ಪುತ್ತೂರಿನಲ್ಲಿ ಪ್ರಥಮಬಾರಿ ‘ಸ್ವದೇಶಿ ಸಂಭ್ರಮ’ – ಮಳಿಗೆಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೈಮಗ್ಗ ಕರಕುಶಲ ಸ್ವದೇಶಿ ಉತ್ಪನ್ನಗಳ ಪ್ರದರ್ಶನ, ಮಾರಾಟ
  • 66 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ – ವೋಕಲ್ ಪಾರ್ ಲೋಕಲ್

ಪುತ್ತೂರು: ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ಇದರ ಸಹಯೋಗದೊಂದಿಗೆ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೋಕಲ್ ಫಾರ್ ಲೋಕಲ್ ಆಗಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ‘ಸ್ವದೇಶಿ ಸಂಭ್ರಮ’ ಮೂರು ದಿನದ ಮೇಳವಾಗಿ ಕೈಮಗ್ಗ, ಕರಕುಶಲ, ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಮೂರು ದಿನದ ಮೇಳದಲ್ಲಿ ವಿವಿಧ ಮಳಿಗೆಗಳನ್ನು ಅಳವಡಿಸಲು ಸ್ಥಳವಕಾಶ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮೇಳ ನಡೆಯಲಿದ್ದು, ಮೇಳದಲ್ಲಿ ಕೈಮಗ್ಗದ ಹಲವು ಪ್ರದೇಶಗಳ ವಿಶಿಷ್ಟ ವಿನ್ಯಾಸ ಗಳ ಉಡುಗೆಗಳು, ಬಟ್ಟೆಗಳು, ಇಳಕಲ್, ಮರಾಠಿ ಪೈಠನೀ, ಮಗ್ಗದ ಸೀರೆ, ಹತ್ತಿ ನೂಲಿನ ಸೀರೆಗಳು ಸೇರಿದಂತೆ ಆಕರ್ಷಕ ಕರಕುಶಲ ವಸ್ತುಗಳು, ಆತ್ಮನಿರ್ಭರ ಪರಿಕಲ್ಪನೆಯಲ್ಲಿ ತಯಾರಾದ ಉತ್ತಮ ಗುಣಮಟ್ಟದ ಗೃಹೋತ್ಪನ್ನಗಳು, ಆಹಾರ ಪದಾರ್ಥಗಳು, ಚೆನ್ನಪಟ್ಟಣದ ಆಟಿಕೆಗಳು, ವಿಶಿಷ್ಟ ಯಂತ್ರದ ಪ್ರಾತ್ಯಕ್ಷಿಕೆ, ಉತ್ಕೃಷ್ಟ ದೇಸೀ ಉತ್ಪನ್ನಗಳು, ಬೆಣ್ಣೆ ದೋಸೆ, ಹಾಟ್‌ಚಿಪ್ಸ್ ಮತ್ತು ಚಾಟ್ಸ್ ಸೇರಿದಂತೆ ಹಲವು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇಳದಲ್ಲಿ ಮಳಿಗೆಗಳನ್ನು ಅಳವಡಿಸಲು ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.