ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಟ್ಟು ವ್ಯವಹಾರ ರೂ 11,13,52,546.54 ನಿವ್ವಳ ಲಾಭ 7,11,149.76

ಆಲಂಕಾರು : ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ 2020 – 21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಯಸ್. ರಾಮಣ್ಣ ಗೌಡ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘವು 2020 – 21 ನೇ ಸಾಲಿನಲ್ಲಿ ಸಂಘವು ಒಟ್ಟುರೂ 11,13,52,546.54 ರೂಪಾಯಿಗಳ ವ್ಯವಹಾರ ನಡೆಸಿ ರೂ 7,11,149.76 ನಿವ್ವಳ ಲಾಭ ಗಳಿಸಿದ್ದು ಲಾಭಾಂಶ ದಲ್ಲಿ ಸಂಘದ ಸದಸ್ಯರಿಗೆ ಶೇ.10% ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು. ದ.ಕ ಹಾಲು ಒಕ್ಕೋಟದ ವಿಸ್ತರಣಾಧಿಕಾರಿ ಯುಮನಾರವರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕರು ಡಾ.ಸತೀಶ್ ರಾವ್ ರವರು ಜಾನುವಾರುಗಳಿಗೆ ಹರಡುವ ಸಾಂಕ್ರಮಿಕ ರೋಗ, ನಿರ್ವಹಣೆ, ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಒಂದು ಲಕ್ಷಕಿಂತ ಮೇಲ್ಪಟ್ಟು ಮೊತ್ತದ ಹಾಲು ಪೊರೈಕೆ ಮಾಡಿದ ಸಂಘದ 70 ಮಂದಿ ಸದಸ್ಯರಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು


ವೇದಿಕೆಯಲ್ಲಿ ಸಂಘದ ಉಫಾಧ್ಯಕ್ಷ ಪರಮೇಶ್ವರ ಗೌಡ ನಿರ್ದೇಶಕರುಗಳಾದ ಮಾಧವ ಪೂಜಾರಿ ಕಯ್ಯಪೆ, ನಾಗೇಶ ಗೌಡ ಕಣಿಯ, ಹರೀಶ ಗೌಡ ಏಂತಡ್ಕ, ಮಾಯಿಲಪ್ಪ ಗೌಡ ಶರವೂರು, ಜನಾರ್ಧನ ಭಂಡಾರಿ, ಕರಿಯ ಮುಗೇರ ಕೇಪುಳು, ದೇವಕಿ ರೈ ಮನವಳಿಕೆ, ಪ್ರೇಮಲತಾ ಆಲಡ್ಕ, ಸರಸ್ವತಿ ಸುರುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು  ಸಂಘದ ಅಧ್ಯಕ್ಷ ಎಸ್.ರಾಮಣ್ಣ ಗೌಡ ಸ್ವಾಗತಿಸಿ, ನಿರ್ದೇಶಕ ಸಂತೋಷ ರೈಮನವಳಿಕೆ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಗಣೇಶ್ ರೈ ವರದಿ ವಾಚಿಸಿ ಹಾಗು ಲೆಕ್ಕ ಪತ್ರ ಮಂಡಿಸಿ ನಿರ್ದೇಶಕ ರಾಧಾಕೃಷ್ಣ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು. ಸಂಘದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ವಿವಿಧ ಸಲಹೆ ಸೂಚನೆ ನೀಡಿದರು. ಸಿಬ್ಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.