HomePage_Banner
HomePage_Banner
HomePage_Banner
HomePage_Banner

ಚಿಕ್ಕಮುಡ್ನೂರು:ಸರಕಾರಿ ಜಮೀನಿನಲ್ಲಿರುವ ತೋಡಿನ ನೀರ ಹರಿವಿಗೆ ತಡೆ-ವಾರದೊಳಗೆ ತೆರವಿಗೆ ಆರ್‌ಐಗೆ ಆದೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಬೀರಿಗ ಎಂಬಲ್ಲಿರುವ ಮಾಮೂಲಿ ತೋಡಿನ ನೀರಿನ ಹರಿವಿಗೆ ಅಡೆತಡೆ ಉಂಟು ಮಾಡಿರುವುದನ್ನು ವಾರದೊಳಗೆ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಉಪ್ಪಿನಂಗಡಿ ಕಂದಾಯ ನಿರೀಕ್ಷಕರಿಗೆ ತಹಸಿಲ್ದಾರ್ ಆದೇಶ ಮಾಡಿದ್ದಾರೆ.

ಬೀರಿಗದಲ್ಲಿ ಸರಕಾರಿ ಜಾಗದಲ್ಲಿರುವ ನೆಕ್ಕಿತಡ್ಕ ಎಂಬಲ್ಲಿಂದ ಬೀರಿಗ ಮೂಲಕವಾಗಿ ಕಠಾರ ಎಂಬಲ್ಲಿಗೆ ಹರಿದು ಹೋಗುವ ಸಾರ್ವಜನಿಕ ಮಾಮೂಲಿ ನೀರಿನ ತೋಡನ್ನು ಹೊನ್ನಪ್ಪ ಗೌಡ ಎಂಬವರು ಬೀರಿಗ ಎಂಬಲ್ಲಿ ಅಂದಾಜು 200 ಮೀ.ಉದ್ದಕ್ಕೆ ಜೆಸಿಬಿ ಮೂಲಕ ಮುಚ್ಚಿ ಮಾಮೂಲಿ ತೋಡನ್ನು ತನ್ನ ಜಾಗದ ಬದಿಯಲ್ಲಿ ಸಪೂರವಾಗಿ ನಿರ್ಮಿಸಿ ಮಳೆನೀರು ಹರಿದು ಹೋಗದಂತೆ ಮಾಡಿರುವುದರಿಂದ ಪಕ್ಕದ ಜಮೀನು ಮಾಲೀಕರಾದ ಮೋನಪ್ಪ ಗೌಡ, ರವೀಂದ್ರ ಗೌಡ ಮತ್ತಿತರರ ಕೃಷಿ ಜಮೀನಿಗೆ ನೀರು ನುಗ್ಗಿ ಕೃತಾವಳಿಗಳು ಹಾನಿಗೊಳ್ಳುತ್ತಿರುವ ವಿಚಾರ ವಕೀಲರಾದ ಲೇಖಶ್ರೀ ಬೀರಿಗ ಮತ್ತು ಮೋನಪ್ಪ ಗೌಡ ಇವರು ಸಲ್ಲಿಸಿರುವ ಅರ್ಜಿ ಮತ್ತು ಉಪ್ಪಿನಂಗಡಿ ಕಂದಾಯ ನಿರೀಕ್ಷಕರ ವರದಿಯಿಂದ ತಿಳಿದು ಬಂದಿದೆ.ಈ ಹಿಂದಿನಿಂದಲೇ ಮಾಮೂಲಿ ಇರುವ ತೋಡನ್ನು ಹೊನ್ನಪ್ಪ ಗೌಡರು, ತಹಸಿಲ್ದಾರ್ ಕಚೇರಿಯಿಂದ ನೀಡಲಾಗಿದ್ದ ಎಚ್ಚರಿಕೆ ನೊಟೀಸನ್ನು ಉಲ್ಲಂಘಿಸಿ ಮುಚ್ಚಿರುವುದಲ್ಲದೆ ಪಕ್ಕದ ಜಮೀನುದಾರರಿಗೆ ಹಾನಿ ಉಂಟು ಮಾಡಿರುವುದು ಕಂಡು ಬಂದಿರುವುದರಿಂದ ಸರ್ವೆ ನಕ್ಷೆಯಲ್ಲಿ ಕಾಣಿಸಿರುವಂತೆ ಯಥಾ ಪ್ರಕಾರ ಸರಕಾರಿ ಜಮೀನಿನಲ್ಲಿ ಈ ಹಿಂದೆ ಇದ್ದ ಮಾಮೂಲಿ ನೀರಿನ ಹರಿವಿಗೆ ಅಡೆತಡೆ ಉಂಟು ಮಾಡಿರುವುದನ್ನು ವಾರದೊಳಗೆ ತೆರವುಗೊಳಿಸಿ ವರದಿ ಸಲ್ಲಿಸಲು ಪುತ್ತೂರು ತಹಸಿಲ್ದಾರ್ ಅವರು ಉಪ್ಪಿನಂಗಡಿ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.ಸರಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲು ವರದಿ ಸಲ್ಲಿಸುವಂತೆಯೂ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.