ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಚಂಡಿಕಾಹೋಮ,ರಂಗಪೂಜೆ,ಭಜನೆ ಹಾಗು ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಸಂಪನ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅ.6ರಿಂದ ಅ15.ರ ವಿಜಯದಶಮಿ ತನಕ ನವರಾತ್ರಿ ಉತ್ಸವ ನಡೆಯಿತು ಅ.6ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಸಂಜೆ ಶ್ರೀ ಅದಿಶಕ್ತಿ ಭಜನಾ ಮಂಡಳಿ,ಶ್ರೀ ಕ್ಷೇತ್ರ ಶರವೂರು ಇವರಿಂದ ಭಜನೆ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ಅ.7ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆದು ಸಂಜೆ ಪಾಂಡುರಂಗ ಭಜನಾ ಮಂಡಳಿ ಮನವಳಿಕೆ ಯವರಿಂದ ಭಜನೆ ನಡೆದು ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಅ.8ರಂದು ಬೆಳಿಗ್ಗೆ ಚಂಡಿಕಾಹೋಮ,ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರುಸವಣೂರು ಇವರಿಂದ ಭಜನೆ ನಡೆದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಶಾರದಾ ಮಹಿಳಾ ಭಜನಾ ಮಂಡಳಿ,ಕುಂತೂರು ಇವರಿಂದ ಭಜನೆ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು, ಅ.9ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ ಸಂಜೆ ಶ್ರೀ ಗುರುಸಾರ್ವಭೌಮ ಮಹಿಳಾ ಭಜನಾ ಮಂಡಳಿ ರಾಮಕುಂಜ ಇವರಿಂದ ಭಜನೆ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು. ಅ.1೦ರ ಲಲಿತಾ ಪಂಚಮಿಯಂದು , ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ‌ ನಡೆದು ಸಂಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ,ನೆಟ್ಟಣ ಇವರಿಂದ ಭಜನೆ, ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಅ.11ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಸಂಜೆ ಶ್ರೀ ವಿಷ್ಣು ಮೂರ್ತಿ ಭಜನಾ ಮಂಡಳಿ,ಹಳೆನೇರೆಂಕಿ ಯವರಿಂದ ಭಜನೆ ನಡೆದು ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು
ಅ.12 ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಸಂಜೆ ಭದ್ರಕಾಳಿ ಗುಡಿಯಲ್ಲಿ ವಿಶೇಷ ಪೂಜೆ ಹಾಗು ಶ್ರೀ ಶಾರದಾ ಭಜನಾ ಮಂಡಳಿ ರಾಮನಗರ ,ಉಪ್ಪಿನಂಗಡಿಯವರಿಂದ ಭಜನೆ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ‌ ನಡೆಯಿತು. ಅ.13ರಂದು ದುರ್ಗಾಷ್ಟಮಿಯಂದು ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಸಂಜೆ ಶ್ರೀ ದುರ್ಗಾಂಭ ಕಲಾ ಸಂಗಮ,ಶ್ರೀ ಕ್ಷೇತ್ರ ಶರವೂರು ಇವರಿಂದ ತಾಳಮದ್ದಲೆ,
ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು. ಅ.14 ಮಹಾನವಮಿಯಂದು ಬೆಳಿಗ್ಗೆಯಿಂದ ಆಯುಧ ಪೂಜೆ, ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ಸಂಜೆ ಮಾತೃಶ್ರೀ ಭಜನಾ ಮಂಡಳಿ,ಕೊಂಡಾಡಿ ಕೊಪ್ಪ ಭಜನೆ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.ಅ.15 ವಿಜಯ ದಶಮಿಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಅಕ್ಷರಾಭ್ಯಾಸ ,ಶ್ರೀ ಆದಿಶಕ್ತಿ ಮಾತೃ ಭಜನಾ ಮಂಡಳಿ ಶರವೂರು ಇವರಿಂದ ಭಜನೆ , ಶ್ರೀ ಮದ್ದಾವ ದೀಶಾ ವಿಠಲದಾಸರಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಇವರಿಂದ ಭಜನಾ ಕಾರ್ಯಕ್ರಮ ಮ ಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ ,ಪ್ರಸಾದ ವಿತರಣೆ,ನವಾನ್ನ ಸಂತರ್ಪಣೆ ನಡೆಯಿತು.

ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ ಹಾಗು ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಘವೇಂದ್ರ ಪ್ರಸಾದ್, ಪ್ರಶಾಂತ್ ರೈ .ಜಿ.ಮನವಳಿಕೆ, ಶೀನಪ್ಪ ಕುಂಬಾರ, ಲಕ್ಷೀ೬ ನಾರಾಯಣ ಅಡೀಲು, ಬಾಬು ಕುಪ್ಪಾಜೆ, ಆಶಾ ಈಶ್ವರ ಭಟ್, ಮಂಜುಳಾ ಕೆ.ಸಿ ಹಾಗು ಸಿಬ್ಬಂದಿಗಳು ಮತ್ತು ಕಾರ್ಯಕರ್ತರು ಸೀಮೆಯ ಭಕ್ತಾಧಿಗಳು ಹಾಗು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಹಕರಿಸಿದರು. ಅಗಮಿಸಿದ ಊರ ಪರವೂರ ಸಾವಿರಾರು ಭಕ್ತಾಧಿಗಳು ಚಂಡಿಕಾ ಹೋಮ,ರಂಗಪೂಜೆ ಹಾಗು ಇನ್ನಿತರ ಸೇವೆಯಲ್ಲಿ ಪಾಲ್ಗೋಂಡು ಅನ್ನಸಂತರ್ಪಣೆಯಲ್ಲಿ ಪಾಲ್ಗೋಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.