ಪ್ರಜ್ಞಾ ಆಶ್ರಮದಲ್ಲಿ ಅಜ್ಜನ ಮಾಯೆ ಕಿರುಚಿತ್ರದ ಸಂಭ್ರಮಾಚರಣೆ

ಪುತ್ತೂರು : ಯೂಟ್ಯೂಬ್‌ನಲ್ಲಿ ಭರ್ಜರಿ ಯಶಸ್ವಿ ಕಂಡು ಜನಮನ್ನಣೆ ಗಳಿಸಿದ ಈ ವರ್ಷದ ಸೂಪರ್ ಹಿಟ್ ಕಿರುಚಿತ್ರ ಅಜ್ಜನ ಮಾಯೆಯ ಒಂದು ಲಕ್ಷಕ್ಕಿಂತಲೂ ಅಧಿಕ ಜನರ ವೀಕ್ಷಣೆಯ ಸಂಭ್ರಮಾಚರಣೆಯನ್ನು Inspire Films  ತಂಡ ಪ್ರಜ್ಞಾ ಆಶ್ರಮದಲ್ಲಿ ಆಯೋಜಿಸಿತು. ತಂಡದ ಹಿರಿಯ ಕಲಾವಿದ ಡಿ.ಕೆ. ಶೇಷಪ್ಪ ಪೂಜಾರಿ ಮಾತನಾಡಿ ಇಲ್ಲಿ ನಾವೆಲ್ಲಾ ಸೇರಿರುವುದು ನಮ್ಮೆಲ್ಲರ ಸುಯೋಗ ಎಂದು ಹೇಳಿದರು. ಕಲಾವಿದ ಹರೀಶ್ ಆಲಂಗಾಜೆ ಮಾತನಾಡಿ ಇದೊಂದು ಪುಣ್ಯ ಕ್ಷೇತ್ರ ಇಲ್ಲಿ ಈ ಸಂಭ್ರಮಾಚರಣೆಯನ್ನು ಆಚರಿಸುವುದು ಖುಷಿಯ ವಿಷಯ ಎಂದು ಹೇಳಿದರು. ತಂಡದ ನಿರ್ದೇಶಕ ರವಿಚಂದ್ರ ರೈ ಮಾತನಾಡಿ ಈ ಗೆಲುವು ಜನರ ಗೆಲುವು ಸಮಾಜದಿಂದ ಪಡೆದು ಸಮಾಜಕ್ಕೆ ನೀಡುವ ಉದ್ದೇಶದಿಂದ ಈ ಸಂಭ್ರಮವನ್ನು ಇಲ್ಲಿ ಆಚರಿಸಲು ನಿರ್ಧರಿಸಿದೆವು ಎಂದು ಹೇಳಿದರು. ಪ್ರಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪ ಮಾತನಾಡಿ ತಂಡಕ್ಕೆ ಶುಭ ಹಾರೈಸಿದರು.

ತಂಡದ ಸದಸ್ಯ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ ಮಾತನಾಡಿ ಆಶ್ರಮವನ್ನು ನಿರ್ವಹಿಸುತ್ತಿರುವ ಅಣ್ಣಪ್ಪ ಹಾಗು ಜ್ಯೋತಿ ದಂಪತಿಗಳ ಕಾರ್ಯ ವೈಖರಿಯ ಬಗ್ಗೆ ಶ್ಲಾಘಿಸಿದರು.

ತಂಡದ ಸದಸ್ಯರಾದ ವೆಂಕಪ್ಪ ಬರೆಪ್ಪಾಡಿ, ಪ್ರವೀಣ್ ಮುಲಾರ್, ರಿತೇಶ್ ಕೆಮ್ಮಾಯಿ, ಗಣೇಶ್ ಹೆಗ್ಡೆ ನಾರಾವಿ, ಜಗದೀಶ್ ಶೆಟ್ಟಿ ಕೆರೆಮೂಲೆ, ಚೇತನ್ ಮೊಟ್ಟೆತಡ್ಕ, ಅನುಪ್ತ ರವಿಚಂದ್ರ ರೈ ಶಿವಾನಿ, ಪೂಜಾ, ಸಂಪ್ರೀತ, ಸನ್ವಿತಾ, ಆಶ್ರಮದ ಸದಸ್ಯರು ಹಾಗು ಮುಖ್ಯಸ್ಥರಾದ ಅಣ್ಣಪ್ಪ, ಜ್ಯೋತಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.