ಐತ್ತೂರು ನೇಲ್ಯಡ್ಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ-ಅಭಿನಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಐತ್ತೂರು ಗ್ರಾಮದ ನೇಲ್ಯಡ್ಕ ಹಿ.ಪ್ರಾ.ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಮತ್ತು ತಾ.ಪಂ. ಅನುದಾನದಿಂದ ನಿರ್ಮಿಸಲಾದ ಶಾಲಾ ಕೊಠಡಿಗೆ ಟೈಲ್ಸ್ ಅಳವಡಿಕೆ ಮತ್ತು ಕಟ್ಟಡದ ಮೇಲ್ಚಾವಣಿ ದುರಸ್ತಿಯ ಉದ್ಘಾಟನಾ ಕಾರ್ಯಕ್ರಮ ಅ.2ರಂದು ನೇಲ್ಯಡ್ಕ ಶಾಲೆಯಲ್ಲಿ ನಡೆಯಿತು.


2020-21ನೇ ಸಾಲಿನ ತಾ.ಪಂ. ಅನುದಾನದಿಂದ ತರಗತಿಗೆ ಟೈಲ್ಸ್ ಅಳವಡಿಸಿರುವುದನ್ನು ಹಾಗೂ ಶಾಲೆಯ ಮೇಲ್ಚಾವಣಿ ದುರಸ್ತಿಯನ್ನು ನಡೆಸಲಾಗಿದ್ದು ಇದರ ಉದ್ಘಾಟನೆಯನ್ನು ತಾ.ಪಂ. ಮಾಜಿ ಸದಸ್ಯೆ ಪಿ.ವೈ. ಕುಸುಮಾ ಮತ್ತು ಐತ್ತೂರು ಗ್ರಾ.ಪಂ.ಅಧ್ಯಕ್ಷೆ ಶ್ಯಾಮಲ ಅವರು ನೆರವೇರಿಸಿ, ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನಾರಾಯಣ ಶೆಟ್ಟಿ ಅತ್ಯಡ್ಕ, ಕ್ಲಸ್ಟರ್ ಮುಖ್ಯಸ್ಥ ಕುಮಾರ್ ಪಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಐತ್ತೂರು ಗ್ರಾ.ಪಂ. ಉಪಾಧ್ಯಕ್ಷ ರೋಹಿತ್, ಎಸ್.ಡಿ.ಎಂ.ಸಿ ಅಧ್ಯಕ್ಷ ದೇವಯ್ಯ, ನಿವೃತ್ತ ಶಿಕ್ಷಕ ತಮ್ಮಯ್ಯ ಗೌಡ, ಐತ್ತೂರು ಗ್ರಾ.ಪಂ. ಸದಸ್ಯರಾದ ನಾಗೇಶ್, ವತ್ಸಲ, ಉಷಾ, ಶ್ರೀ.ಕ್ಷೇ.ಧ.ಗ್ರಾ.ಯೋ. ಸೇವಾಪ್ರತಿನಿಧಿ ಸತೀಶ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಪಿ. ಜಾನ್ ಅವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ, ಜೆಮಿನಿ ಕೆ.ಟಿ. ಅವರು ಸ್ವಾಗತಿಸಿ ವಂದಿಸಿದರು. ಶಾಲಾ ಸಹ ಶಿಕ್ಷಕಿ ಸುಪ್ರೀತಾರವರು ಸಹಕರಿಸಿದ್ದಾರೆ.

ಅಭಿನಂದನಾ ಕಾರ್ಯಕ್ರಮ-ಸನ್ಮಾನ
ತಾ.ಪಂ. ಅನುದಾನವನ್ನು ನೀಡಿ ಶಾಲೆಯ ಅಭಿವೃದ್ದಿಗೆ ಸಹಕರಿಸಿದ ತಾ.ಪಂ. ಮಾಜಿ ಸದಸ್ಯೆ ಪಿ.ವೈ. ಕುಸುಮಾ ಹಾಗೂ ಕಾಮಗಾರಿಯನ್ನು ಕ್ಲಪ್ತ ಸಮಯದಲ್ಲಿ ಮುತುವರ್ಜಿಯಿಂದ ನಡೆಸಿದ ಗುತ್ತಿಗೆದಾರ ಬಾಲಚಂದ್ರ ಪಿ. ಮೈಕಾಜೆ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.