ಅಲೈನ್ ಇಂಟೀರಿಯರ್& ಎಕ್ಸ್‌ಟೀರಿಯರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಅಲೈನ್ ಇಂಟೀರಿಯರ್& ಎಕ್ಸ್‌ಟೀರಿಯರ್ ಅ.೧೪ರಂದು ದರ್ಬೆ ಶುಭ ಸ್ಟೋರ್‍ಸ್ ಮುಂಭಾಗದ ಮೋಯ್ದಿನ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಸಯ್ಯದ್ ಜಾಫರ್ ಸಾದಿಕ್ ತಂಞಲ್ ಕುಂಬೋಲ್ ದುವಾಃ ನೆರವೇರಿಸಿದರು. ಸಂಸ್ಥೆಯನ್ನು ಉದ್ಘಾಟಿಸಿದ ಪುತ್ತೂರು ಸಿವಿಲ್ ಇಂಜಿನಿಯರ್‍ಸ್ ಅಸೋಸಿಯೇಶನ್ ಅಧ್ಯಕ್ಷ ಅಕ್ಷಯ ಕೆ.ಎಸ್ ಮಾಸ್ಟರ್ ಪ್ಲಾನರಿ ಮಾತನಾಡಿ, ವ್ಯಾಪಾರದ ಬಗ್ಗೆ ಭಯ ಇರುವಂತ ಈ ಕೋವಿಡ್ ಸಂದರ್ಭದಲ್ಲಿ ವ್ಯವಹರಿಸುವ ಆತ್ಮ ವಿಶ್ವಾಸದಿಂದ ಕಚೇರಿಯನ್ನು ಪ್ರಾರಂಭಿಸಿರುವುದನ್ನು ಶ್ಲಾಘಿಸಿದರು. ನಾವು ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ವಿದೇಶಗಳಲ್ಲಿ ಕಾಣ ಸಿಗುವಂತ ಕಟ್ಟಡ ನಿರ್ಮಾಣದಲ್ಲಿ ಅಲಂಕಾರಿಕ ವಸ್ತುಗಳು, ಇಂಟೀಯರ್‍ಸ್ ಡಿಸೈನ್‌ಗಳು ಇಂದು ನಮ್ಮ ಊರಿನ ಊರಿನ ಯುವಕರ ಮೂಲಕ ನಮ್ಮ ಊರಿನಲ್ಲಿಯೇ ಪ್ರಾರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಮಹಿಳಾ ಠಾಣಾ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾತನಾಡಿ, ಮನೆಯ ಒಳಭಾಗದಲ್ಲಿ ಯಾವ ರೀತಿ ಇದ್ದರೆ ಅಂದ ಎಂಬುದನ್ನು ಸೂಕ್ತ ತರಬೇತಿ ಪಡೆದ ನಿರ್ಮಿಸಿಕೊಡುವ ಯೋಜನೆಯನ್ನು ಯುವಕರ ತಂಡ ಪ್ರಾರಂಭಿಸಿದ್ದು, ಸಕರಿಸುವಂತೆ ತಿಳಿಸಿದರು.

ಜೆಡಿಎಸ್ ರಾಜ್ಯ ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ಕೋವಿಡ್‌ನ ಆರ್ಥಿಕ ಪರಿಸ್ಥಿತಿ ಕಂಗೆಟ್ಟು ಮನೆಯಲ್ಲಿರುವ ಸಮಯದಲ್ಲಿ ಹಲವು ರೀತಿಯಲ್ಲಿ ಜನರಿಗೆ ಕೆಲಸ ನೀಡುವ ಇಂಟೀರಿಯರ್ ಡಿಸೈನ್ ಎಂಬ ಸ್ವ ಉದ್ಯೋಗ ಪ್ರಾರಂಭಿಸಿ, ಇತರರಿಗೆ ಉದ್ಯೋಗ ನೀಡಲು ಮುಂದಾಗಿರುವ ಯುವಕ ಕಾರ್ಯ ಅಭಿನಂದನೀಯ ಎಂದರು.

ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಾಲ್ಮರ ದಾರುಲ್ ಹಸ್ಸನಿಯ ಹಿಲ್‌ಫುಲ್ ಕ್ವೀನ್ ಕಾಲೇಜ್‌ನ ಚೆಯರ್‌ಮೆನ್ ಸಯ್ಯದ್ ಸರ್ಫುದ್ದೀನ್ ತಂಞಲ್, ಎಸ್.ಮೊಹಮ್ಮದ್ ತಂಞಲ್ ಸಾಲ್ಮರ, ಬೆಂಗಳೂರಿನ ನಂದ ಹ್ಯಾಚರೀಸ್ ಮತ್ತು ಬ್ರೀಡಿಂಗ್ ಫಾರ್ಮ್‌ನ ನಂದ ಕಿರಣ್ ಶೆಟ್ಟಿ, ಖತೀಬ್ ಉಮ್ಮರ್ ದಾರಿಮಿ ಸಾಲ್ಮರ, ನ್ಯಾಯವಾದಿ ಎಂ.ಪಿ ಅಬೂಬಕ್ಕರ್, ಅನ್ಸಾರುದ್ದೀನ್ ಜಮಾ ಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಮೊಹಮ್ಮದ್ ಮಲಾರ್, ಸಾಲ್ಮರ ಹಸ್ಸವಲಿಯಾ ಶರಿಯತ್ ಕಾಲೇಜಿನ ಕೆ.ಎಂ ಕೊಡುಂಗಾಯಿ ಉಸ್ತಾದ್, ಸಾಲ್ಮರ ದಾರುಲ್ ಹಸ್ಸನಿಯ ಕಾಲೇಜಿನ ಅನ್ವರ್ ಮುಸ್ಲಿಯಾರ್, ಸಾಲ್ಮರ ದಾರುಲ್ ಹಸ್ಸನಿಯದ ಮುರ್ರಿಸ್ ಅಬ್ದುಲ್ ಕರೀಮ್ ದಾರಿಮಿ, ಇಸಾಖ್ ಸಾಲ್ಮರ, ಯೂಸುಫ್ ತಾರಿಗುಡ್ಡೆ, ಇಸ್ಮಾಯಿಲ್ ಕೆ.ಎಸ್ ಸಾಲ್ಮರ, ಅನ್ವರ್ ಖಾಸಿಂ ಸಾಲ್ಮರ, ಅಬ್ದುಲ್ ರಹಿಮಾನ್ ಹಾಜಿ ದರ್ಬೆ, ಮೋನು ಕೆಟಿಸಿ, ಶಾಕೀರ್ ಸಾಲ್ಮರ, ಪುತ್ತು ಹಾಜಿ ಬಾಯಾರ್, ಬ.ಕೆ ಗ್ರೂಪ್‌ನ ಆಡಳಿತ ನಿರ್ದೇಶಕ ಮೋಯ್ದಿನ್, ಜನರಲ್ ಮ್ಯಾನೆಜರ್ ರಝಾಕ್ , ಇಬ್ರಾಹಿಂ ಕಾಯರ್‌ಕಟ್ಟೆ, ಹರ್ಷದ್ ಕಾಯರ್‌ಕಟ್ಟೆ, ಅನ್ಸದ್ ಕಾಯರ್‌ಕಟ್ಟೆ ಸೇರಿದಂತೆ ಹಲವು ಮಂದಿ ಆಗಮಿಸಿ ಸಂಸ್ಥೆ ಶುಭ ಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.