ್ಟು ಪ್ರತಿಯೊಬ್ಬರು ಪಕ್ಷಪೂಜೆಯನ್ನು ಮಾತ್ರ ಮಾಡಬೇಕು. ನಾಯಕರು ಕಿತ್ತಾಟ ಮಾಡುತ್ತಾರೆ, ಒಂದಾಗುತ್ತಾರೆ. ಯಾವ ನಾಯಕ ಗುಂಪುಗಾರಿಕೆ ಮಾಡುತ್ತಾನೋ, ಅವರನ್ನು ನಾನು ದೂರವಿಡುವ ಕೆಲಸ ಮಾಡುತ್ತೇನೆ. ಸ್ವಾರ್ಥದಿಂದ ಪಕ್ಷ ಬಲಿಯಾಗಲು ಅವಕಾಶ ನೀಡುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.

ಸುಳ್ಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಅ.5ರಂದು ಆಗಮಿಸಿದ್ದ ಅವರು ಸಂಜೆ ಮಂಗಳೂರಿಗೆ ತೆರಳುವ ಮಧ್ಯೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಉಡುಪಿ, ದ.ಕ., ಉ.ಕ. ಕೊಡಗು, ಜಿಲ್ಲೆಯಲ್ಲಿ ಕಳೆದ ಬಾರಿ ಕಾರಣಾಂತರಗಳಿಂದ ನಾವು ಸೋತಿದ್ದೇವೆ. ಒಂದೊಂದು ಸೀಟ್ ಮಾತ್ರ ಬಂದಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಅಡಿಪಾಯ ಗಟ್ಟಿಯಾಗಿತ್ತು. ನಾನು ಕೆಪಿಸಿಸಿ ಅಧ್ಯಕ್ಷನಾದ ಮೇಲೆ ನನ್ನ ಕಾರ್ಯಶೈಲಿಯನ್ನು ನೀವು ನೋಡುತ್ತಿರಬಹುದು. ತಳಮಟ್ಟದ ಕಾರ್ಯಕರ್ತನಿಂದ ಬೆಳೆದು ಇಂದು ಅಧ್ಯಕ್ಷನ ಸ್ಥಾನದಲ್ಲಿ ಕೂತಿದ್ದೇನೆ. ಎಲ್ಲಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಗೌರವ ಕೊಡುವುದಿಲ್ಲವೋ, ಕಾರ್ಯಕರ್ತರ ಧ್ವನಿಯನ್ನು ನಾವು ಕೇಳುವುದಿಲ್ಲವೋ, ಆಗ ಮಾತ್ರ ಕಾಂಗ್ರೆಸ್ ಯಶಸ್ವಿಯಾಗಲು ಸಾಧ್ಯ, ಕಾರ್ಯಕರ್ತರ ಧ್ವನಿಯೇ ಅಧ್ಯಕ್ಷರ ಧ್ವನಿಯಾಗಬೇಕು. ಅಕ್ಟೋಬರ್ ತಿಂಗಳಿನಲ್ಲಿ ಪ್ರತೀ ಪಂಚಾಯತ್ ಮಟ್ಟದಲ್ಲೂ ಒಂದೊಂದು ಸಭೆಯಾಗಬೇಕೆಂದು ಸೂಚನೆ ನೀಡಿದ್ದೇನೆ. ಕೆಲವು ನಾಯಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕಿದೆ. ಉಳಿದ ಎಲ್ಲಾ ನಾಯಕರು ಪಂಚಾಯತ್ ಮಟ್ಟದ ಸಭೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದ ಡಿಕೆಶಿಯವರು ಕಾಂಗ್ರೆಸ್ ಕಚೇರಿ ಪವಿತ್ರವಾದ ಸ್ಥಳ. ಏನೇ ಒತ್ತಡಗಳಿದ್ದರೂ ನಿಮ್ಮನ್ನೆಲ್ಲಾ ಭೇಟಿ ಮಾಡಬೇಕೆಂದು ಬಂದಿದ್ದೇನೆ. ಸುಳ್ಯದ ಜಡ್ಜ್ ಸಾಕ್ಷಿ ಸಮನ್ಸ್ ನೀಡಿದ್ದರು. ಕೋರ್ಟ್‌ಗೆ ಗೌರವ ನೀಡಬೇಕು ಎಂದು ಸುಳ್ಯಕ್ಕೆ ಬಂದಿದ್ದೆ. ಬಂದಿದ್ದ ವೇಳೆ ಎಲ್ಲಾ ಪ್ರಮುಖರು, ಕಾರ್ಯಕರ್ತರು ರಸ್ತೆಯುದ್ದಕ್ಕೂ ಗೌರವ ತೋರಿಸಿದ್ದಾರೆ.

 


ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ:
ಇಂದು ವಿರೋಧಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷದ ವೈಫಲ್ಯಗಳನ್ನು ಬಹಳಷ್ಟು ಗಮನಿಸಿದ್ದೇವೆ. ಅಧಿಕಾರ ಸಿಕ್ಕರೂ ಆಡಳಿತ ಮಾಡುದಷ್ಟು ಅರ್ಹತೆ, ಅನುಭವ ಅವರಲ್ಲಿ ಕಾಣುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಅಗಿರುವ ಬದಲಾವಣೆಗಳನ್ನು ತಾವು ಗಮನಿಸಿದ್ದೀರಿ. ಉತ್ತಮವಾಗಿ ಆಡಳಿತ ಮಾಡಿದ್ದಿದ್ದರೆ ಯಾರನ್ನೂ ಬದಲಿಸಲು ಹೋಗುತ್ತಿರಲಿಲ್ಲ. ನಾವು ಸೋತಿದ್ದೇವೆ. ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಬೇಡಿ. ಬೂತ್‌ನ ಪ್ರತೀ ಮನೆ ಮನೆಗೆ ಕಾರ್ಯಕರ್ತರು ಹೋಗಿ ಅವರ ಮನಸಲ್ಲಿ ಕಾಂಗ್ರೆಸ್ ಇರುವಂತೆ ಮಾಡಿ. ಪಕ್ಷ ಮುಂದೊಂದು ದಿನ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತದೆ. ನಾನು ಅನೇಕ ಸರ್ವೇಗಳನ್ನು ಮಾಡಿಸಿದ್ದೇನೆ. ಯಾರ ಮೇಲೂ ಆಧಾರಿತವಾಗದೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಸರ್ವೇಗಳು ಹೇಳಿವೆ ಎಂದು ಅವರು ಹೇಳಿದರು.

 

 


ಮಹಾಲಿಂಗೇಶ್ವರ ಅನುಗ್ರಹದಿಂದ ಕ್ಷೇತ್ರದಲ್ಲಿ ನಮ್ಮ ಧ್ವಜ ಹಾರಲಿ:
ಸುಬ್ರಹ್ಮಣ್ಯದಿಂದ ಪ್ರಸಾದ ಪಡೆದುಕೊಂಡು ಬಂದು ಮೊದಲ ಸಭೆಯನ್ನು ಇಲ್ಲಿ ಮಾಡಿದ್ದೇನೆ. ಅದು ನಮ್ಮ ದೇವಸ್ಥಾನ, ಇದೂ ನಮ್ಮ ದೇವಸ್ಥಾನ. ಕಾರ್ಯಕರ್ತರಿಗೆ ಪಕ್ಷದ ಕಚೇರಿ ದೇವಸ್ಥಾನವಾದರೆ ನಮ್ಮ ಧರ್ಮಕ್ಕೆ ಅದು ದೇವಸ್ಥಾನ. ಮುಂದಿನ ದಿನಗಳಲ್ಲಿ ತಾಲೂಕಿಗೆ ಬಂದು ಬೃಹತ್ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲಿ ನಿಮಗೆ ಸಂಘಟನೆಗೆ ಶಕ್ತಿ ನೀಡುತ್ತೇನೆ ಎಂದು ಭರವಸೆ ನೀಡಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ಡಿಕೆ ಶಿವಕುಮಾರ್ ಅವರಿಗೆ ಸ್ಮರಣಿಕೆಯಾಗಿ ನೀಡಿದರು. ಇದನ್ನು ಸ್ವೀಕರಿಸಿ ಮಾತನಾಡಿದ ಡಿಕೆಶಿ, ಹಿಂದೂ ಧರ್ಮದಲ್ಲಿ ಎಲ್ಲ ದೇವರಿಗಿಂತ ದೊಡ್ಡ ದೇವರು ಈಶ್ವರ. ಮಹಾಲಿಂಗೇಶ್ವರನ ಕ್ಷೇತ್ರ ಬಹಳ ಪವಿತ್ರವಾದ ಜಾಗ. ಮುಂದೊಂದು ದಿನ ಮಹಾಲಿಂಗೇಶ್ವರನ ಅನುಗ್ರಹದಿಂದ ನಮ್ಮ ಪಕ್ಷದ ಧ್ವಜ ಈ ಕ್ಷೇತ್ರದಲ್ಲಿ ಹಾರಲಿ ಎಂದು ಹೇಳಿದರು.

ಪುತ್ತೂರಿಗೆ ಆಗಮಿಸಿದ ಡಿ.ಕೆ ಶಿವಕುಮಾರ್‌ರವರನ್ನು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಭರ್ಜರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಜಿ.ಪಂ ಮಾಜಿ ಸದಸ್ಯ ಅನಿತಾ ಹೇಮನಾಥ ಶೆಟ್ಟಿ ಮೊದಲಾದವರು ಡಿ.ಕೆ ಶಿವಕುಮಾರ್‌ರವರನ್ನು ಶಾಲು ಹಾರ ಹಾಕಿ ಸ್ವಾಗತಿಸಿದರು

ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ನಗರ ಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ನಗರ ಸಭಾ ಸದಸ್ಯ ರಾಬಿನ್ ತಾವ್ರೋ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಸಂಚಾಲಕ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕಾಂಗ್ರೆಸ್ ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಮಹಾಬಲ ರೈ ವಲತ್ತಡ್ಕ, ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ, ನರಿಮೊಗರು ಗ್ರಾ.ಪಂ ಸದಸ್ಯ ಹೊನ್ನಪ್ಪ ಪೂಜಾರಿ ಕೈಂದಾಡಿ, ಮುಂಡೂರು ಗ್ರಾ.ಪಂಸದಸ್ಯ ಕಮಲೇಶ್, ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರು, ಶರೂನ್ ಸಿಕ್ವೇರಾ, ಯುವ ಕಾಂಗ್ರೆಸ್ ಕಾರ್ಯದರ್ಶಿ ಹನೀಪ್ ಪುಣ್ಚತ್ತಾರು ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.