ಅಕ್ಷಯ ಗ್ರೂಪ್ ಸಂಸ್ಥೆಗಳ ಮತ್ತೊಂದು ಕೊಡುಗೆ: ಕುಂಬ್ರದಲ್ಲಿ ಸುಸಜ್ಜಿತ ಅಕ್ಷಯ ಆರ್ಕೆಡ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮುತ್ತಿನನಗರಿ ಎನಿಸಿದ ಪುತ್ತೂರಿನ ಉದ್ಯಮಿ ಜಯಂತ್ ನಡುಬೈಲು ಮಾಲಕತ್ವದ ಅಕ್ಷಯ ಗ್ರೂಪ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆಯಾಗಿ ಸುಸಜ್ಜಿತ ‘ಅಕ್ಷಯ ಆರ್ಕೆಡ್’ ಗ್ರಾಮಾಂತರ ಪ್ರದೇಶವಾಗಿರುವ ಕುಂಬ್ರದಲ್ಲಿ ಅ.೧೭ ರಂದು ಲೋಕಾರ್ಪಣೆಗೊಳ್ಳಲಿದೆ.

ಬೆಳಿಗ್ಗೆ ಲಕ್ಷ್ಮೀಶ ತಂತ್ರಿಯವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿರುವುದು. ಬಳಿಕ ಬೆಂಗಳೂರು ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ನೂತನ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ. ಕಛೇರಿ ಉದ್ಘಾಟನೆಯನ್ನು ರಾಜ್ಯ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿರವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದೂರುರವರು ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಎಂ.ವೈ ಉದಯರವಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿರವರು ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿಯಾಗಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಕೆ.ಸಿ ಸಾದಿಕ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ಕುಂಬ್ರ ವರ್ತಕ ಸಂಘದ ಅಧ್ಯಕ್ಷ ಮಾಧವ ರೈ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ, ಮಂಗಳೂರು ಎಸ್.ಕೆ ಬಿಲ್ಡರ‍್ಸ್‌ನ ಸಂತೋಷ್ ಕುಮಾರ್ ಕೊಟ್ಟಿಂಜರವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಎಸ್.ಕೆ ಬಿಲ್ಡರ‍್ಸ್‌ನ ಸಂತೋಷ್ ಕುಮಾರ್ ಕೊಟ್ಟಿಂಜರವರನ್ನು ಗೌರವಿಸಲಾಗುತ್ತದೆ. ಸರ್ವರೂ ಆಗಮಿಸಿ ಪ್ರೋತ್ಸಾಹಿಸಿ ಆಶೀರ್ವದಿಸಬೇಕಾಗಿ ಅಕ್ಷಯ ಗ್ರೂಪ್ ಸಮೂಹ ಸಂಸ್ಥೆಗಳ ಮಾಲಕರಾದ ಜಯಂತ್ ನಡುಬೈಲುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಶಿಷ್ಟ್ಯಗಳು…
-ವಾಣಿಜ್ಯ ಸಂಕೀರ್ಣಗಳು ಮತ್ತು ವಸತಿ ಸೌಲಭ್ಯ
-೨೫೦ ಆಸನಗಳ ಹವಾನಿಯಂತ್ರಿತ ಸಭಾಭವನ
-೨೦೦ ಆಸನಗಳ ಮಿನಿಹಾಲ್
-೧೦೦೦ ಅತಿಥಿಗಳಿಗೆ ಸೌಲಭ್ಯವಿರುವ ಕಲ್ಯಾಣ ಮಂಟಪ ಮತ್ತು ಡೈನಿಂಗ್ ಹಾಲ್
-ವಿಶಾಲವಾದ ಪಾರ್ಕಿಂಗ್ ಸೌಲಭ್ಯ
-ಸ್ವಚ್ಛತೆಗೆ ಪ್ರಥಮ ಆದ್ಯತೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.