ಕುಂತೂರು ಎರ್ಮಳದ ವ್ಯಕ್ತಿ ನಾಪತ್ತೆ ಕಡಬ ಠಾಣೆಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅಸ್ಥಿಪಂಜರ ದೊರೆತ ಬಳಿಕ ದೂರು!
ಸತೀಶ್ ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆ

ಕಡಬ : ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿ ನಡೆದಿದೆ. ಸತೀಶ್(50 ವ.) ನಾಪತ್ತೆಯಾದ ವ್ಯಕ್ತಿಯಾಗಿದ್ದು ಕಳೆದ ಆ.2 ರಂದು ಮನೆಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸತೀಶರ ಪತ್ನಿ ಗೀತಾರವರು ನಿನ್ನೆ ಕಡಬ ಠಾಣೆಗೆ ದೂರು ನೀಡಿದ್ದು ಸದ್ಯ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿ ಎರಡು ತಿಂಗಳಾದ್ರೂ ದೂರು ದಾಖಲಿಸದ ಪತ್ನಿ..!? : ಸತೀಶ್ ನಾಪತ್ತೆಯಾಗಿ ಎರಡು ತಿಂಗಳಾದ್ರೂ ನಾಪತ್ತೆಯಾದ ವ್ಯಕ್ತಿಯ ಪತ್ನಿ ದೂರು ನೀಡಿರಲಿಲ್ಲ. ಮೂರು ದಿನಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಅನ್ನಡ್ಕ ಎಂಬಲ್ಲಿ ಸಣ್ಣ ಹಳ್ಳವೊಂದರಲ್ಲಿ ಮಾನವನ ತಲೆಬುರುಡೆಯೊಂದು ಮಳೆ ನೀರಿಗೆ ಕೊಚ್ಚಿಕೊಂಡು ಬಂದಿತ್ತು.ಇನ್ನು ತಲೆಬುರುಡೆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಿನ್ನಲೆ, ನಿನ್ನೆ ಹುಡುಕಾಟ ನಡೆಸಿದ ಸ್ಥಳೀಯರಿಗೆ ಅರೆ ಬರೆ ಅಸ್ತಿ ಪಂಜರ ಸಿಕ್ಕಿದೆ.ಇನ್ನು ಅಸ್ತಿ ಪಂಜರ ಸಿಕ್ಕ ವಿಚಾರ ಪ್ರಚಾರವಾಗುತ್ತಿದ್ದಂತೆ ಎರಡು ತಿಂಗಳುಗಳ ಕಾಲ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ದೂರು ನೀಡದ ಪತ್ನಿ, ನಿನ್ನೆ ಕಡಬ ಠಾಣೆಗೆ ದೂರು ನೀಡಿದ್ದು ದೂರಿನಲ್ಲಿ ತನ್ನ ಗಂಡ ಮದ್ಯಪಾನ ವ್ಯಸನಿಯಾಗಿದ್ದು,ಅವರು ವಿನಾಕಾರಣ ಜಗಳ ಮಾಡುತ್ತಿದ್ದರು, ಆಗಾಗ ಮನೆಬಿಟ್ಟು ಹೋಗುತ್ತಿದ್ದು ಸತೀಶ್ 10-15 ದಿನಗಳ ಬಳಿಕ ಮನೆಗೆ ಬರುತ್ತಿದ್ದರು, ಸತೀಶ್ ಪತ್ತೆಹಚ್ಚಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗುವುದಿಲ್ಲ ಎಲ್ಲಿಯೋ ದೂರ ಹೋಗಿ ನೆಲೆಸಿರಬಹುದೆಂದು ತಿಳಿದು ನಾನು ದೂರು ನೀಡಿಲ್ಲ ಇದೀಗ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಅರೆ ಬರೆ ಮಾನವನ ದೇಹದ ಭಾಗಗಳು ಸಿಕ್ಕ ಹಿನ್ನಲೆ ಇದು ಕಾಣೆಯಾದ ಸತೀಶರ ದೇಹವೇ ಎಂಬ ಸಂಶಯದಿಂದ ದೂರು ನೀಡುತ್ತಿರುವುದು ಎಂದು ತಿಳಿಸಿದ್ದಾರೆ.ಅದೇನೇ ಇದ್ರು ಅಸ್ತಿ ಪಂಜರ ಸಿಕ್ಕ ವಿಚಾರ ಪ್ರಚಾರವಾದ ಬಳಿಕ ನಾಪತ್ತೆಯಾದ ವ್ಯಕ್ತಿಯ ಹೆಂಡತಿ ದೂರು ನೀಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದು ಸತ್ಯಾಸತ್ಯಾತೆ ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.