ಕೊಂಬೆಟ್ಟು ಅಟಲ್ ಗಾರ್ಡನ್ ಅಶ್ವತ್ಥಕಟ್ಟೆಯಲ್ಲಿ ನವರಾತ್ರಿ ಭಜನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಭಜನೆಯಿದ್ದಲ್ಲಿ ವಿಭಜನೆಯಿಲ್ಲ, ಭಗವಂತನ ಸಾಕ್ಷಾತ್ಕಾರ – ಪ್ರೇಮಲತಾ ರಾವ್

ಪುತ್ತೂರು: ಭಜನೆಯಿಂದಲೇ ಮಾತ್ರ ಭಗವಂತನ ಸಾಕ್ಷಾತ್ಕಾರ ಆಗುತ್ತದೆ ಹಾಗಾಗಿ ಭಜನೆ ಇದ್ದಲ್ಲಿ ವಿಭನೆಯಂತು ಕಂಡಿತಾ ಆಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ ಕಾಲದಲ್ಲಿ ಸಾಮೂಹಿಕ ಭಜನೆ ಬಹುತೇಕ ಕಡೆಯಲ್ಲಿ ನಡೆಯುತ್ತದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷೆ ಪ್ರೇಮಲತಾ ರಾವ್ ಹೇಳಿದರು.
ಕೊಂಬೆಟ್ಟು ಅಟಲ್ ಗಾರ್ಡನ್‌ನ ಅಶ್ವತ್ಥಕಟ್ಟೆಯಲ್ಲಿ ನವರಾತ್ರಿ ಅಂಗವಾಗಿ ಪ್ರಾರಂಭಗೊಂಡ ಭಜನಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಡಾ.ಡಿ ವಿರೇಂದ್ರ ಹೆಗ್ಡೆಯವರ ಮುತುವರ್ಜಿಯಲ್ಲಿ ಧರ್ಮಸ್ಥಳಧ ಭಜನಾ ಕಮ್ಮಟ ಮತ್ತು ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರು ಭಜನೆಗೆ ಹೆಚ್ಚು ಒತ್ತು ಕೊಟ್ಟ ಕಾರಣ ಈಗ ಎಲ್ಲಾ ಕಡೆಯಲ್ಲಿ ಭಜನೆಯ ಮಹತ್ವ ಅರಿಯಲಾಗಿದೆ. ಮನೆ ಮನೆಯಲ್ಲೂ ಭಜನೆ ನಡೆದಾಗ ಮಕ್ಕಳಲ್ಲಿ ಸಂಸ್ಕಾರಯುತ ಜ್ಞಾನ ಬೆಳೆಯುತ್ತದೆ ಎಂದರು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಮತ್ತು ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಕಲಿಯುಗದಲ್ಲಿ ದೇವರ ನಾಮಸ್ಮರಣೆ ಭಜನೆಯ ಮೂಲಕ ಭಗವಂತ ಒಲಿಯುತ್ತಾನೆ ಎಂದಿದೆ. ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಧಾರ್ಮಿಕ ಶಿಕ್ಷಣಕ್ಕೆ ಸಾರ್ವಜನಿಕ ನೆಲೆಯಲ್ಲಿ ಕೊಂಬೆಟ್ಟಿನಲ್ಲಿ ನಡೆಯುವ ಭಜನೆ ಕಾರ್ಯಕ್ರಮ ಪೂರಕವಾಗಿದ ಎಂದರು. ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಕೊಂಬೆಟ್ಟು ಬಿಜೆಪಿ ವಾರ್ಡ್ ಕಾರ್ಯದರ್ಶಿ ನವೀನ್ ಪಡಿವಾಳ್, ಸ್ಮೀತ ಗಣೇಶ್ ಬಾಳಿಗ, ಶಿಕ್ಷಕಿ ಶ್ರೀವಿದ್ಯಾ, ವೈಷ್ಣವಿ ಜೆ.ರಾವ್, ರಾಮಚಂದ್ರ ಘಾಟೆ, ಶ್ರೀಕೃಷ್ಣ, ಗಣೇಶ್ ಬಾಳಿಗ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಭಜನಾ ಕಾರ್ಯಕ್ರಮನಡೆಯಿತು.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.