26 ವರ್ಷಗಳ ಹಿಂದಿನ ದರೋಡೆ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು

  • ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ

ಪುತ್ತೂರು: 26 ವರ್ಷಗಳ‌ ಹಿಂದೆ ಸಾಲ್ಮರ ನಿವಾಸಿ ನಿವೃತ್ತ ತಹಸಿಲ್ದಾರ್ ಲಿಂಗಪ್ಪ ಗೌಡರವರ ಮನೆಗೆ ನುಗ್ಗಿ, ದರೋಡೆ ನಡೆಸಿ ಬಂಧನಕ್ಕೊಳಗಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು, ವಿಚಾರಣೆಗೆ ಹಾಜರಾಗದೆ, ತಲೆಮರೆಸಿಕೊಂಡಾಗ ವಾರಂಟ್ ಮೂಲಕ ಪೊಲೀಸರಿಂದ ಬಂಧನಕ್ಕೊಳಗಾಗಿ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ, ಪುತ್ತೂರಿನ ನ್ಯಾಯಾಲಯವು,ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.

1995 ನೇ ಇಸವಿಯಲ್ಲಿ, ಕೇರಳ ರಾಜ್ಯದ ಎರ್ನಾಕುಲಂ ನಿವಾಸಿ, ಜೋಡ್ ಸನ್ ಎಂಬ ಆರೋಪಿ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಸಾಲ್ಮರ ಎಂಬಲ್ಲಿ ವಾಸ್ತವ್ಯವಿದ್ದ, ನಿವೃತ್ತ ತಹಸಿಲ್ದಾರ್ ಲಿಂಗಪ್ಪ ಗೌಡರವರ ಮನೆಗೆ, ನೀರು ಕೇಳುವ ನೆಪದಲ್ಲಿ ಬಂದು, ಮನೆಗೆ ನುಗ್ಗಿ, ಚೂರಿ ತೋರಿಸಿ, ಬೆದರಿಸಿ, ಲಿಂಗಪ್ಪ ಗೌಡರವರ ಪತ್ನಿಯ ಕೈಯಲ್ಲಿದ್ದ, ಚಿನ್ನದ ಬಳೆಗಳನ್ನು ಕಸಿದುಕೊಂಡು ಹೋದ ಬಗ್ಗೆ, ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಚಿನ್ನದ ಬಳೆಗಳನ್ನು ವಶಪಡಿಸಿಕೊಂಡಿದ್ದರು. ಹಲವು ತಿಂಗಳುಗಳ ನಂತರ, ಆರೋಪಿಗೆ ಉಚ್ಚ ನ್ಯಾಯಾಲದಿಂದ ಜಾಮೀನು ಮಂಜೂರು ಗೊಂಡಿತ್ತು. ಜಾಮೀನು ಪಡೆದು ಬಿಡುಗಡೆಗೊಂಡ ನಂತರ, ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ, ಆರೋಪಿಯ ವಿರುದ್ಧ ಬಂಧನದ ಆಜ್ಞೆಯನ್ನು ನ್ಯಾಯಾಲಯ ಹೊರಡಿಸಿತ್ತು.

ವಾರಂಟ್ ಆದೇಶದಂತೆ ಪೊಲೀಸರಿಗೆ ಆರೋಪಿಯ ಪತ್ತೆ ಕಾರ್ಯದಲ್ಲಿ ಆರೋಪಿ ಸಿಗದೇ ಇದ್ದುದರಿಂದ, ಹಳೆ ಪ್ರಕರಣವಾಗಿ ಮಾರ್ಪಾಡುಗೊಂಡಿತ್ತು. ಕಳೆದ ಸಪ್ಟಂಬರ್ ತಿಂಗಳು 27ರಂದು, ಆರೋಪಿಯನ್ನು ಪುತ್ತೂರು ನಗರ ಪೊಲೀಸರು, ಕೇರಳದ ಎರ್ನಾಕುಲಂನಿಂದ ಬಂದಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ, ಆರೋಪಿಯ ಬಿಡುಗಡೆಗಾಗಿ, ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ವಾದ-ವಿವಾದವನ್ನು ಆಲಿಸಿದ ನ್ಯಾಯಾಲಯವು, ಆರೋಪಿಗೆ ಷರತ್ತುಬದ್ಧ ಜಾಮೀನನ್ನು ನೀಡಿ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.