HomePage_Banner
HomePage_Banner
HomePage_Banner
HomePage_Banner

ಮನೆಯಲ್ಲಿ ಲಕ್ಷಾಂತರ ರೂ.ಮೌಲ್ಯದ ಮರ ಅಕ್ರಮ ದಾಸ್ತಾನು ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆರೋಪಿ ಕೆಎಫ್‌ಡಿಸಿ ನೆಡುತೋಪು ಅಧೀಕ್ಷಕಗೆ ನಿರೀಕ್ಷಣಾ ಜಾಮೀನು

ಪುತ್ತೂರು:ಮನೆಯಲ್ಲಿ ಬೆಲೆ ಬಾಳುವ ಮರಗಳ ಅಕ್ರಮ ದಾಸ್ತಾನು ಪ್ರಕರಣದ ಆರೋಪಿಯಾಗಿರುವ ಕೆಎಫ್‌ಡಿಸಿ ನೆಡುತೋಪು ಅಧೀಕ್ಷಕ, ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅರುಣ್ ಕುಮಾರ್ ಅವರ ಮನೆಯಲ್ಲಿ ಬೆಲೆ ಬಾಳುವ ಮರಗಳ ಸೈಜುಗಳನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿದೆ ಎನ್ನುವ ಮಾಹಿತಿಯಾಧರಿಸಿ ಸೆ.೨೫ರಂದು ದಾಳಿ ನಡೆಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಸುಮಾರು 2.5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಬೀಟೆ, ಹಲಸು, ಸಾಗುವಾಣಿ, ಕಿರಾಲ್‌ಬೋಗಿ, ಕಲ್ಪಾಗೆ ಮತ್ತು ಇತರ ಜಾತಿಯ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದರು.ದಾಳಿಯ ವೇಳೆ ಪರಾರಿಯಾಗಿದ್ದ ಆರೋಪಿ ಅರುಣ್ ಕುಮಾರ್ ಅವರಿಗೆ ಇದೀಗ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲ ಬಿ.ನರಸಿಂಹಪ್ರಸಾದ್ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.