ಕೆಯ್ಯೂರಿನಲ್ಲಿ ಪ್ರಖಂಡ ಸಂಚಾಲಕರಾಗಿದ್ದ ದಿ.ನಿತಿನ್ ನಿಡ್ಪಳ್ಳಿ ಇವರ ಸ್ಮರಣಾರ್ಥ ಅಂಬುಲೆನ್ಸ್ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೆಯ್ಯೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶ್ರೀ ದುರ್ಗಾಶಾಖೆ, ಕೆಯ್ಯೂರು ಇದರ ಆಶ್ರಯದಲ್ಲಿ ಪುತ್ತೂರು ಪ್ರಖಂಡ ಸಂಚಾಲಕರಾಗಿದ್ದ  ದಿ.ನಿತಿನ್ ನಿಡ್ಪಳ್ಳಿ ಇವರ ಸ್ಮರಣಾರ್ಥ ಅಂಬುಲೆನ್ಸ್ ಲೋಕರ್ಪಣೆಯು ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ಅ:7ರಂದು  ಲೋಕಾರ್ಪಣೆ ಗೊಂಡಿತು. ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ದೀಪ ಬೇಳಗಿಸಿ ತೆಂಗಿನ ಕಾಯಿ ಒಡೆಯುದರ ಮೂಲಕ ಚಾಲನೆ ನೀಡಿದರು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದಿ.ನಿತಿನ್ ನಿಡ್ಪಳ್ಳಿಯವರ ತಾಯಿ ಜಲಜಾಕ್ಷಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಭ್ಯಾಗತರಾಗಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಮಾತಾಡಿ, ನೂತನ ಆರೋಗ್ಯ ಕವಚ ಲೋಕಾರ್ಪಣೆಗೆ ಶುಭ ಹಾರೈಸಿದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಳು, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ  ಅಧ್ಯಕ್ಷ ಜನಾರ್ಧನ ಬೆಟ್ಟ, ಕೆಯ್ಯೂರು ಗ್ರಾಮ ಪಂಚಾಯತ್ ಅದ್ಯಕ್ಷೆ ಜಯಂತಿ ಎಸ್ ಭಂಡಾರಿ, ವಿಶ್ವ ಹಿಂದೂ ಪರಿಷತ್ ಕೆಯ್ಯೂರು ಶ್ರೀ ದುರ್ಗಾ ಶಾಖಾ ಅಧ್ಯಕ್ಷ ಚರಣ್ ಕುಮಾರ್ ಸಣಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜರಂಗದಳದ ಕಾರ್ಯಕರ್ತರಾದ ದಿನೇಶ ಕೆಯ್ಯೂರು, ಅಜಿತ್ ಕೆಯ್ಯೂರು, ಉದಯ ಸಣಂಗಲ, ಸಚಿನ್ ಕೆಯ್ಯೂರು, ಸುಭಾಷಿಣಿ, ಮಮತಾ ಕೆಯ್ಯೂರು, ನಿತೀನ್ ಶೆಟ್ಟಿ ಅತಿಥಿಗಳಿಗೆ ಶಾಲು ಹಾರ ಹಾಕಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ  ದಿ.ನಿತಿನ್ ನಿಡ್ಪಳ್ಳಿಯವರ ಕುಟುಂಬದ ಸದಸ್ಯರಿಗೆ ಹಾರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಲೋಕರ್ಪಣೆ ಗೊಂಡ ಅಂಬ್ಯುಲೆನ್ಸ್ ನ  ಕೀ ಯನ್ನು ಕೆಯ್ಯೂರು ಶ್ರೀ ದುರ್ಗಾ ಶಾಖಾ ಅಧ್ಯಕ್ಷ  ಚರಣ್ ಕುಮಾರ್, ಮತ್ತು ಚಾಲಕರಾದ ಅಜಿತ್ ರೈ ಕೆಯ್ಯೂರು, ದಿನೇಶ ಆಚಾರ್ಯ ಇವರಿಗೆ ವಿತರಿಸಿದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ಸತ್ಸಂಗ ಪ್ರಮುಖ್ ರವಿಕುಮಾರ್ ಕೈತ್ತಡ್ಕ ಸ್ವಾಗತಿಸಿ,  ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿ, ಮಾತೃ ಶಕ್ತಿ ಪ್ರಮುಖ್ ಚಂದ್ರವಾತಿ ರೈ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.