ಕೊಯಿಲ ಶಾಲೆಯಲ್ಲಿ ಶ್ರಮದಾನ,ಗಾಂಧಿ ಜಯಂತಿ ,ಪುಸ್ತಕ ವಿತರಣೆ

ಬಡಗನ್ನೂರು : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೊಯಿಲ ಬಡಗನ್ನೂರುನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನವೋದಯ ಸ್ವಸಹಾಯ ಸಂಫದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಒಡಿಯೂರು ಸ್ವಸಹಾಯ ಸಂಘದ ಅಧ್ಯಕ್ಷರು ಸರ್ವ ಸದಸ್ಯರು ಶಾಲಾ ಎಸ್.ಡಿ.ಎಂ.ಸಿ. ,ಪೋಷಕರು, ಹಿರಿಯ ವಿದ್ಯಾರ್ಥಿ ಸಂಘ ಕೊಯಿಲ ಬಡಗನ್ನೂರು, ಇದರ ಸದಸ್ಯರುಗಳಾದ, ಜಯಂತಿ, ವಸಂತಿ, ಯಶೋಧ, ಚಂದ್ರಾವತಿ, ಕಮಲ, ಸುಜಾತ, ಯಶೋಧ. ಬಿ, ವಿನಯಲಕ್ಷ್ಮಿ, ನಯನ, ಗೀತಾ, ಸುಧಾ, ಅಕ್ಷಿತ, ಜಲಜ, ಹೇಮಾವತಿ, ಯಶೋಧ. ಕೆ.ಆರ್, ಲಲಿತಾ,ಶ್ರೀಮತಿ, ಶರ್ಮಿಳಾ, ಲೀಲಾವತಿ, ಮನಮೋಹನ, ಸುಂದರ, ಫ್ರೆಡ್ರಿಕ್, ನಾರಾಯಣ, ಪ್ರಸಾದ್ ರೈ, ಚಿತ್ರ, ಪುಷ್ಪಲತಾ, ರೇವತಿ, ಖದೀಜ ಅಂಗನವಾಡಿ ಕಾರ್ಯಕರ್ತೆ ಹೇಮಾವತಿ, ಸಹಾಯಕಿ ಜಲಜ ಇವರ ಕೂಡುವಿಕೆಯೊಂದಿಗೆ ಶಾಲೆಯ ಸುತ್ತಲಿನ ಪರಿಸರ ಸ್ವಚ್ಛತೆ, ಅಡಿಕೆ ತೋಟದ ಕಾಡು ಕಡಿಯುವುದು,ಅಡಿಕೆ ಹಾಗೂ ತೆಂಗಿನ ಗಿಡಗಳಿಗೆ ಗೊಬ್ಬರ ಹಾಕುವುದು,ಶಾಲಾ ಪಕ್ಕದ ಬಸ್ ತಂಗುದಾಣದ ಸ್ವಚ್ಛತೆ,ಕಾರ್ಯವನ್ನು ಮಾಡಲಾಯಿತು.

ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ನಡೆದ ಶ್ರಮಾದಾನದಲ್ಲಿ ಎಲ್ಲರೂ ಆಸಕ್ತಿಯಿಂದ ಪಾಲ್ಗೊಂಡು, ಯಶಸ್ವಿಯಾಗಿ ಗಾಂಧಿ ಜಯಂತಿಯ ಸಾರ್ಥಕತೆ ಮೆರೆದರು. ವಿದ್ಯಾರ್ಥಿಗಳ ಪೋಷಕರಿಗೆ ಪಠ್ಯ ಪುಸ್ತಕ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಂದರ ತಲೆಂಜಿ ಸರ್ವರಿಗೂ, ಗಾಂಧಿ ಜಯಂತಿಯ ಶುಭಾಶಯ ಕೋರಿ ವಂದನೆಗಳನ್ನು ಸಲ್ಲಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಗಿರೀಶ್, ಸರಳಾ, ಪೂರ್ಣಿಮಾ, ಅಡುಗೆ ಸಿಬ್ಬಂದಿಗಳಾದ ಸುಜಾತ,ವಸಂತಿ ಸಹಕರಿಸಿದರು. ನಂತರ ಮಧ್ಯಾಹ್ನ ದವರೆಗೆ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.