ಮಹಾನವಮಿಯ ಪುಣ್ಯ ಕಾಲ ಎಲ್ಲೆಡೆ ಆಯುಧ ಪೂಜೆಯ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರ್ನಾಟಕದಾದ್ಯಂತ ಸಾಂಪ್ರದಾಯಿಕವಾಗಿ ಒಂಬತ್ತು ದಿನಗಳಕಾಲ ಆಚರಿಸಲ್ಪಡುವ ನಾಡಹಬ್ಬವೇ ನವರಾತ್ರಿ ಈ ಹಬ್ಬದಲ್ಲಿ ಒಂಭತ್ತು ದಿನಗಳು ನವದುರ್ಗೆಯರನ್ನು ಒಂಬತ್ತು ಅವತಾರಗಳಲ್ಲಿ ಪೂಜಿಸಲಾಗುತ್ತದೆ ಕೊನೆಯ ದಿನದಂದು ಮಹಾನವಮಿ. ಮಹಾನವಮಿಯ ದಿನದಂದು ಆಯುಧ ಪೂಜೆಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ.ಆಯುಧ ಪೂಜೆಯನ್ನು ಯಾಕೆ ಆಚರಿಸುತ್ತಾರೆ ಎಂಬ ಸ0ಶಯ ಉದ್ಭವಿಸಿದಾಗ ಅದರ ಹಿಂದೆ ದೊಡ್ಡ ಕಥೆಯೇ ಇದೆ ಎಂದು ನನಗೆ ತಿಳಿಯಿತು ಸಣ್ಣದಾಗಿ ಹೇಳಬೇಕಾದರೆ ದೇವಿಯು ರಕ್ಕಸರನ್ನು ಕೊಂದಾಗ ಕೊಂದ ಆಯುಧವು ಕಲುಷಿತಗೊಂಡ ಕಾರಣ ಆಯುಧವನ್ನು ಶುದ್ಧ ಮಾಡಲು ಮಾಡುವ ಪೂಜೆ ಆಯುಧ ಪೂಜೆ ಇದು ಪೌರಾಣಿಕ ಹಿನ್ನೆಲೆಯಾಗಿದ್ದರೆ ದ್ವಾಪರಯುಗದಲ್ಲಿ ವನವಾಸವನ್ನು ಮುಗಿಸಿದ ಪಾಂಡವರು ಬನ್ನಿ ಮರದಡಿಯಲ್ಲಿ ಅಡಗಿಸಿಟ್ಟಿದ್ದ ತಮ್ಮ ಆಯುಧಗಳನ್ನು ಪುನಹ ಪೂಜೆ ಮಾಡಿ ಸ್ವೀಕರಿಸುವುದು ಆಯುಧಪೂಜೆಯ ಹಿನ್ನೆಲೆಯಾಗಿದೆ ಇನ್ನು ವಾಹನ ಪೂಜೆಯನ್ನು ಯಾಕೆ ಮಾಡುತ್ತೇವೆ ಎಂದಾಗ ವಾಹನಗಳಿ0ದ ಯಾವುದೇ ಅಪಾಯ ಆಗಬಾರದು ಎನ್ನುವ ಉದ್ದೇಷದಿಂದ ಮಾಡುತ್ತಾರೆ.

ಇಂದೂ ಎಲ್ಲೆಲ್ಲೂ ಆಯುಧ ಪೂಜೆಯ ಸಂಭ್ರಮ ಸಡಗರದಲ್ಲಿ ತೊಡಗಿಕೊಂಡಿರುವ ಜನರು ವಾಹನಗಳು ಆಯುಧಗಳು ಹೂವಿನಿಂದ ಶ್ರ0ಗಾರ. ಮನೆಯಿಂದ ಪೇಟೆಗೆ ಹೋದರೆ ಹೂ ವುಗಳ ಸರಮಾಲೆ ಹೂವಿಗಾಗಿ ಜನರ ಒದ್ದಾಟ ಇದನ್ನೆಲ್ಲಾ ನೋಡುವುದೆಂದರೆ ಒಂದು ಅದ್ಭುತವಾದ ದ್ರಶ್ಯ. ಆಯುಧ ಪೂಜೆಯನ್ನು ಅವರವರ ವೃತ್ತಿಗನುಸಾರವಾಗಿ ಆಯುಧಗಳನ್ನು ಪೂಜೆ ಮಾಡುತ್ತಾರೆ

ಕಡಲ ನಗರಿಯಾಗಿರುವ ಮಂಗಳೂರಿನ ಭಾಗದಲ್ಲಿಯ ಆಯುಧ ಪೂಜೆಯನ್ನು ಪ್ರತಿಯೊಬ್ಬರು ಪ್ರತಿಯೊಂದು ಹಳ್ಳಿಯಲ್ಲೂ ಆಚರಿಸುವ ಪ್ರತೀತಿ ಇದೆ ಅದರಂತೆಯೇ ನಮ್ಮೂರಲ್ಲಿಯೂ ವಿಜೃಂಭಣೆ ಯಿಂದ ಆಯುಧ ಪೂಜೆಯು ನೆರವೇರಿತು. ಸಾಲು ಸಾಲು ನಿಂತಿರುವ ವಾಹನಗಳು ಸಂಪೂರ್ಣವಾಗಿ ಹೂವಿನಿಂದ ಅಲಂಕ್ರತವಾಗಿತ್ತು. ಒಂದು ಬಾರಿ ಕಣ್ಣನ್ನು ಹಾಯಿಸಿದ ತಕ್ಷಣ ವಾಹನಗಳ ಪರಿಚಯವೇ ಸಿಗದಂತಾಯಿತು. ಯಾಕೆಂದರೆ ವಾಹನಗಲೆಲ್ಲಾ ಹೂವಿನಿಂದ ಆವ್ರತವಾಗಿತ್ತು. ಇದರ ನಡುವೆ ಭಜನಾ ಮಂದಿರದಲ್ಲಿ ಭಜನೆಯ ಗಾನ, ದೇವರ ಪೂಜೆ, ಜನಗಳ ಮಸ್ತಿ ಇವುಗಳನ್ನೆಲ್ಲ ನೋಡುತ್ತಿದ್ದಾಗಲೇ ಒಂದು ಕ್ಷಣ ಮೈ ಮರೆಯುತ್ತಿತ್ತು. ಹಳ್ಳಿಯಾದರೆನಂತೆ ಸಿಟಿಗಿಂತಲೂ ಅದ್ದೂರಿಯಾಗಿ ಆಚರಿಸಲಾಯಿತು. ಇವುಗಲೆಲ್ಲಾ ಸಿಗುವುದು ವರ್ಷಕ್ಕೊಂದು ಭಾರಿಯಾದರೂ ನೆನಪು ಮಾತ್ರ ಇನ್ನೊಂದು ನವರಾತ್ರಿ ಬರುವವರೆಗೂ ಇರುತ್ತದೆ ಹೀಗೆ ನವರಾತ್ರಿಯನ್ನು ಸಾಂಸ್ಕೃತಿಕ ಹಾಗೂ ಮನೋರಂಜನಾ ಪೂರ್ವಕವಾಗಿ ಆಚರಿಸುವುದು ಈ ಹಬ್ಬದ ವಿಶೇಷತೆ.

ರಚನಾ. ಕೆ ದ್ವಿತೀಯ ಬಿ.ಎ. (ಪತ್ರಿಕೋದ್ಯಮ) ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.