ಕಿರುಚಿತ್ರ ಇತಿಹಾಸದಲ್ಲಿ ಸಂಚಲನ ಮೂಡಿಸಿದ ಧರ್ಮದೈವ-2 ಪೋಸ್ಟರ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಿರುಚಿತ್ರದ ಇತಿಹಾಸದಲ್ಲೇ ಸಂಚಲನ ಮೂಡಿಸಿ ಲಕ್ಷಾಂತರ ವೀಕ್ಷಕರ ಮನಗೆದ್ದಿರುವ ಸೋನು ಕ್ರಿಯೇಷನ್‌ರವರ ಧರ್ಮದೈವ ತುಳು ಕಿರುಚಿತ್ರದ ಎರಡನೇ ಭಾಗದ ಚಿತ್ರೀಕರಣ ಪೂರ್ತಿಗೊಂಡಿದ್ದು ಪೋಸ್ಟರ್ ಬಿಡುಗಡೆ ಅ.14ರಂದು ನಡೆಯಿತು.

ಸುಧಾಕರ ಪಡೀಲ್ ನಿರ್ಮಾಣದಲ್ಲಿ ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಧರ್ಮದೈವ ಕಿರುಚಿತ್ರವು ಅಂತರರಾಷ್ಟ್ರೀಯ ಟೆಲಿಫಿಲ್ಮ್‌ಗೆ ಸಡ್ಡುಹೊಡೆಯಬಲ್ಲಂತಹ ನಿರ್ದೇಶನದಿಂದಾಗಿ ಜನಮೆಚ್ಚುಗೆ ಪಡೆದುಕೊಂಡಿರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ. ಕೇವಲ ಆರು ಮಂದಿ ಕಲಾವಿದರು, 22 ನಿಮಿಷಗಳ ಧರ್ಮದೈವ ಕಿರುಚಿತ್ರದ ಎರಡನೇ ಭಾಗದ ತುಳು ಪೋಸ್ಟರ್ ಅನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಹಾಗೂ ಕನ್ನಡ ಪೋಸ್ಟರ್ ಅನ್ನು ಜಯಕರ್ನಾಟಕ ಜನಪರ ವೇದಿಕೆಯ ಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿಯವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಧರ್ಮದೈವ ೨ ಮತ್ತಷ್ಟು ರೋಚಕತೆಯನ್ನು ಹೊಂದಿದ್ದು ತುಳುನಾಡಿನ ದೈವ ಶಕ್ತಿಯನ್ನು ಬಿಂಬಿಸುವ ಎಲ್ಲಾ ರೀತಿಯ ಪ್ರಯತ್ನ ಚಿತ್ರದಲ್ಲಿದೆ. ಚಿತ್ರದ ಪ್ರತಿ ದೃಶ್ಯವೂ ರೋಮಾಂಚನವನ್ನು ಉಂಟುಮಾಡಲಿದೆ. ಸದ್ಯದಲ್ಲೇ ಚಿತ್ರವು ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.