ನುಳಿಯಾಲು ನಾಗೇಶ್ ರೈಗೆ ನುಡಿನಮನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾಗೇಶ್ ರೈಯವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿ – ಪುರಂದರ ರೈ ಮಿತ್ರಂಪಾಡಿ

ಪುತ್ತೂರು: ಅ. 4 ರಂದು ನಿಧನರಾದ ಸುಳ್ಯದ ಕೆಎಫ್‌ಡಿಸಿ ಉದ್ಯೋಗಿ, ನುಳಿಯಾಲು ತರವಾಡು ಕುಟುಂಬದ ಸದಸ್ಯರಾದ ನುಳಿಯಾಲು ನಾಗೇಶ್ ರೈಯವರ ಉತ್ತರ ಕ್ರಿಯೆಯು ಅ. 14ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಜರಗಿದ ನುಡಿನಮನ ಕಾರ್‍ಯಕ್ರಮದಲ್ಲಿ ಉದ್ಯಮಿ ಪುರಂದರ ರೈ ಮಿತ್ರಂಪಾಡಿಯವರು ಮಾತನಾಡಿ ನುಳಿಯಾಲು ನಾಗೇಶ್ ರೈಯವರು ಶುದ್ಧ ಮನಸಿನ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು. ಅವರು ಕಲಾಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದರು, ವೃತ್ತಿ ಬದುಕಿನ ಜೊತೆಗೆ ಸಂಘಟನಾ ಕ್ಷೇತ್ರದಲ್ಲೂ ನಾಗೇಶ್ ರೈ ದೊಡ್ಡ ಕೊಡುಗೆ ನೀಡಿದ್ದಾರೆ. ನುಳಿಯಾಲು ತರವಾಡು ಕುಟುಂಬದ ನಿರ್ಮಾಣದ ಸಂದರ್ಭದಲ್ಲಿ ಸದಾ ನಮ್ಮ ಜೊತೆ ಇದ್ದು, ಅವರು ನೀಡಿದ ಸಹಕಾರವನ್ನು ಎಂದಿಗೂ ಮರೆಯಲಾಗದು. ಬೆಳ್ಳಾರೆ ಜೇಸಿ ಸಂಸ್ಥೆಯ ಸ್ಥಾಪನೆಯಲ್ಲೂ ತಮ್ಮ ಶ್ರಮ ಇದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ನಮಗೆಲ್ಲ ಮಾರ್ಗದರ್ಶನೀಯ ಎಂದರು.

ಸುಳ್ಯದ ನಿವೃತ್ತ ಉಪನ್ಯಾಸಕ ಪ್ರಭಾಕರ್ ಶಿಶಿಲರವರು ಮಾತನಾಡಿ ನಾಗೇಶ್ ರೈರವರು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ, ನಾಗೇಶ್ ರೈಯವರು ತುಳು ಭಾಷೆಯಲ್ಲಿ ತುಂಬಾ ಪ್ರಬದ್ಧತೆಯನ್ನು ಸಾಧಿಸಿದ್ದರು ಎಂದು ನುಡಿನಮನ ಸಲ್ಲಿಸಿದ್ದರು.

ನಾಗೇಶ್ ರೈಯವರ ಪತ್ನಿ ವಿನೋದಿನಿ ಎನ್ ರೈ. ಬಳ್ಳಮಜಲುಗುತ್ತು, ಪುತ್ರ ದರ್ಶಿತ್ ರೈ, ಪುತ್ರಿ ಧನ್ಯನಾ ರೈ, ಅಳಿಯ ಪ್ರಜೋತ್ ರೈ, ಸಹೋದರರಾದ ಶ್ರೀನಿವಾಸ್ ರೈ ನುಳಿಯಾಲು, ಗಂಗಾಧರ್ ರೈ ಸೊಣಂಗೇರಿ, ವಿನೋದ್ ರೈ ಕುಂತೂರು, ಸಹೋದರಿಯರಾದ ಚಂದ್ರಾವತಿ ಆರ್ ರೈ, ಜಲಜಾಕ್ಷಿ ಜೆ.ಶೆಟ್ಟಿ, ಭಾವಂದಿರಾದ ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಸಾಮಾಜಿಕ ಮುಂದಾಳು ಕೆ.ಎಸ್. ವಿಜಯಕುಮಾರ್ ರೈ ಬಳ್ಳಮಜಲುಗುತ್ತು, ಆರ್ಯಾಪು ಗ್ರಾ.ಪಂ, ಮಾಜಿ ಸದಸ್ಯ ಕೆ.ಎಸ್, ಜಯಪ್ರಕಾಶ್ ರೈ ಬಳ್ಳಮಜಲುಗುತ್ತು, ನಾದಿನಿ ವಿಲಾಸಿನಿ ವಿ.ರೈರವರುಗಳು ಉಪಸ್ಥಿತರಿದ್ದರು.

ಶಾಸಕ ಸಂಜೀವ ಮಠಂದೂರು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾದಾಕೃಷ್ಣ ರೈ, ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್‍ಯದರ್ಶಿಪುರುಷೋತ್ತಮ ಮುಂಗ್ಲಿಮನೆ, ಪುತ್ತೂರು ತಾ.ಪಂ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕುರಿಯ ಉಳ್ಳಾಲ ಶ್ರೀ ವಿಷ್ಣು ಸೇವಾ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಸುಳ್ಯ ರಂಗಮನೆಯ ಜೀವನ್‌ರಾಮ್ ಸುಳ್ಯ, ಉದ್ಯಮಿ ಸುಧಾಕರ್ ರೈ ಪೆರಾಜೆ, ರಘುನಾಥ ರೈ ನುಳಿಯಾಲು, ರಾಮಯ್ಯ ರೈ ನುಳಿಯಾಲು, ಜಯಂತ ಶೆಟ್ಟಿ ಉಜಿರೆ, ರವೀಂದ್ರ ಶೆಟ್ಟಿ ನುಳಿಯಾಲು, ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಚಂದ್ರಹಾಸ್ ರೈ ತುಂಬೆದಕೋಡಿ ಸಹಿತ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಂದಾಳುಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರುಗಳು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.