ಇಡಾಳ : ಸರಕಾರಿ ಭೂಮಿ ಎಸ್‌ಸಿ/ಎಸ್‌ಟಿ ನಿವೇಶನಕ್ಕೆ ಕಾದಿರಿಸಿರುವುದು: ನಮ್ಮ ಹೋರಾಟಕ್ಕ ಎಂದ ಜಯ: ನಿಯೋಜಿತ ಬೀಮ್ ಆರ್ಮಿ ಸಂಘಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳ ಎಂಬಲ್ಲಿ ಎಸ್‌ಸಿ/ಎಸ್‌ಟಿ ಪಂಗಡದ ನಿವೇಶನ ರಹಿತರಿಗೆ ಕಂದಾಯ ಅಧಿಕಾರಿಗಳು ಜಾಗ ಕಾಯ್ದಿರಿಸಿದ್ದಾರೆ, ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ನಿಯೋಜಿತ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಮುಖಂಡ ಅಣ್ಣಿ ಎಲ್ತಿಮಾರ್ ಹೇಳಿದರು.

ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲಿ ಮಾತನಾಡಿ ಇದು ಅಂದಿನ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರ ನೇತೃತ್ವದಲ್ಲಿನ ಹೋರಾಟ ಹಾಗೂ ನಮ್ಮಲ್ಲಿನ ಕೆಲವು ದಲಿತ ಮುಖಂಡರ ನಿರಂತರ ಪರಿಶ್ರಮದ ಫಲ, ಇದಕ್ಕೆ ಇತರ ದಲಿತ ಸಂಘಟನೆಗಳ ಸಹಕಾರ ಕೂಡಾ ಇತ್ತು ಎಂದು ಹೇಳಿದರು.

ಎರಡು ಬಾರಿ ಕಡಬ ತಹಸೀಲ್ದರ್ ಕಛೇರಿ ಎದುರು ಪ್ರತಿಭಟನೆ ಮಾಡಿದ ಬಳಿಕ ಇಡಾಳದಲ್ಲಿರುವ ಸರ್ಕಾರಿ ಜಾಗವನ್ನು ಪರಿಶಿ? ಜಾತಿ/ಪರಿಶಿ? ಪಂಗಡದ ನಿವೇಶನ ರಹಿತರಿಗೆ ಕಾಯ್ದಿರಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ ಬಳಿಕ ಪೆರಾಬೆ ಗ್ರಾ.ಪಂ ಪಿಡಿಒ ಅವರ ಕೋರಿಕೆಯನ್ವಯ ಕಡಬ ತಹಶೀಲ್ದಾರ್ ಅವರು ಪ್ರಸ್ತಾವನೆಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದರು. ಸರಕಾರದ ಅಧಿಸೂಚನೆ ಮೇರೆಗೆ ಪೆರಾಬೆ ಗ್ರಾಮದ ಇಡಾಳದಲ್ಲಿರುವ ೧.೦೫ ಎಕ್ರೆ ಮತ್ತು ೧೫೭/೧೬ (ನಕ್ಷೆಯಂತೆ ೧೫.ನಂ.೧೫೭/೧೯೮೨)ರಲ್ಲಿ ೦, ೭೦ ಎಕ್ರೆ, ಸರಕಾರಿ ಜಮೀನನ್ನು ಪ.ಜಾ/ಪ.ಪಂ ದ ನಿವೇಶನ ರಹಿತರಿಗೆ ಕಾಯ್ದಿರಿಸುವಂತೆ ಈ ಆದೇಶ ಹೊರಡಿಸಿದ್ದಾರೆ. ಈ ಆದೇಶ ಹೊರಡಿಸಿದ ಎರಡು ವ?ದೊಳಗೆ ಉದ್ದೇಶಿತ ವ್ಯವಸ್ಥೆಗೆ ಬಳಸಲು ನಿಯಾಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ನಿವೇಶನ ರಹಿತ ಪ.ಜಾ/ಪ.ಪಂ.ದ ಕುಟುಂಬಗಳಿಗೆ ಜಾಗ ಕಾಯ್ದಿರಿಸುವಂತೆ ಪೆರಾಬೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿ ನಿರ್ಣಯಿಸಲಾಗಿತ್ತು.

ಇದೇ ಜಾಗದಲ್ಲಿ ವ್ಯಕ್ತಿಯೊಬ್ಬರು ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಕೃಷಿ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಅವರು ಜ. ೩೦ ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಂದಾಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಜ.೩೧ರಂದು ಕೊಂಬಾರಿಗೆ ಪತ್ರಕರ್ತರ ಗ್ರಾಮವಾಸ್ತವ್ಯಕ್ಕೆ ಬರುತ್ತಿದ್ದ ಜಿಲ್ಲಾಧಿಕಾರಿಗಳ ವಾಹನತಡೆದು ಪ್ರತಿಭಟನೆ ಮಾಡುವುದಾಗಿ ನಾವು ಎಚ್ಚರಿಕೆ ನೀಡಿದ ಮರು ದಿನವೇ ಎಸಿ ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕಿದ್ದರು. ಅಲ್ಲದೆ ಒಂದು ವಾರದೊಳಗೆ ಪರಿಶೀಲಿಸಿ ಗ್ರಾ.ಪಂ ಗೆ ಜಾಗ ಹಸ್ತಾರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ದೂರುದಾರರಿಗೆ ಮಾಹಿತಿಯನ್ನೂ ನೀಡಿದ್ದರು. ಎಸಿ ಭೇಟಿ ನೀಡಿದ ಕಾರಣ ನಾವು ಪ್ರತಿಭಟನೆಯನ್ನು ಹಿಂಪಡೆದಿದ್ದೆವು. ಬಳಿಕ ಈ ಸರ್ಕಾರಿ ಜಾಗವನ್ನು ಪರಿಶಿ? ಜಾತಿ/ಪರಿಶಿ? ಪಂಗಡದ ನಿವೇಶನ ರಹಿತರಿಗೆ ಕಾಯ್ದಿರಿಸಿದ್ದು ಜುಲೈ ೧ ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಪೆರಾಬೆ ಗ್ರಾಮ ಪಂಚಾಯತ್ ಗೆ ಹಸ್ತಾಂತರ ಮಾಡಿದ್ದರು. ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತ ಮಲೆ, ವಿ.ಎ ಸಂತೋ?, ಗ್ರಾ.ಪಂ ಪಿಡಿಒ ಶಾಲಿನಿ,ಗ್ರಾ.ಪಂ ಅಧ್ಯಕ್ಷ ಚಂದ್ರ ಶೇಖರ ರೈ,ಗ್ರಾ.ಪಂ ಸದಸ್ಯರು, ಆಗಮಿಸಿದ್ದರು. ಪ.ಜಾತಿ/ಪ.ಪಂಗಡದ ನಿವೇಶನ ರಹಿತರಿಗೆ ಕಾದಿರಿಸಿದ ಜಾಗಕ್ಕೆ ಬೇಲಿ ಹಾಕಲು ಗ್ರಾ.ಪಂ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಏಳು ದಿನದ ಒಳಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪಿಡಿಒ ಅವರಿಗೆ ದಲಿತ ಮುಖಂಡರು ಮನವಿ ನೀಡಿದ್ದೆವು. ಒಂದು ವಾರದ ಒಳಗೆ ಬೇಲಿ ಹಾಕುವ ವ್ಯವಸ್ಥೆ ಮಾಡದಿದ್ದಲ್ಲಿ ಗ್ರಾ.ಪಂ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಲಾಗಿತ್ತು. ಈ ಹಿನ್ನೆಯಲ್ಲಿ ಕಾದಿರಿಸಿದ ಜಾಗಕ್ಕೆ ಬುಧವಾರ ಗ್ರಾ.ಪಂ ವತಿಯಿಂದ ಬೇಲಿ ಹಾಕುವ ಕಾರ್ಯ ಕಂದಾಯ ಅಧಿಕಾರಿಗಳು ಗ್ರಾ.ಪಂ ಅಧಿಕಾರಿಗಳು, ಪೊಲೀಸರ ಉಪಸ್ಥಿತಿಯಲ್ಲಿ ತಂತಿ ಬೇಲಿ ಹಾಕಲಾಗಿದೆ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪಿಡಿಒ ಶಾಲಿನಿ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ರೈ, ಉಪಾಧ್ಯಕ್ಷೆ ಸಂಧ್ಯಾ ಮತ್ತಿತರರು ಹಾಜರಿದ್ದರು. ಸುಮಾರು ನಲ್ವತ್ತು ಮಂದಿ ದಲಿತ ಸಂಘಟನೆಯ ಮುಖಂಡರು ಬೇಲಿ ಹಾಕಲು ನೆರವಾಗಿದ್ದರು. ಜಾಗದಲ್ಲಿ ಯಾವುದೇ ಕೃಷಿ ಮಾಡದಂತೆ ಸೂಚಿಸಿದ್ದರೂ ಸ್ಥಳೀಯ ವ್ಯಕ್ತಿ ಕೃಷಿಯನ್ನು ಮಾಡಿ ಪೈಪ್ ಲೈನ್ ಅಳವಡಿಸಿದ್ದರು. ಈ ಜಾಗಕ್ಕೆ ತಂತಿ ಬೇಲಿ ಅವಳವಡಿಸಿದ ಬಳಿಕ ತೆಂಗಿನ ಗಿಡ ಮತ್ತು ಪೈಪ್ ಲೈನ್ ಗಳ ತೆರವು ಮಾಡಲಾಗುತ್ತಿದ್ದು ಇವುಗಳನ್ನು ಗ್ರಾ.ಪಂ ವಶಕ್ಕೆ ಪಡೆದಿದೆ.

ಇಡಾಳ ಪ್ರದೇಶಕ್ಕೆ ಪ.ಜಾತಿ/ಪ.ಪಂಗಡದ ಜನರು ಬಂದರೆ ಸಾಯುತ್ತಾರೆ, ದೈವದ ಶಾಪ ತಟ್ಟುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು ಇದು ಮೂಡನಂಬಿಕೆ ಮತ್ತು ಜಾತಿಪದ್ದತಿ ಇಂದಿಗೂ ಜೀವಂತ ಎಂಬುದುದಕ್ಕೆ ಸಾಕ್ಷಿಯಾಗಿದೆ ಇದು ಖಂಡನೀಯ ಎಂದು ಅಣ್ಣಿ ಎಲ್ತಿಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಭೀಮ ಆರ್ಮಿ ಸಂಘಟನೆಯ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ ,ಪ್ರಧಾನ ಕಾರ್ಯದರ್ಶಿ ದಿನೇಶ್ ಅಗತ್ತಾಡಿ, ಸಮಚಾಲಕರಾದ ಕಮಲಾಕ್ಷ ಎಡಮಂಗಲ, ತನಿಯಪ್ಪ ಬೆದ್ರೋಳಿ, ಸದಸ್ಯರದ ಗಿರಿಜಾ ಹೊಸ್ಮಠ, ಸುಂದರ ಕಳಾರ, ಸುಪ್ರೀತ್ ಕಳಾರ ಮತ್ತಿತರು ಉಪಸ್ಥಿರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.