ವಿಟ್ಲ ಮೇಗಿನಪೇಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಮಳಿಗೆ ‘ವೆಸ್ಟ್ ಕೋಸ್ಟ್ ಹೀರೋ’ ಶುಭಾರಂಭ

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿ ಅ.9ರಂದು ಹೀರೋ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟ ಮಳಿಗೆ ವೆಸ್ಟ್ ಕೋಸ್ಟ್ ಹೀರೋ ಶುಭಾರಂಭಗೊಂಡಿತು. ಸಂಸ್ಥೆಯನ್ನು ವಿಟ್ಲ ಠಾಣಾ ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ ಉದ್ಘಾಟಿಸಿ, ಪ್ರಥಮ ಗ್ರಾಹಕರಾದ ಬಶೀರ್ ಸಾಲೆತ್ತೂರು, ವಸಂತ ಆಚಾರ್ಯ, ತೌಹೀದ್ ಅರ್ಕೆಚ್ಚಾರು ರವರಿಗೆ ಹೊಸ ವಾಹನದ ಕೀ ಯನ್ನು ಹಸ್ತಾಂತರ ಮಾಡಿದರು. ಅತಿಥಿಯಾಗಿ ಬಿಜೆಪಿ ಮುಖಂಡ ದಿನೇಶ್ ಅಮ್ಟೂರುರವರು ಆಗಮಿಸಿ ಶುಭಹಾರೈಸಿದರು.


ಸಂಸ್ಥೆಯ ಮಾಲಕರಾದ ಮಹಮ್ಮದ್ ರಫೀಕ್ ಸ್ವಾಗತಿಸಿ ಮಾತನಾಡಿ 2006ರಲಿ ಮಂಗಳೂರಿನಲ್ಲಿ ವೆಸ್ಟ್ ಕೋಸ್ಟ್ ಹೀರೋ ಆರಂಭವಾಯಿತು. ಆಬಳಿಕ ಮುಡಿಪು, ಸುರತ್ಕಲ್ ನಲ್ಲಿ ಸಹಸಂಸ್ಥೆಗಳು ಆರಂಭಿಸಲಾಗಿದೆ. ಇದೀಗ ಈ ಭಾಗದ ಜನರಿಗೆ ಸಹಕಾರಿಯಾಗಲೆಂದು ವಿಟ್ಲದಲ್ಲಿ ನೂತನ ಶಾಖೆಯನ್ನು ತೆರೆದಿದ್ದೇವೆ. ಉಜಿರೆ, ಮಡಂತ್ಯಾರ್, ಬಿಸಿರೋಡ್, ತೊಕ್ಕೊಟ್ಟು ಹಾಗೂ ಕಾರ್ಕಳದಲ್ಲಿ ನಮ್ಮ ಸಬ್ ಡೀಲರ್ ಗಳು ಸೇವೆಯನ್ನು ನೀಡುತ್ತಿದ್ದಾರೆ. ಜನರು ಸಹಕಾರ ನೀಡುತ್ತಾರೆ ಎನ್ನುವ ಭರವಸೆ ನಮಗಿದೆ ಎಂದರು. ಜನರಲ್ ಮ್ಯಾನೇಜರ್ ಸಂದೀಪ್ ರವರು ಮಾತನಾಡಿ ಕೇವಲ 1999ರೂಪಾಯಿ ಮುಂಗಡ ಪಾವತಿ ಮಾಡಿ ಸ್ಪ್ಲೆಂಡರ್ ಹಾಗೂ ಪ್ಲಝರ್ ಬೈಕನ್ನು ಕೊಳ್ಳಬಹುದಾಗಿದೆ. ಪ್ರತೀ ಖರೀದಿಗೆ ಹೆಲ್ಮೆಟ್ ಹಾಗೂ 5ಲೀಟರ್ ಪೆಟ್ರೋಲ್ ಉಚಿತವಾಗಿದೆ. ಕಡಿಮೆ ದಾಖಲೆಪತ್ರಗಳೊಂದಿಗೆ ಕಡಿಮೆ ಬಡ್ಡಿದರದಲ್ಲಿ ಸ್ಥಳದಲ್ಲೇ ಸಾಲಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಸೇಲ್ಸ್, ಸರ್ವೀಸ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7829788188 ಯನ್ನು ಸಂಪರ್ಕಿಸಬಹುದು ಎಂದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.