HomePage_Banner
HomePage_Banner
HomePage_Banner
HomePage_Banner

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ವಿವಿಧ ಸೇವೆಗಳು, ಸಾಮೂಹಿಕ ಚಂಡಿಕಾ ಹೋಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷವಾಗಿ ಶ್ರೀ ದೇವಿ ಗುಡಿಯಲ್ಲಿ ನಿತ್ಯ ವಿಶೇಷ ಪೂಜೆ ನಡೆಯುತ್ತಿದೆ.




ಪ್ರತಿ ನಿತ್ಯ ಸಂಜೆ ಭಜನೆ, ಶ್ರೀ ದೇವಿಗೆ ಭಕ್ತರಿಂದ ವಿವಿಧ ಸೇವೆಗಳು ಸಮರ್ಪಣೆಗೊಳ್ಳುತ್ತಿದೆ. ಸಂಜೆ ನಡೆಯುವ ದುರ್ಗಾಪೂಜೆ, ಹೂವಿನ ಪೂಜೆ, ರಂಗಪೂಜೆ ಸೇವೆಯಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅ.13ರಂದು ಬೆಳಿಗ್ಗೆ ಸಾಮೂಹಿಕ ಚಂಡಿಕಾ ಹೋಮ ನಡೆಯಿತು. ಬೆಳಿಗ್ಗೆ ಸಂಕಲ್ಪ, ಮಧ್ಯಾಹ್ನದ ವೇಳೆ ಪೂರ್ಣಾಹುತಿ ನಡೆಯಿತು. ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಅವರ ಪುತ್ರ ವೇ ಮೂ ಆಶ್ಲೇಷ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ವೀಣಾ ಬಿ.ಕೆ, ಬಿ.ಐತ್ತಪ್ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಸೇವೆಗಳು:
ನವರಾತ್ರಿ ಸಂದರ್ಭ ನಡೆಯುವ ಚಂಡಿಕಾ ಹೋಮ, ಕುಂಕುಮಾರ್ಚನೆ, ಅಕ್ಷರಾಭ್ಯಾಸ, ಮಹಾಪೂಜೆ, ಸಂಜೆ ದುರ್ಗಾಪೂಜೆ, ಹೂವಿನ ಪೂಜೆ, ರಂಗಪೂಜೆ ಸೇವೆಗಳನ್ನು ಮಾಡಿಸಲಿಚ್ಚಿಸುವ ಭಕ್ತರಿಗೆ ಅವಕಾಶವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.