ಕ್ಯೂ ಟು ಕನ್ ಸ್ಟ್ರಕ್ಷನ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪಾಲುದಾರರು ಒಳ್ಳೇಯ ಗುತ್ತಿಗೆದಾರಲ್ಲದೇ ,ಉತ್ತಮ ವ್ಯಕಿಗಳೂ -ಶ್ರೀ ಕಾಂತ್ ಶೆಣೈ

ಪುತ್ತೂರು ; ಸುಂದರವಾದ ಕನಸಿನ ಮನೆ ಹಾಗೂ ಕಟ್ಟಡ ನಿರ್ಮಾಣವನ್ನೂ ಸ್ಪರ್ದಾತ್ಮಕ ದರ ಹಾಗೂ ಹೆಚ್ಚು ಗುಣಮಟ್ಟದೊಂದಿಗೆ ನಿರ್ಮಿಸಿ ಕೊಡುವಲ್ಲಿ , ಸುದೀರ್ಘ ಅನುಭವದೊಡನೆ ಸುಮಾರು 5 ವರುಷಗಳಿಂದ ತನ್ನದೇ ಕಛೇರಿ ಹೊಂದಿ, ನಿರ್ಮಾಣ ಕಾರ್ಯದಲ್ಲಿ ಜನತೆಯ ನಂಬಿಕೆ ಜೊತೆಗೆ ವಿಶ್ವಾಸ ಗಳಿಸಿಕೊಂಡಿರವ ಬೊಳ್ವಾರು ಸಿಟಿ ಸೆಂಟರ್ ಇದರ ಮೊದಲ ಮಹಡಿಯಲ್ಲಿ ಕಾರ್ಯಚರಿಸುತ್ತಿದ್ದ ಕ್ಯೂ ಟು ಕನ್ ಸ್ಟ್ರಕ್ಷನ್ ಸ್ಥಳಾಂತರಗೊಂಡು ಅ.11 ರಂದು ಬೊಳ್ವಾರು ಶ್ರೀ ದುರ್ಗಾ ಕಾಂಪ್ಲೆಕ್ಸ್ ಇದರ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.

ಅಸಯ್ಯದ್ ಮಹಮ್ಮದ್ ತಂಙಳ್ ಸಾಲ್ಮರ ದುವಾ ನೆರವೇರಿಸಿದರು.ಸಾಲ್ಮರ ಸಯ್ಯದ್ ಮಲೆ ಜುಮ್ಮಾ ಮಸೀದಿ ಖತೀಬ್ ಅಲ್ ಹಾಜಿ ಪಿ.ಎಂ.ಉಮ್ಮರ್ ದಾರಿಮಿ ಆಶೀರ್ವಚನ ನೀಡಿದರು.ಏಳ್ಮುಡಿ ವಿಶ್ವಾಸ್ ಎಂಟರ್ ಪ್ರೈಸಸ್ ಇದರ ಮಾಲಕ ಶ್ರೀಕಾಂತ್ ಶೆಣೈ ಉದ್ಘಾಟನೆ ನೆರವೇರಿಸಿ, ಮಾತನಾಡಿ ಕ್ಯುಟು ಸಂಸ್ಥೆಯ ಪಾಲುದಾರರಾದ ಆರಿಫ್, ಇಜಾಝ್ ಹಾಗೂ ಝಕರಿಯಾ ಒಂದೋಳ್ಳೆಯ ಗುತ್ತಿಗೆದಾರರು ಆಗಿರದೆ ಉತ್ತಮ ರೀತಿಯ ವ್ಯಕ್ತಿಗಳು ಕೂಡ, ನೂತನ ಸಂಸ್ಥೆಯು ವೇಗವಾಗಿ ಇನ್ನಷ್ಟು ಎತ್ತರ ಏರಲಿ, ಬೆಳೆಯಲಿಯೆಂದು ಹಾರೈಸಿದರು.


ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ನಗರ ಕಾಂಗ್ರೇಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್,ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್ ಟಿ ರಝಾಕ್ ಹಾಜಿ, ಎಸ್ಡಿಪಿಐ ಪುತ್ತೂರು ಕ್ಷೇತ್ರ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್, ಅನ್ಸಾರುದ್ದೀನ್ ಜಮಾಅತ್ ನ ನಿಕಟಪೂರ್ವಧ್ಯಕ್ಷ ಹಾಜಿ ಅಬ್ದುಲ್ ಸಾಲ್ಮರ, ಉದ್ಯಮಿ ಅಬ್ದುಲ್ ರಹಿಮಾನ್, ನಿವೃತ್ತ ಯೋಧ ಜೋ ಡಿ ಸೋಜಾ, ವಕೀಲ ನೂರುದ್ದೀನ್ ಸಾಲ್ಮರ , ಉದ್ಯಮಿ ಪ್ರಶಾಂತ್ ಶೆಣೈ, ಉದ್ಯಮಿ ರವಿ ಪ್ರಸಾದ್ ಶೆಟ್ಟಿ , ರೋಟರಿ ಎಲೈಟ್ ಅಧ್ಯಕ್ಷ ಮನ್ಸೂರ್, ಅಂಚೆ ಇಲಾಖಾ ನಿವೃತ್ತ ಉದ್ಯೋಗಿ ಮೊಹಿದ್ದೀನ್, ರಝಾಕ್ ಆರ್.ಪಿ, ಮಹಮ್ಮದ್ ಇಕ್ಬಾಲ್, ನಾಸಿರ್ ಎಲೈಟ್, ಮುಕ್ತಾರ್ ಸಾಲ್ಮರ, ಅಸ್ಗರ್ ಕಬಕ ,ಯಾಹಿಯಾ, ಶಾಕೀರ್,  ಸತ್ತಾರ್ ರೈಲ್ವೇ ಸಹಿತ ಹಲವರು ಇದ್ದರು.

ಸನ್ಮಾನ : ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ವಿವಿಧ ವಿಭಾಗದ ಕೆಲಸಗಾರರನ್ನು ಗುರುತಿಸಿ ,ಅವರನ್ನೂ ಕೂಡ ಅತಿಥಿಗಳ ಮುಖೇನ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

ಸಂಸ್ಥೆಯ ಪಾಲುದಾರರಾದ ಆರಿಫ್ ಸಾಲ್ಮರ , ಇಜಾಝ್ ಪುತ್ತೂರು ಹಾಗೂ ಝಾಕರಿಯಾ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ವಂದಿಸಿದರು.ಅಬ್ದುಲ್ ರಝಾಕ್ ಸಾಲ್ಮರ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.