ಅವಿಭಜಿತ ಜಿಲ್ಲೆಯ ಬೋರ್‌ವೆಲ್ ಕಂಟ್ರಾಕ್ಟ್‌ದಾರರ ಸಂಘ ರಚನೆಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಕಮಿಷನ್ ಆಧಾರದಲ್ಲಿ ಬೋರ್‌ವೆಲ್ ಕೊರೆಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಸಂಘವು ಪ್ರಾರಂಭಗೊಂಡಿದೆ.

ಅ.೧೦ರಂದು ಲಯನ್ಸ್ ಕ್ಲಬ್ ಹಾಲ್ ನಡೆದ ಕಾಂಟ್ರಾಕ್ಟ್‌ದಾರರ ಸಭೆಯಲ್ಲಿ ಸಂಘ ರಚನೆಗೆ ಅಧಿಕೃತ ಚಾಲನೆ ನೀಡಲಾಯಿತು. ಚಂದ್ರಶೇಖರ್ ಕಾಮತ್ ಬೆಳ್ಳಾರೆಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈಗಾಗಲೇ ಸ್ವಾಗತ ಸಮಿತಿಗಳನ್ನು ರಚಿಸಿಕೊಂಡು ಮುಂದೆ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಗಳನ್ನು ರಚಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್ ಕಾಮತ್ ಮಾತನಾಡಿ, ನಮ್ಮ ವೃತ್ತಿಯು ಗ್ರಾಹಕರಿಗೆ ತೃಪ್ತಿಯಾಗುವ ರೀತಿಯಲ್ಲಿಬೇಕು. ಕೆಲಸಗಳು ಕಳಪೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಅವರು ತಿಳಿಸಿದರು.

ಪುತ್ತೂರು ನಸೀಬ್ ಬೋರ್ವೆಲ್ ಮಾಲಕರಾದ ಅಬೂಬಕ್ಕರ್ ಮುಲಾರ್ ವಾಸ್ತವಿಕವಾಗಿ ಮಾತನಾಡಿ, ವಿವಿಧ ಉದ್ಯಮಗಳಿಗೆ ಸಂಘಟನಾತ್ಮಕವಾದ ಶಕ್ತಿ ನಮ್ಮೆಲ್ಲರ ಒಗ್ಗಟ್ಟು ಪ್ರಬಲವಾಗಿರುತ್ತದೆ. ಸುಮಾರು ೪೦ ವರ್ಷಗಳ ಇತಿಹಾಸವಿರುವ ಬೋರ್‌ವೆಲ್ ಕಾಂಟ್ರಾಕ್ಟ್‌ದಾರರ ವೃತ್ತಿಗೆ ಯಾವುದೇ ಸಂಘಟನಾತ್ಮಕ ಶಕ್ತಿ, ಸಂಘಟನೆ ಇಲ್ಲದಿರುವುದು ಖೇದಕರವಾಗಿದೆ. ಹೀಗಾಗಿ ಜಾತ್ಯಾತೀತ ನಿಲುವಿನ ಸಂಘಟನೆಯಾಗುವಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಮನವಿ ಮಾಡಿದರು.

ಸುಳ್ಯ ಸ್ವಾಗತ ಸಮಿತಿ ಅಧ್ಯಕ್ಷ ರೋಹನ್ ಪೀಟರ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಕಂಟ್ರಾಕ್ಟ್‌ದಾರರನ್ನು ಸೇರಿಸಿಕೊಂಡು ಪ್ರತೀ ತಾಲೂಕು ಸಮಿತಿ ಮತ್ತು ಜಿಲ್ಲಾ ಸಮಿತಿ ರಚಿಸಲಾಗುವುದು. ಸುಮಾರು ೨೫ ವರ್ಷಗಳಿಂದ ಬೋರ್ವೆಲ್ ವೃತ್ತಿಯಲ್ಲಿ ತೊಡಗಿಸಿಕೊಂಡ ಗುತ್ತಿಗೆದಾರರಿಗೆ ಮತ್ತು ವಾಹನದ ಮ್ಹಾಳಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂಟ್ರಾಕ್ಟ್‌ದಾರರುಗಳಾದ ಅಮಿತ್ ಕೊಟ್ಟಾರಿ ಮಂಗಳೂರು, ಪ್ರಶಾಂತ್ ಪೂಜಾರಿ. ಕಿನ್ನಿಗೋಳಿ, ದೇವಿಪ್ರಸಾದ್ ಆತೂರು, ಲೋಲಾಕ್ಷ ಅಲಂಕಾರ್, ಗೋಪಾಲಕೃಷ್ಣ ಭಟ್, ರೋಹನ್ ಪೀಟರ್ ಸುಳ್ಯ, ಉದಯಕುಮಾರ್ ಅಡ್ಯನಡ್ಕ, ಕರುಣಾಕರ ಪೂಜಾರಿ ಕೂಂತೂರು, ಡೇನಿಯಲ್ ಡಿಸೋಜ ಮಂಗಳೂರು, ರಾಮಕೃಷ್ಣ ಭಟ್ ಉಪ್ಪಿನಂಗಡಿ, ದೇಜಪ್ಪ ಬೆಳ್ತಂಗಡಿ, ಉಮ್ಮರ್ ಕಂಡಿಗ, ರಾಜೇಶ್ ಈಶ್ವರಮಂಗಲ, ಮಾಧವ ನಿಂತಿಕಲ್ಲು, ದೀಪಕ್ ಸುಳ್ಯ, ಸತ್ಯಪ್ರಕಾಶ್ ಮುಂಡೂರು, ಸಂದೀಪ್ ಕುಮಾರ್, ಅನಂತಕೃಷ್ಣ ಭಟ್ ಅಡ್ಯನಡ್ಕ, ಅಣ್ಣಿ ಪ್ರಸಾದ್, ಅಮ್ಮಣ್ಣ ರೈ ಕುಂಬ್ರ, ರವಿ ಕುಮಾರ್ ಕುಂಬ್ರ, ವಿನೋದ್ ರೈ ಕುಂಬ್ರ ಸಹಿತ ಹಲವು ಮಂದಿ ಕಂಟ್ರಾಕ್ಟ್‌ದಾರರು ಭಾಗವಹಿಸಿದ್ದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಕಂಟ್ರಾಕ್ಟ್‌ದಾರರನ್ನು ಆಹ್ವಾನಿಸಿ ಪ್ರತೀ ತಾಲೂಕು ಸಮಿತಿ ಮತ್ತು ಜಿಲ್ಲಾ ಸಮಿತಿ ರಚಿಸಿ ರಚಿಸಲಾಗುವುದು. ಹಾಗೂ ಸುಮಾರು ೨೫ ವರ್ಷಗಳಿಂದ . ಬೋರ್ವೆಲ್ ವೃತ್ತಿಯಲ್ಲಿ ತೊಡಗಿಸಿಕೊಂಡ ಬೋರ್‌ವೆಲ್ ಕಂಟ್ರಾಕ್ಟ್.ದಾರರಿಗೆ ಮತ್ತು. ಗಾಡಿ ಮಾಲಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸುಳ್ಯ.ಸ್ವಾಗತ ಸಮಿತಿ ಅಧ್ಯಕ್ಷ ರೋಹನ್ ಪೀಟರ್ ತಿಳಿಸಿದ್ದಾರೆ.

ಹಲವಾರು ವರ್ಷಗಳ ಬೋರ್ವೆಲ್ ವೃತ್ತಿ ನಡೆಸಿಕೊಂಡು ಮೃತಪಟ್ಟ ಹಿರಿಯ ಗುತ್ತಿಗೆದಾರ ಬಿಸಿ ರೋಡ್ ಕೃಷ್ಣ ಬೋರ್ವೆಲ್‌ನ ದಿ.ಸದಾಶಿವ, ಪುತ್ತೂರು ಯಮುನಾ ಬೋರ್ವೆಲ್‌ನ ಕೆ ಎನ್ ಕೃಷ್ಣ ಶೆಟ್ಟಿ, ಆರಿಗ ಬೋರ್‌ವೆಲ್‌ನ ಶ್ರೀಪತಿ ಆರಿಗ, ಮರಿ ಭಟ್ ವಿಟ್ಲ, ಬಾಲಕೃಷ್ಣ ಶೆಟ್ಟಿ ಸೂರಿಕುಮೇರು, ಬಾಲಕೃಷ್ಣ ಶೆಟ್ಟಿ ಕೆದಿಲ, ಪ್ರಸಾದ್ ಭಟ್.ನಗರ, ದುರ್ಗಾ ಈಶ್ವರ್ ಸುಳ್ಯರವರಿಗೆ ಮೌನ ಪ್ರಾರ್ಥನೆಯ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಂಟ್ರಾಕ್ಟ್‌ದಾರರುಗಳಾದ ಅಮಿತ್ ಕೊಟ್ಟಾರಿ ಮಂಗಳೂರು, ಪ್ರಶಾಂತ್ ಪೂಜಾರಿ. ಕಿನ್ನಿಗೋಳಿ, ದೇವಿಪ್ರಸಾದ್ ಆತೂರು, ಲೋಲಾಕ್ಷ ಅಲಂಕಾರ್, ಗೋಪಾಲಕೃಷ್ಣ ಭಟ್, ರೋಹನ್ ಪೀಟರ್ ಸುಳ್ಯ, ಉದಯಕುಮಾರ್ ಅಡ್ಯನಡ್ಕ, ಕರುಣಾಕರ ಪೂಜಾರಿ ಕೂಂತೂರು, ಡೇನಿಯಲ್ ಡಿಸೋಜ ಮಂಗಳೂರು, ರಾಮಕೃಷ್ಣ ಭಟ್ ಉಪ್ಪಿನಂಗಡಿ, ದೇಜಪ್ಪ ಬೆಳ್ತಂಗಡಿ, ಉಮ್ಮರ್ ಕಂಡಿಗ, ರಾಜೇಶ್ ಈಶ್ವರಮಂಗಲ, ಮಾಧವ ನಿಂತಿಕಲ್ಲು, ದೀಪಕ್ ಸುಳ್ಯ, ಸತ್ಯಪ್ರಕಾಶ್ ಮುಂಡೂರು, ಸಂದೀಪ್ ಕುಮಾರ್, ಅನಂತಕೃಷ್ಣ ಭಟ್ ಅಡ್ಯನಡ್ಕ, ಅಣ್ಣಿ ಪ್ರಸಾದ್, ಅಮ್ಮಣ್ಣ ರೈ ಕುಂಬ್ರ, ರವಿ ಕುಮಾರ್ ಕುಂಬ್ರ, ವಿನೋದ್ ರೈ ಕುಂಬ್ರ ಸಹಿತ ಹಲವು ಮಂದಿ ಕಂಟ್ರಾಕ್ಟ್‌ದಾರರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.