ನೆಲ್ಯಾಡಿ ಪರಿಸರದಲ್ಲಿ ಭಾರೀ ಗಾಳಿ ಮಳೆ ಅಂಗಡಿಗಳಿಗೆ ನುಗ್ಗಿದ ನೀರು; ಚರ್ಚ್‌ನ ತಡೆಗೋಡೆ ಕುಸಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಅ.5ರಂದು ಸಂಜೆ ನೆಲ್ಯಾಡಿ ಪರಿಸರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಮಳೆ ನೀರು ಅಂಗಡಿಗಳಿಗೆ ನುಗ್ಗಿದೆ. ನೆಲ್ಯಾಡಿಯ ಚರ್ಚ್‌ವೊಂದರ ತಡೆಗೋಡೆ ಕುಸಿತಗೊಂಡಿದ್ದು ಹಲವೆಡೆ ತೋಟ, ಗದ್ದೆಗಳಿಗೂ ನೀರು ನುಗ್ಗಿ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.


ನೆಲ್ಯಾಡಿ ಪರಿಸರದಲ್ಲಿ ಸಂಜೆ ಸುಮಾರು 1 ತಾಸಿಗೂ ಹೆಚ್ಚು ಕಾಲ ಗುಡುಗು ಸಹಿತ ಭಾರೀ ಮಳೆಯಾಗಿದೆ. ಹೆದ್ದಾರಿ ಬದಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಮಳೆನೀರು ರಸ್ತೆಯಲ್ಲಿಯೇ ಹರಿದು ಹೋಗಿರುವುದು ಕಂಡುಬಂದಿದೆ. ಅಲ್ಲದೇ ತಗ್ಗುಪ್ರದೇಶದಲ್ಲಿನ ಅಂಗಡಿಗಳಿಗೂ ನೀರು ನುಗ್ಗಿರುವುದಾಗಿ ವರದಿಯಾಗಿದೆ. ನೆಲ್ಯಾಡಿ ಪೂಜಾ ಟವರ್‍ಸ್‌ನ ನೆಲ ಮಹಡಿಯಲ್ಲಿರುವ ದತ್ತಕೃಪಾ ಜನರಲ್ ಸ್ಟೋರ್‍ಸ್, ಮಿತ್ರ ಫ್ಯಾಷನ್ ಮಾರ್ಟ್, ನೀತಿ ಎಲೆಕ್ಟ್ರಿಕಲ್ಸ್, ಶ್ರೀ ಗಣೇಶ್ ಆಯಿಲ್‌ಮಿಲ್‌ಗೆ ಮಳೆ ನೀರು ನುಗ್ಗಿದ್ದು ಅಕ್ಕಿ, ಬಟ್ಟೆ ಸೇರಿದಂತೆ ಇತರೇ ಸಾಮಾಗ್ರಿಗಳು ಒದ್ದೆಯಾಗಿದ್ದು ವರ್ತಕರಿಗೆ ಭಾರೀ ನಷ್ಟ ಉಂಟಾಗಿದೆ. ನೆಲ್ಯಾಡಿ ಪೇಟೆಯಲ್ಲಿರುವ ಸುರಕ್ಷಾ ಫ್ಯಾನ್ಸಿ, ಹೋಟೆಲ್ ಗುರುಕೃಪಾ ಸೇರಿದಂತೆ ತಗ್ಗುಪ್ರದೇಶದಲ್ಲಿನ ಅಂಗಡಿಗಳಿಗೆ ಮಳೆ ನೀರು ನುಗ್ಗಿರುವುದರಿಂದ ಮಾಲಕರಿಗೆ ನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ. ಪೇಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದಲೇ ಮಳೆ ನೀರು ಅಂಗಡಿಗಳೊಳಗೆ ನುಗ್ಗಿದೆ ಎಂಬ ಮಾತು ಕೇಳಿಬಂದಿದೆ. ಮಳೆ ನಿಂತ ಬಳಿಕ ಸ್ಥಳೀಯರ ಸಹಕಾರದಿಂದ ಅಂಗಡಿಯೊಳಗೆ ತುಂಬಿದ್ದ ನೀರು ತೆರವುಗೊಳಿಸಲಾಗಿದೆ. ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕಾರ್ಯದರ್ಶಿ ಪ್ರವೀಣ್‌ಕುಮಾರ್‌ರವರು ಮಳೆಯಿಂದ ಹಾನಿಯಾಗಿರುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಡೆಗೋಡೆ ಕುಸಿತ:
ನೆಲ್ಯಾಡಿ ಸೈಂಟ್ ಗ್ರೇಗೋರಿಯಸ್ ಆರ್ಥೋಡಕ್ಸ್ ಚರ್ಚ್‌ಗೆ ಸಂಬಂಧಪಟ್ಟ ಸ್ಮಶಾನದ ತಡೆಗೋಡೆ ಮಳೆನೀರಿನಿಂದಾಗಿ ಕುಸಿದುಬಿದ್ದಿದೆ. ಸ್ಥಳಕ್ಕೆ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌಕ್ರಾಡಿ, ಗೋಳಿತ್ತೊಟ್ಟು, ರಾಮಕುಂಜ, ಕೊಯಿಲ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ತೋಟ,ಗದ್ದೆಗಳಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ. ಹಲವೆಡೆ ಭಾರೀ ಮಳೆಯಿಂದಾಗಿ ತೋಟ, ಗದ್ದೆಗಳಿಗೂ ಮಳೆನೀರು ನುಗ್ಗಿ ವ್ಯಾಪಕ ಹಾನಿ ಸಂಭವಿಸಿರುವುದಾಗಿಯೂ ವರದಿಯಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.