HomePage_Banner
HomePage_Banner
HomePage_Banner
HomePage_Banner

ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೂ. 70 ಲಕ್ಷ ಲಾಭ | ಶೇ. 10 ಡಿವಿಡೆಂಡ್ ವಿತರಣೆ
  • ಸದಸ್ಯರ ವಿಸ್ತೃತ ಮತ್ತು ವಿಶಾಲ ಸೇವೆಗಾಗಿ ಸಂಘದ ಕಾರ್ಯಯೋಜನೆ – ಶಶಿಕುಮಾರ್ ರೈ
  • ಪಾರದರ್ಶಕ ಆಡಳಿತದೊಂದಿಗೆ ಲಾಭದ ಕಡೆಗೆ ಗುರಿ – ರಂಗನಾಥ ರೈ

ಬೆಟ್ಟಂಪಾಡಿ: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತುರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ಅ. 10 ರಂದು ನಡೆಯಿತು.


ಸಂಘದ ನಿರ್ದೇಶಕರೂ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ `ಸಂಘದ ಸದಸ್ಯರಿಗೆ ವಿಶಾಲ ಮತ್ತು ವಿಸ್ತೃತ ಸೇವೆ ನೀಡುವ ನಿಟ್ಟಿನಲ್ಲಿ ಇತರ ಬ್ಯಾಂಕ್‌ಗಳಂತೆ ಸಂಪೂರ್ಣ ಹವಾನಿಯಂತ್ರಿತ ಬ್ಯಾಂಕ್ ಕೊಠಡಿ, ಸುಸಜ್ಜಿತ ಗೋದಾಮು, ವ್ಯಾಪಾರ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಗ್ರಾಮೀಣ ಭಾಗದಲ್ಲಿ ನಮ್ಮ ಸದಸ್ಯರ ಆಶೋತ್ತರಗಳಿಗೆ ಪೂರಕವಾಗಿ ಸಂಘವು ಮುನ್ನಡೆಯವ ನಿಟ್ಟಿನಲ್ಲಿ ನೂತನ ವಾಣಿಜ್ಯ ಮಳಿಗೆಯ ಕಾಮಗಾರಿ ನಡೆಯುತ್ತಿದೆ. ನಮ್ಮ ಸದಸ್ಯರು ಆದಷ್ಟು ವಾಹನ ಸಾಲ, ಗೃಹೋಪಯೋಗಿ ವಸ್ತುಗಳ ಖರೀದಿ ಸಾಲಕ್ಕೂ ನಮ್ಮ ಸಂಘದ ಮೂಲಕವೇ ಮುಂದೆ ಬಂದಾಗ ಸಂಘವು ಇನ್ನಷ್ಟು ಅಭಿವೃದ್ಧಿ ಕಾಣಲಿದೆ’ ಎಂದರು.

ಸಂಘದ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತು ಮಾತನಾಡಿ `ನಮ್ಮ ಆಡಳಿತಾವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಸಂಘವು ಹೆಚ್ಚು ಹೆಚ್ಚು ಲಾಭವನ್ನು ಗಳಿಸುತ್ತಿದೆ. ನಮ್ಮ ಅವಧಿಯ ಕೊನೆಯ ವರ್ಷದಲ್ಲಿ ರೂ. 1 ಕೋಟಿ ಲಾಭ ಹೊಂದುವ ಗುರಿ ಇರಿಸಿಕೊಂಡಿದ್ದೇವೆ. ಎಲ್ಲಾ ಕಡೆ ಪಾರದರ್ಶಕವಾಗಿ ಆಡಳಿತ ನಡೆಸುತ್ತಾ ಸಂಘದ ಮುನ್ನಡೆಗೆ ಆಡಳಿತ ಮಂಡಳಿಯವರು ಶ್ರಮಿಸುತ್ತಿದ್ದೇವೆ’ ಎಂದರು.

ಬೂತ್ ಮಟ್ಟದಲ್ಲಿ ಗ್ರಾಹಕರ ಸಮಾವೇಶ
ಇರ್ದೆ ಬೆಟ್ಟಂಪಾಡಿ ಎರಡು ಗ್ರಾಮಗಳ ಬೂತ್ ಮಟ್ಟದಲ್ಲಿ ಗ್ರಾಹಕ ಸಮಾವೇಶ ಎಂಬ ಹೊಸ ಯೋಜನೆ ಹಾಕಿಕೊಂಡಿದ್ದೇವೆ. ಎಲ್ಲಾ ಸದಸ್ಯರ ಮನೆಮನೆಗೆ ಸಂಘದ ಕಾರ್ಯಚಟುವಟಿಕೆಯನ್ನು ಹರಡಿಸುವುದು ಇದರ ಉದ್ದೇಶವಾಗಿದೆ ಎಂದು ರಂಗನಾಥ ರೈ ಹೇಳಿದರು.

ಉಪ್ಪಳಿಗೆಯಲ್ಲಿ ಶಾಖೆ ತೆರೆಯಬೇಕು
ಸದಸ್ಯರ ಸಲಹೆ ಸೂಚನೆ ವೇಳೆ ಮಾತನಾಡಿದ ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಪ್ರಕಾಶ್ ರೈ ಬೈಲಾಡಿಯವರು ಮಾತನಾಡಿ `ಬೆಟ್ಟಂಪಾಡಿ ಗ್ರಾಮವು ಕುದ್ರೆಡ್ಕ ಪರಿಸರದವರೆಗೂ ಹರಡಿರುವುದರಿಂದ ಆ ಭಾಗದ ಜನರಿಗೆ ಪಡಿತರ ವ್ಯವಹಾರಕ್ಕಾಗಾಗಿ ಬೆಟ್ಟಂಪಾಡಿ ದೂರವಾಗುತ್ತಿದೆ. ಹಾಗಾಗಿ ಉಪ್ಪಳಿಗೆಯಲ್ಲಿ ಸಂಘದ ಶಾಖೆಯನ್ನು ತೆರೆಯುವಂತೆ ಹೇಳಿದರು. ದೂಮಡ್ಕ ಶಾಖೆಯ ಬಳಿ ರಸ್ತೆ ಸರಿಪಡಿಸಬೇಕು. ಪಡಿತರ ವಿತರಣೆಯ ತಂತ್ರಾಂಶ ಸಮಸ್ಯೆ ಸರಿಪಡಿಸಬೇಕು ಇತ್ಯಾದಿ ಸಲಹೆ ಸೂಚನೆಗಳು ಸದಸ್ಯರಿಂದ ಕೇಳಿಬಂದವು.

ಪಂಚಾಯತ್‌ನಿಂದ ಅಭಿನಂದನೆ
ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ರೈ ಗುತ್ತು ಮಾತನಾಡಿ `ಕೋವಿಡ್ ಸಂಕಷ್ಟ ಕಾಲದಲ್ಲಿ ವ್ಯಾಕ್ಸಿನೇಷನ್‌ಗಾಗಿ ಸಂಘದ ಸಭಾಭವನವನ್ನು ಉಚಿತವಾಗಿ ನೀಡಿರುವುದಕ್ಕೆ ಮತ್ತು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿರುವುದಕ್ಕಾಗಿ ವಿಶೇಷವಾಗಿ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ಉಪನಿಯಮಗಳ ತಿದ್ದುಪಡಿ
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ.ಯವರು ಸಂಘದ ಅಂಕಿಅಂಶಗಳನ್ನು ಸಭೆಯ ಮುಂದಿರಿಸಿ ಅನುಮೋದನೆ ಪಡೆದುಕೊಂಡರು. ಇದೇ ವೇಳೆ ಸಂಘಕ್ಕೆ ಸಂಬಂಧಿಸಿದ ಕೆಲವು ಉಪನಿಯಮಗಳನ್ನು ತಿದ್ದುಪಡಿಗೆ ಸಭೆಯ ಮುಂದಿರಿಸಲಾಯಿತು. ನಿರ್ದೇಶಕರಿಗೆ ಆಡಳಿತ ಮಂಡಳಿ ಸಭೆಗಳ ಮತ್ತು ಪ್ರಯಾಣದ ಸಲುವಾಗಿ ನೀಡಬಹುದಾದ ಭತ್ಯೆಗಳ ಗರಿಷ್ಠ ಮೊತ್ತವನ್ನು ಅಧ್ಯಕ್ಷರಿಗೆ ರೂ. 2500 ದಿಂದ ರೂ. 4,000ಕ್ಕೆ ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ರೂ. 500 ರಿಂದ ರೂ. 1000 ಕ್ಕೆ ಏರಿಸಲಾಯಿತು. ಉತ್ಪತ್ತಿ ಈಡಿನ ಸಾಲ ಗರಿಷ್ಠ ರೂ. 5 ಲಕ್ಷ ದಿಂದ ರೂ. 10ಲಕ್ಷಕ್ಕೆ ಏರಿಸಲಾಯಿತು. ಆಸ್ತಿ ಖರೀದಿ ಗರಿಷ್ಠ ಸಾಲ ರೂ. 20 ಲಕ್ಷದಿಂದ ರೂ. 40 ಲಕ್ಷಕ್ಕೆ ಏರಿಸಲಾಯಿತು.

ಬ್ಯಾಂಕಿನ ಮುಂದಿನ ಕಾರ್ಯಯೋಜನೆ
ಸಂಘದ ಮುಂದಿನ ಕಾರ್ಯ ಯೋಜನೆಗಳನ್ನು ಮಂಡಿಸಲಾಯಿತು. ರೂ. 25 ಕೋಟಿ ಠೇವಣಿ ಹೊಂದುವುದು, ರೂ. 38 ಕೋಟಿ ಸಾಲ ನೀಡುವ ಗುರಿ, ರೂ. 1 ಕೋಟಿ ವ್ಯಾಪಾರ ವಹಿವಾಟು, ವಾಹನ, ಆಭರಣ ಈಡು ಸಾಲ, ಗೃಹ ನಿರ್ಮಾಣ ಸಾಲಗಳಿಗೆ ಹೆಚ್ಚಿನ ಮಹತ್ವ ನೀಡುವುದು, ಮುಂದಿನ ವರ್ಷದಲ್ಲಿ ರೂ. 80 ಲಕ್ಷ ನಿವ್ವಳ ಲಾಭ ಗಳಿಸುವುದು, ನಬಾರ್ಡ್ ಎಮ್.ಎಸ್.ಸಿ. ಯೋಜನೆಯಡಿಯಲ್ಲಿ ಹೊಸ ಗೋದಾಮು, ವಾಣಿಜ್ಯ ಮಳಿಗೆ ನಿರ್ಮಿಸಿ ಎಲ್ಲಾ ವ್ಯವಹಾರ ಒಂದೇ ಕಡೆ ನಡೆಸುವಂತೆ ಮಾಡುವುದು.

ನೂತನ ವಾಣಿಜ್ಯ ಮಳಿಗೆ

ಈಗಾಗಲೇ ಗತ ಸಾಲಿನಲ್ಲಿ ಸಂಘದ ಎಲ್ಲಾ ವ್ಯವಹಾರಗಳು ಒಂದೇ ಕಡೆ ಇರುವಂತೆ ಮಾಡಲು ವಾಣಿಜ್ಯ ಮಳಿಗೆ, ಗೋದಾಮು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ಈಗಾಗಲೇ ರೂ. 1.33 ಕೋಟಿ ವೆಚ್ಚದ ಯೋಜನೆಯಲ್ಲಿ ವಾಣಿಜ್ಯ ಮಳಿಗೆಯ ಕಾಮಗಾರಿ ಆರಂಭಗೊಂಡಿರುತ್ತದೆ. ಇದರಿಂದ ಸಂಘದ ಗ್ರಾಹಕರಿಗೆ ಮತ್ತು ಸದಸ್ಯರಿಗೆ ಇನ್ನಷ್ಟು ವಿಸ್ತೃತ ಸೇವೆ ನೀಡಲು ನಾವು ಬದ್ದರಾಗಿದ್ದೇವೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತು ಹೇಳಿದರು.

ಪಡಿತರ ಸಾಗಾಟ ವೆಚ್ಚ ಸ್ವೀಕರಿಸುತ್ತಿಲ್ಲ
ದೂಮಡ್ಕ ಶಾಖೆಯಲ್ಲಿ ಗ್ರಾಹಕರಿಂದ ಪಡಿತರ ಸಾಗಾಟ ವೆಚ್ಚ ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ರವರು `ನಮ್ಮ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿವೆ. ಪಡಿತರ ಸಾಗಾಟ ವೆಚ್ಚ ಎಲ್ಲಿಯೂ ತೆಗೆದುಕೊಳ್ಳಲಾಗುತ್ತಿಲ್ಲ. ಅಂತಹುದು ಕಂಡುಬಂದಲ್ಲಿ ದಯವಿಟ್ಟು ನಮ್ಮ ಗಮನಕ್ಕೆ ತರಬೇಕು. ಸಂಘದ ಬೆಳವಣಿಗೆಯಲ್ಲಿ ಕಪ್ಪುಚುಕ್ಕೆ ಬಾರದಂತೆ ಎಲ್ಲಾ ಸದಸ್ಯರು ನಮ್ಮೊಡನೆ ಸಹಕರಿಸಬೇಕೆಂದರು.

ಉಪಾಧ್ಯಕ್ಷ ಗಿರೀಶ್ವರ ಭಟ್ ಎಂ. ವರದಿ ವಾಚಿಸಿದರು. ನಿರ್ದೇಶಕರಾದ ಶೇಷಪ್ಪ ರೈ ಮೂರ್ಕಾಜೆ, ಕರುಣಾಕರ ಶೆಟ್ಟಿ ಕೊಮ್ಮಂಡ, ಹರೀಶ್ ಗೌಡ, ಸದಾಶಿವ ರೈ, ದೇವಪ್ಪ ನಾಯ್ಕ್, ನಾಗರಾಜ್ ಕಜೆ, ಆಶಾ ಅರವಿಂದ, ದೀಪಿಕಾ ಪಿ. ರೈ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷರಾದ ಡಿ. ಶಂಭು ಭಟ್, ಜಗನ್ನಾಥ ರೈ ಕೊಮ್ಮಂಡ, ವಿಠಲ ರೈ ಬೈಲಾಡಿ, ದೇರಣ್ಣ ರೈ ಪಾಪನಡ್ಕ ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.

ಸಿಬಂದಿಗಳಾದ ಆರ್.ಬಿ.ಸುವರ್ಣ ವಂದಿಸಿದರು. ಲಿಂಗಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಗಂಗಾ ಸಿ., ಮಹಮ್ಮದ್ ಕುಂಞಿ, ಸ್ವಾತಿ ಎಂ., ಬಾಲಕೃಷ್ಣ ನಾಯ್ಕ್, ತುಳಸಿ, ಅಬ್ದುಲ್ ಕುಂಞಿ, ರವಿ ಗುಂಡ್ಯಡ್ಕ ಸಹಕರಿಸಿದರು.

ನಿವ್ವಳ ಲಾಭದ ಹಂಚಿಕೆ – ಲಾಭಾಂಶ ವಿಂಗಡಣೆ
2020-21ನೇ ಸಾಲಿನಲ್ಲಿ ಸಂಘವು ರೂ. 70,00,826.90 ಲಾಭ ಗಳಿಸಿದ್ದು, ಅದರಲ್ಲಿ ಕ್ಷೇಮ ನಿಧಿಗೆ 25%, ಸಹಕಾರ ಶಿಕ್ಷಣ ನಿಧಿಗೆ 2%, ಧರ್ಮಾರ್ಥ ನಿಧಿಗೆ 3%, ಕಟ್ಟಡ ನಿಧಿ 30%, ಅನುತ್ಪಾದಕ ಆಸ್ತಿ ನಿಧಿ 3%, ಸಿಬ್ಬಂದಿ ಕಲ್ಯಾಣ ನಿಧಿ 5%, ನೌಕರರ ಬೋನಸ್ -2 ತಿಂಗಳ ಸಂಬಳ, ಡಿವಿಡೆಂಡ್ 10% ವಿಂಗಡಣೆ ಮಾಡಲಾಗಿದೆ. ರೂ. 1,02,990.07 ಉಳಿಕೆ ಕ್ಷೇಮ ನಿಧಿಯಲ್ಲಿ ಇಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.