HomePage_Banner
HomePage_Banner
HomePage_Banner
HomePage_Banner

ಅಖಂಡ ಭಾರತ ಸಂಕಲ್ಪಕ್ಕೆ ಮಹಿಳೆಯರು ದುರ್ಗಾವಾಹಿನಿಗಳಾಗಬೇಕು -ಸುರೇಖಾರಾಜ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಹಿಂದೂ ಮಹಿಳೆಯರು ತಮ್ಮ ಜಡತ್ವ ಬಿಟ್ಟು ಸಮಾಜಮುಖಿಯಾಗಿ ಚಿಂತನೆ ಮಾಡಿ ಸಮಾಜದ ಮುಖ್ಯವಾಹಿನಿಯಲ್ಲಿ ನಿಂತು ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ಕಟಿಬದ್ದರಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಂಗ ಸಂಸ್ಥೆ ಮಾತೃ ಶಕ್ತಿಯ ವಿಭಾಗ ಪ್ರಮುಖ್ ಸುರೇಖಾ ರಾಜ್ ಹೇಳಿದರು.

ಅವರು ಬುಧವಾರ ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಂಗ ಸಂಸ್ಥೆ ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡದ ವತಿಯಿಂದ ನಡೆದ ದುರ್ಗಾಷ್ಠಮಿ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು. ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವದನ್ನು ನಾವು ಚರಿತ್ರೆಯಿಂದ ತಿಳಿದುಕೊಳ್ಳಬೇಕಾಗಿದೆ, ಮಾತೃಶಕ್ತಿ ಸ್ವರೂಪಿಣಿ ಹೆಣ್ಣು ಸಮಾಜದಲ್ಲಿ ತಮ್ಮ ಕರ್ತವ್ಯ ಹಾಗೂ ಸವಾಲುಗಳನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ, ನಾವು ನಿದ್ರಾವಸ್ಥೆಯಿಂದ ಹೊರ ಬಂದು ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಸಮಾಜಮುಖಿಯಾಗುವ ಎಲ್ಲಾ ಶಕ್ತಿ ನಮ್ಮಲ್ಲಿದೆ, ಹಿಂದೂ ಸಮಾದಲ್ಲಿನ ಹೆಣ್ಣಮಕ್ಕಳ ಶೋಷಣೆ , ಲವ್ ಜಿಹಾದ್‌ನಂತಹ ಅನ್ಯಮತೀಯರ ನೀಚಕೃತ್ಯ ನಮಗೆ ಸವಾಲಾಗಿ ಪರಿಣಮಿಸಿದೆ, ನಮ್ಮ ಹೆಣ್ಣು ಮಕ್ಕಳ ರಕ್ಷಣೆ ನಮ್ಮಲ್ಲೆರ ಮೇಲಿರುವುದರಿಂದ ನಾವೆಲ್ಲಾ ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ಹಿಂದೂ ಸಮಾಜದ ರಕ್ಷಣೆಗೆ ತಯರಾಗಬೇಕು, ಹಿರಿಯರ ಆಶಯದ ಅಖಂಡ ಭಾರತ ಸಂಕಲ್ಪಕ್ಕೆ ಮಹಿಳೆಯರು ದುರ್ಗಾವಾಹಿನಿಗಳಾಗಬೇಕು ಎಂದು ಸುರೇಖಾ ರಾಜ್ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಭಾಗ ಗ್ರಾಮವಿಕಾಸ ಕಾರ್ಯಕಾರಿಣಿ ಸಂಯೋಜಕಿ ಸವಿತಾ ಸುಬ್ರಹ್ಮಣ್ಯ ಭಟ್ ಪಾಜೋವು ಮಾತನಾಡಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅಡಕವಾಗಿರುವ ಹಬ್ಬಹರಿದಿಗಳು ಈ ಮಣ್ಣಿನ ಧಾರ್ಮಿಕ ಸತ್‌ಸಂಪ್ರದಾಯಗಳನ್ನು ಬಿಂಬಿಸುತ್ತವೆ, ನಾವು ನಮ್ಮ ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವವನ್ನು ತಿಳಿಸುವ ಕೆಲಸವಾಗಬೇಕು, ಮಕ್ಕಳಲ್ಲಿ ಶ್ರದ್ಧಾಭಕ್ತಿಗಳನ್ನು ಬೆಳೆಸುವ ಕಾರ್ಯದ ಜಾಗೃತಿ ಮೂಡಿಸುವ ಸಂಕಲ್ಪವಾಗಬೇಕು ಎಂದರು. ಮಾತೃಶಕ್ತಿಯ ಸತ್ಸಂಗ ಪ್ರಮುಖ್ ಪ್ರಮಿಳಾ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಬ ಮಾತೃಶಕ್ತಿಯ ಸದಸ್ಯೆ ದೀಪಾಶ್ರೀ ಸ್ವಾಗತಿಸಿದರು. ಕಡಬ ಮಾತೃಶಕ್ತಿ ಪ್ರಮುಖ್ ಗೀತಾ ಅಮೈ ಕೇವಳ ಪ್ರಸ್ತಾವನೆಗೈದರು. ಮಾತೃಶಕ್ತಿಯ ಧನ್ಯ ನಾಯಕ್ ವಂದಿಸಿದರು. ಮಾತೃಶಕ್ತಿಯ ಸದಸ್ಯೆ ಮೈನಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.