HomePage_Banner
HomePage_Banner
HomePage_Banner
HomePage_Banner

ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ,ಅಕ್ಷರಾಭ್ಯಾಸಮತ್ತು ಶಾಲಾ ವಾಹನ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.12ರಂದು ಮಂಗಳವಾರ ವೇದಮೂರ್ತಿ  ಕಾರ್ತಿಕ್ ಶಾಸ್ತ್ರಿ ಮತ್ತು ಬಳಗದವರು ಶಾರದಾಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್ ಪೂಜಾಕಾರ್ಯದಲ್ಲಿ ಭಾಗವಹಿಸಿದರು. ನಂತರ ಶಾಲಾ ವಾಹನ ಪೂಜೆಯನ್ನು ನೆರವೇರಿಸಲಾಯಿತು.

ನಂತರ ಸುಮಾರು 50 ಪುಟಾಣೆಗಳು ಅಕ್ಷರಾಭ್ಯಾಸದ ಮೂಲಕ ತಮ್ಮಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ಮಕ್ಕಳಿಗೆ ತಿಲಕಇಟ್ಟುಆರತಿಎತ್ತಿ ಶಾರದ ಮಾತೆಗೆ ಪುಷ್ಪ ನಮನವನ್ನು ಸಲ್ಲಿಸಿದರು. ಶಾಲಾ ಶಿಕ್ಷಕಿಯರು ಶ್ರೀ ಲಲಿತಾಸಹಸ್ರನಾಮಪಠಣ ಮಾಡಿದರು.

ಇದೇಸಂದರ್ಭದಲ್ಲಿ ಶಾಲಾ ವಾಹನದಹಿರಿಯಚಾಲಕರಾದ  ಭೋಜಪ್ಪ ಗೌಡ ಇವರನ್ನು ಹಿರಿಯರ ಸಮ್ಮುಖದಲ್ಲಿ ಶಾಲು ಹೊದಿಸಿ ಫಲಪುಷ್ಟ ನೆನಪಿನ ಕಾಣಿಕೆ ಇತ್ತು ಗೌರವಿಸಲಾಯಿತು ಹಾಗೂ ಇತರ ಶಾಲಾ ವಾಹನದ ಚಾಲಕರನ್ನು ಕೂಡ ಸನ್ಮಾನಿಸಿ ಉಡುಗೊರೆಯನ್ನು ನೀಡಲಾಯಿತು.

ಶಾಲಾ ಶಿಕ್ಷಕರು ರಚಿಸಿ, ಹಾಡಿರುವ ನೂತನ ಪುಷ್ಪಾರ್ಚನೆ ಎಂಬ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಭಕ್ತಿಗೀತೆಯ ಭಿತ್ತಿಪತ್ರ [ಪೋಸ್ಟರ್]ವನ್ನು ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು,ಶಿಕ್ಷಕ ರಕ್ಷಕ ಸಂಘದಅಧ್ಯಕ್ಷರುಹಾಗೂಸರ್ವಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರುಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.