HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಬಸ್ ಅಪಘಾತದಲ್ಲಿ ತಾಯಿ, ಮಗು ಮೃತಪಟ್ಟ ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿಯವರ ಆಕ್ರೋಶದ ಬರಹ ಭಾರೀ ವೈರಲ್

ಪುತ್ತೂರು: ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಅ.12ರಂದು ಕೆ.ಎಸ್.ಆರ್.ಟಿ.ಸಿ. ಬಸ್ ಅಪಘಾತದಲ್ಲಿ ಮಹಿಳೆ ಮತ್ತು ಆಕೆಯ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿ ಹಿರಿಯ ಪತ್ರಕರ್ತ, ಪ್ರಗತಿಪರ ಕೃಷಿಕ, ಲೇಖಕ ಗೋಪಾಲಕೃಷ್ಣ ಕುಂಟಿನಿಯವರು ಫೇಸ್ ಬುಕ್ ನಲ್ಲಿ ಬರೆದಿರುವ ಆಕ್ರೋಶದ ಬರಹ ವ್ಯಾಪಕ ವೈರಲ್ ಆಗಿದೆ. ಸಮಾಜಮುಖಿ ಚಿಂತನೆಯಡಿ ಕುಂಟಿನಿಯವರು ಹಲವು ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಪ್ರಖರ ಲೇಖನಗಳನ್ನು ಬರೆಯುತ್ತಿದ್ದಾರೆ.

ರಾಜಕಾರಣಿಗಳನ್ನು, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಅವರು ಛೇಡಿಸುತ್ತಿದ್ದಾರೆ. ಸಾಹಿತಿಯೂ ಆಗಿರುವ ಗೋಪಾಲಕೃಷ್ಣ ಕುಂಟಿನಿಯವರು ಇತ್ತೀಚೆಗೆ ಹಲವು ಪುಸ್ತಕಗಳನ್ನು ಪ್ರಕಟಿಸಿಯೂ ಗಮನ ಸೆಳೆದಿದ್ದಾರೆ. ಇದೀಗ ಉಪ್ಪಿನಂಗಡಿಯಲ್ಲಿ ಬಸ್ ಅಪಘಾತದಿಂದಾಗಿ ಮುಸ್ಲಿಂ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕುಂಟಿನಿಯವರು ಸೋಶಿಯಲ್ ಮೀಡಿಯಾದ ಮೂಲಕ ಕಿಡಿ ಹಚ್ಚಿದ್ದಾರೆ.

ಗೋಪಾಲಕೃಷ್ಣ ಕುಂಟಿನಿಯವರ ಬರಹ ಇಂತಿದೆ:
ನಮ್ಮ ಉಪ್ಪಿನಂಗಡಿಯಲ್ಲಿ ಒಂದು ಬಸ್ ನಿಲ್ದಾಣವಿದೆ. ಇದು ಐವತ್ತು ವರ್ಷಗಳ ಹಿಂದಿನದ್ದು. ಆ ಕಾಲದ ಬಸ್ಸು ಮತ್ತು ಪ್ರಯಾಣಿಕರ ದಟ್ಟಣೆಗೆ ಸಾಕಷ್ಟು ಅನುಕೂಲವಾಗಿ ಮಾಡಿದ್ದು. ಈಗ ಬಸ್ಸುಗಳ ಸಂಖ್ಯೆ ಐವತ್ತು ಪಟ್ಟು ಹೆಚ್ಚಾಗಿದೆ. ನಿಲ್ದಾಣದ ಸುತ್ತಾ ಅಂಗಡಿ ಮಳಿಗೆಗಳಿವೆ. ಬಸ್ ಪ್ರಯಾಣಿಕರಷ್ಟೇ ಅಲ್ಲ ಇತರರೂ ಈ ಭಾಗದಲ್ಲಿ ವ್ಯಾಪಾರ ವಹಿವಾಟಿಗೆ ಸುತ್ತಾಡುತ್ತಾರೆ. ಹಾಗಾಗಿ ಇದು ನನಗೆ ಯಾವತ್ತೂ ಬಸ್ ನಿಲ್ದಾಣದಂತೆ ಕಾಣುವುದೇ ಇಲ್ಲ. ಇದೊಂದು ಕಮರ್ಶಿಯಲ್ ಕಾಂಪ್ಲೆಕ್ಸ್ ನಂತೆಯೂ, ಪಕ್ಕಾ ಮಾರುಕಟ್ಟೆ ಪ್ರದೇಶದಂತೆಯೂ ಕಾಣುತ್ತದೆ. ಇದು ನನಗೆ ಮಾತ್ರಾ ಕಾಣುವುದಲ್ಲ. ಎಲ್ಲರಿಗೂ ಕಾಣುತ್ತದೆ.

ಪಂಚಾಯತ್, ಶಾಸಕಾದಿಗಳು, ಸಂಸದರಾದಿಗಳು, ಮಂತ್ರಿ ಮಹಾಜನರು. ವಿಲೇಜ್ ಅಕೌಂಟೆಂಟರಿಂದ ತಹಶೀಲ್ದಾರರು ಜಿಲ್ಲಾಧಿಕಾರಿಗಳ ತನಕ. ಈ ಬಸ್ ನಿಲ್ದಾಣ ಅರ್ಥಾತ್ ಮಾರುಕಟ್ಟೆ ಪ್ರದೇಶದೊಳಗೆ ಬಸ್ಸುಗಳ ಆಗಮನವೇ ಪ್ರಳಯಾಂತಕ. ಇಕ್ಕೆಲಗಳಿಂದ ನುಗ್ಗುವ ಬಸ್ಸುಗಳನ್ನು ತಡೆಯುವವರೇ ಇಲ್ಲ. ಸೀದಾ ಸಾದಾ ರಸ್ತೆಗಳಲ್ಲಿ ಬ್ಯಾರಿಕೇಡ್ , ಹಂಪ್ಸ್ ಅಂತ ಹಾಕುವ ಆಡಳಿತದವರು ಈ ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಒಂದು ಮರಳು ಚೀಲವನ್ನೂ ಇಟ್ಟಿಲ್ಲ.

ಈ ಬಸ್ ನಿಲ್ದಾಣವನ್ನು ಇಲ್ಲಿಂದ ಪಕ್ಕದ ಹೆದ್ದಾರಿ ಪ್ರದೇಶಕ್ಕೆ ವರ್ಗಾಯಿಸುವ ಕಡತ ಕಳೆದ ಹನ್ನೆರಡು ವರ್ಷಗಳಿಂದ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದೆ. ಆ ಫೈಲನ್ನು ಯಾರೆಲ್ಲಾ file ಮಾಡಿದ್ದಾರೆ ಎಂದು ಉಪ್ಪಿನಂಗಡಿಯ ಅಂತರಾತ್ಮಕ್ಕೆ ಗೊತ್ತಿದೆ.

ಅಗಲ ಕಿರಿದು ಇಕ್ಕಟ್ಟು ಬಿಕ್ಕಟ್ಟಿನ ಈ ಬಸ್ ನಿಲ್ದಾಣ ಯಾವತ್ತೋ ಸ್ಥಳಾಂತರವಾಗಬೇಕಿತ್ತು. ಹಾಗೇ ಆಗಿದ್ದರೆ ಇಂದು ಆ ತಾಯಿ ಮತ್ತು ಆ ಒಂದು ವರ್ಷದ ಕಂದಮ್ಮ ಆ ದುರುಳ ವೇಗದ ಬಸ್ಸಿನಡಿಗೆ ಬಿದ್ದು ಸಾಯುತ್ತಿರಲಿಲ್ಲ. ಅಮ್ಮನ ತೆಕ್ಕೆಯಲ್ಲೇ ಇದ್ದೇ ಸತ್ತುಹೋದ ಆ ಮಗುವಿನ ಶಾಪ ಯಾರನ್ನೆಲ್ಲಾ ಕಾಡಬೇಕೋ ಅವರನ್ನೆಲ್ಲಾ ಕಾಡದೇ ಬಿಡುವುದೂ ಇಲ್ಲ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.