HomePage_Banner
HomePage_Banner
HomePage_Banner
HomePage_Banner

ಬಿಜೆಪಿ ಮಹಿಳಾ ಮೋರ್ಚಾದಿಂದ ಸೇವಾ, ಸಮರ್ಪಣ್ ಸಮಾರೋಪ – ಉಚಿತ ಆರೋಗ್ಯ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಮಾಜಕ್ಕೆ ಸ್ವಾಸ್ತ್ಯ ಕೊಡುವುದು ಸಂಘಟನೆಯ ಕರ್ತವ್ಯ – ಸಂಜೀವ ಮಠಂದೂರು

ಪುತ್ತೂರು: ಜನರಿಗೆ ಆರೋಗ್ಯ ಕೊಡುವುದು ನಮ್ಮ ಮೂಲ ಅವಶ್ಯಕತೆ ಯಾಕೆಂದರೆ ಕೋವಿಡ್ ಸಂದರ್ಭದಲ್ಲಿ ವೈದ್ಯರು, ಆರೋಗ್ಯ, ಆಶಾ ಕಾರ್ಯಕರ್ತೆಯರು ಜನರ ಸೇವೆ ಮಾಡಿದಾಗ ರಾಜಕೀಯ ಸಂಘಟನೆಯಾಗಿ ಸಮಾಜದ ಸ್ವಾಸ್ತ್ಯ ಕಾಪಾಡುವುದು ನಮ್ಮ ಕರ್ತವ್ಯ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ನಗರ ಮಹಿಳಾ ಮೋರ್ಚಾದ ವತಿಯಿಂದ ಅ.೮ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೇವೆ ಮತ್ತು ಸಮರ್ಪಣ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿವಯರು ೨೦ ವರ್ಷದ ಅವಧಿಯಲ್ಲಿ ಗುಜರಾತಿನಲ್ಲಿ ಮುಖ್ಯಮಂತ್ರಿ, ದೇಶದ ಪ್ರಧಾನ ಮಂತ್ರಿಯಾಗಿ ಒಂದು ದಿವಸವೂ ರಜೆ ತೆಗೆದು ಕೊಳ್ಳದೆ ದೇಶಕ್ಕಾಗಿ ದಿನದ ೧೮ ಗಂಟೆ ದುಡಿದು ಸೇವೆ ಮತ್ತು ಸಮರ್ಪಣೆಗೆ ಒಂದು ಸಾರ್ಥಕತೆಯನ್ನು ತರುವಂತಹ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ದೇಶದ ೧೩೫ ಕೋಟಿ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸೇವೆ ಮತ್ತು ಸಮರ್ಪಣೆಯ ಭಾಗವಾಗಿದೆ. ಬಿಜೆಪಿ ಆರಂಭ ಆಗಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಜಕಾರಣ ಮಾಡಲು ಜನಸಂಘವನ್ನು ಆರಂಭಿಸಿಲ್ಲ. ರಾಷ್ಟ್ರ ಸಮರ್ಪಿತ ಬದುಕಿನೆಡೆಗೆ ಹೋಗಬೇಕೆಂಬ ನಿಟ್ಟಿನಲ್ಲಿ ಒಂದಷ್ಟು ಕಾರ್ಯಕರ್ತರು ನಿರ್ಮಾಣ ಆಗಬೇಕೆಂಬ ಉದ್ದೇಶವಿಟ್ಟು ಜನಸಂಘ ಸ್ಥಾಪನೆ ಆಯಿತು. ಅಲ್ಲಿಂದ ಇಲ್ಲಿನ ತನಕ ತಮ್ಮ ಧೈಯ, ವಿಚಾರದಲ್ಲಿ ಯಾವುದೇ ವ್ಯತ್ಯಾಸ ಆಗದೆ ಬಿಜೆಪಿ ರಾಷ್ಟ್ರಕೋಸ್ಕರ ಬದುಕಗಬೇಕೆಂಬ ಸಂದೇಶ ಕಾರ್ಯಕರ್ತರಿಗೆ ನೀಡುತ್ತಿದೆ. ಇದು ಬಿಜೆಪಿ ಕಾರ್ಯಕರ್ತರ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ಎಂದರು.

20 ದಿವಸದಲ್ಲಿ ಹಲವು ಕಾರ್ಯಕ್ರಮ:
ಮಹಿಳಾ ಮೋರ್ಚಾದ ಅಧ್ಯಕ್ಷೆ ಶರಾವತಿ ರವಿನಾರಾಯಣ ಅವರು ಮಾತನಾಡಿ ಸೇವೆ ಮತ್ತು ಸಮರ್ಪಣ್ ಅಭಿಯಾನದ ಮೂಲಕ ಮಹಿಳಾ ಮೋರ್ಚಾದಿಂದ ಹಲವು ಕಾರ್ಯಕ್ರಮ ಮಾಡಿದ್ದೇವೆ. ಸಮಾರೋಪದಲ್ಲಿ ಆಯುರ್ವೇದ ವೈದ್ಯರ ಮೂಲಕ ಉಚಿತ ವೈದ್ಯಕೀಯ ತಪಾಸಣೆ ಮಾಡುತ್ತಿದ್ದೇವೆ. ಇದೇ ರೀತಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರೆಲ್ಲರೂ ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಖಾದಿ ಸೀರೆಗಳನ್ನೇ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಸಹನಾ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ತ್ರಿವೇಣಿ ಪೆರ್‍ವೋಡಿ, ಜಯಂತಿ ನಾಯಕ್, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಿತಾ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಯುವರಾಜ್ ಪೆರಿಯತ್ತೋಡಿ ಜಯಶ್ರೀ ಎಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ನಗರ ಮಹಿಳಾ ಮೋರ್ಚಾದ ಕಾರ್ಯದರ್ಶಿ ಪ್ರಭಾವತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.