ಪುತ್ತೂರು: ದೇಶದ ಅತ್ಯುನ್ನತ ರಿಯಲ್ ಎಸ್ಟೇಟ್ ಕಂಪೆನಿಯಾದ ಶೋಭಾ ಲಿಮಿಟೆಡ್ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಕ್ಲಸ್ಟರ್ ಹೆಡ್ ಆಗಿ ನೆಟ್ಟಾಳ ಪ್ರಶಾಂತ್ ಕುಮಾರ್ ರೈಯವರು ಭಡ್ತಿ ಹೊಂದಿದ್ದಾರೆ.
ಕೆಯ್ಯೂರು ಗ್ರಾಮದ ಮಾಡಾವು ನೆಟ್ಟಾಳ ನಿವಾಸಿಯಾಗಿದ್ದ ಇವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು ಶೋಭಾ ಲಿಮಿಟೆಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಪ್ರಶಾಂತ್ ರೈಯವರು ಆನಾಜೆ ಸೀತಾರತ್ನ ರೈ ಮತ್ತು ನೆಟ್ಟಾಳ ಬಾಲಕೃಷ್ಣ ರೈಯವರ ಪುತ್ರರಾಗಿದ್ದಾರೆ.