HomePage_Banner
HomePage_Banner
HomePage_Banner
HomePage_Banner

ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನ ಮಹಾದ್ವಾರ ನಿರ್ಮಾಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಅ.14: ಶಾಸಕರಿಂದ ಗುದ್ದಲಿ ಪೂಜೆ

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನಕ್ಕೆ ಮಹಾದ್ವಾರ ನಿರ್ಮಾಣಕ್ಕೆ ಗುದ್ದಲಿಪೂಜೆ ಅ. 14 ರಂದು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತು ನಗರಸಭಾ ಸದಸ್ಯರುಗಳು ಭಾಗವಹಿಸಲಿದ್ದಾರೆ.

2021-22ನೇ ಇಸವಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮತ್ತು ಎನ್.ಎಸ್. ಕಿಲ್ಲೆಯವರ 120ನೇ ಜನ್ಮ ವರ್ಷಾಚರಣೆಯೂ ಜೊತೆ ಜೊತೆಯಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ `ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನ’ಕ್ಕೆ ಮಹಾದ್ವಾರ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದ್ದು, ಆ ಮೂಲಕ ಸ್ವಾತಂತ್ರ್ಯ ಹೋರಾಟಗಾರನೋರ್ವನಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈ ತಿಳಿಸಿದ್ದಾರೆ.

ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನ: ಚೌಪಾಟಿಯಲ್ಲಿ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರö್ಯ ಸಂಗ್ರಾಮದ ಭೀಷಣ ಭಾಷಣವನ್ನು ಕೇಳಿದ ಎನ್.ಎಸ್. ಕಿಲ್ಲೆಯವರು ಬ್ರಿಟೀಷ್ ಸರಕಾರದ ಅಂಚೆ ಇಲಾಖೆಯ ನೌಕರಿಗೆ ತಿಲಾಂಜಲಿಯನ್ನಿಟ್ಟು ತನ್ನ ಹುಟ್ಟೂರು ದ.ಕ. ಜಿಲ್ಲೆಗೆ ಬಂದು ಗಾಂಧೀಜಿಯವರ ಅನುಯಾಯಿಯಾಗಿ  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಬಂಟ ಮನೆತನದ ಮಂಗಳೂರು ಮರವೂರು ಬೀಡು ಬೊಗ್ರ ಕಿಲ್ಲೆ ಮತ್ತು ಕೂಳೂರು ಆದಕ್ಕೆ ಶೆಡ್ತಿಯವರ ಸುಪುತ್ರನಾದ ನಾರಾಯಣ ಎಸ್. ಕಿಲ್ಲೆಯವರು ಮಂಗಳೂರು ಮತ್ತು ಕೊಡಗು ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ಸಂಗ್ರಾಮಿಯಾಗಿ ಅನವರತ ದುಡಿದವರು. 1934, ಫೆಬ್ರವರಿ 24 ರಂದು ಕೊಡಗಿನಿಂದ ಸುಳ್ಯದ ಮೂಲಕ ಗಾಂಧೀಜಿಯವರನ್ನು ಪುತ್ತೂರಿಗೆ ಕರೆತಂದು ಪುತ್ತೂರಿನ ಇಂದಿನ ಗಾಂಧಿ ಕಟ್ಟೆಯಲ್ಲಿ ನಿಲ್ಲಿಸಿ ಗಾಂಧಿಯವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೃದಯಸ್ಪರ್ಶಿಯಾದ ಭಾಷಣವನ್ನು ಮಾಡಿದ ಕೀರ್ತಿ ಸಲ್ಲುತ್ತದೆ.

ಸ್ವಾತಂತ್ರ್ಯಕ್ಕಾಗಿ ಹಲವಾರು ಸಲ ಜೈಲುವಾಸ ಅನುಭವಿಸಿದ್ದಾರೆ. ಕನ್ನಡ ತುಳು ಉಭಯ ಭಾಷಾ ಸಾಹಿತಿಯಾಗಿ, ಯಕ್ಷಗಾನ ಅರ್ಥಧಾರಿಯಾಗಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದಲ್ಲಿಯೂ ಕಿಲ್ಲೆಯವರ ಹೆಸರು ಅಜರಾಮರವಾಗಿದೆ. ಸ್ವಾತಂತ್ರದ ನಂತರ ಹೆಚ್ಚಾಗಿ ರಾಜಕೀಯ ಧುಮುಕದ ಕಿಲ್ಲೆಯವರು ದಲಿತ ಸೇವಕನಾಗಿ, ಸಮಾಜ ಸುಧಾರಕನಾಗಿ, ಸಾಹಿತ್ಯಿಕವಾಗಿ ಮೆರೆದವರು. ಇಂತಹ ಮಹಾನ್ ವ್ಯಕ್ತಿಯ ನೆನಪನ್ನು ಜನಮಾನಸದಲ್ಲಿ ಪುನರ್‌ಸ್ಥಾಪಿಸಲೋಸುಗ ಅವರ ಸೋದರಳಿಯ ಕಡಮಜಲು ಸುಭಾಸ್ ರೈಯವರು ಅಧ್ಯಕ್ಷರಾಗಿರುವ ಕಿಲ್ಲೆ ಪ್ರತಿಷ್ಠಾನದಿಂದ 2001ನೇ ಇಸವಿಯಲ್ಲಿ ವರ್ಷಪೂರ್ತಿ ದೇಶದ ಉದ್ದಗಲಗಳಲ್ಲಿ ಕಿಲ್ಲೆ ಜನ್ಮ ಶತಮಾನೋತ್ಸವವನ್ನು ಆಚರಿಸುವ ಮೂಲಕ ಕಿಲ್ಲೆಯವರ ಸ್ಮರಣೆಗೆ ಮರಣವಿಲ್ಲದಂತೆ ಮಾಡಲಾಯಿತು. ಪುತ್ತೂರಿನ ಕೋರ್ಟು ಮೈದಾನಕ್ಕೆ ಅಂದಿನ ಶಾಸಕರಾಗಿದ್ದ ಡಿ.ವಿ. ಸದಾನಂದ ಗೌಡರು `ದೇಶಭಕ್ತ ಎನ್.ಎಸ್. ಕಿಲ್ಲೆ ಮೈದಾನ’ ವೆಂದು ಪುನರ್‌ನಾಮಕರಣ ಮಾಡಿದ್ದರು. ಅಂದಿನಿಂದ ಕೋರ್ಟು ಮೈದಾನ `ಕಿಲ್ಲೆ ಮೈದಾನ’ವೆಂದೇ ಜನಜನಿತವಾಗಿದೆ.

ರೂ. 5 ರಿಂದ 6ಲಕ್ಷ ಅಂದಾಜು ವೆಚ್ಚದ ಮಹಾದ್ವಾರ
ಕಡಮಜಲು ಸುಭಾಸ್ ರೈ ಪ್ರಾಯೋಜಕತ್ವ
ಕಿಲ್ಲೆ ಮೈದಾನದಲ್ಲಿ ತಲೆಎತ್ತಲಿರುವ ಮಹಾದ್ವಾರವು ಅಂದಾಜು 5 ರಿಂದ 6 ಲಕ್ಷ ವೆಚ್ಚದಲ್ಲಿ ನಡೆಯಲಿದೆ. ಇದರ ಪೂರ್ತಿ ಖರ್ಚುವೆಚ್ಚಗಳನ್ನು ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ, ಕಿಲ್ಲೆಯವರ ಸೋದರಳಿಯ ಕಡಮಜಲು ಸುಭಾಸ್ ರೈ ವಹಿಸಿಕೊಳ್ಳಲಿದ್ದಾರೆ. `ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಶುಭ ಸಂದರ್ಭದಲ್ಲಿ ಈ ವರ್ಷ ಕಿಲ್ಲೆಯವರ 120 ನೇ ಜನ್ಮವರ್ಷಾಚರಣೆಯೂ ಬಂದಿದ್ದು, ಆ ಪ್ರಯುಕ್ತ 2022ರ ಜನವರಿಯಲ್ಲಿ ಮಹಾದ್ವಾರ ನಿರ್ಮಿಸಿ ನಗರಸಭೆಗೆ ಹಸ್ತಾಂತರಿಸಲಿದ್ದೇವೆ’ ಎಂದು ಕಡಮಜಲು ಸುಭಾಸ್ ರೈ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.