ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಿವ್ವಳ ಲಾಭ ರೂ.1,89,002.27, ಡಿವಿಡೆಂಟ್ ಶೇ.13, ಬೋನಸ್ ಲೀ.70 ಪೈಸೆ

ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಅ.16 ರಂದು ಸಂಘದ ಕಛೇರಿಯ ಎದುರಿನಲ್ಲಿರುವ ರಾಜ್‌ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು ವಾರ್ಷಿಕ ವರದಿ ಮಂಡನೆ ಮಾಡಿದರು.ಸಂಘವು 2006ರಲ್ಲಿ ಅರಂಭಗೊಂಡಿದ್ದು ವರದಿ ವರ್ಷದಲ್ಲಿ 9 ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಸಂಘದಲ್ಲಿ ಒಟ್ಟು121 ಮಂದಿ ಸದಸ್ಯರಿದ್ದಾರೆ.ವರ್ಷಾಂತ್ಯಕ್ಕೆ ರೂ.41800 ಪಾಲು ಬಂಡವಾಳ ಇರುತ್ತದೆ ಎಂದು ತಿಳಿಸಿದರು. ಸಂಘವು ವರದಿ ವರ್ಷದಲ್ಲಿ ಹಾಲು ಉತ್ಪಾದಕ ಸದಸ್ಯರಿಂದ ರೂ.39,13,928 ಮೌಲ್ಯದ 1,30,505 ಲೀಟರ್ ಹಾಲನ್ನು ಖರೀದಿಸಿ ಅದರಲ್ಲಿ ರೂ.38,68,879 ಮೌಲ್ಯದ 1,24,041 ಲೀಟರ್ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಹಾಗೂ ರೂ.4,83,945  ಮೌಲ್ಯದ 11,522 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಇದಲ್ಲದೆ ಪಶು ಆಹಾರ, ಲವಣ ಮಿಶ್ರಣ, ಗೋಧಾರ್ ಶಕ್ತಿ ಮಾರಾಟ, ಕರುಗಳ ಹಿಂಡಿ ಮಾರಾಟ, ನೆಕ್ಕು ಬಿಲ್ಲೆ ಮಾರಾಟ ಇತ್ಯಾದಿಗಳಲ್ಲಿ ವ್ಯಾಪಾರ ಲಾಭ ರೂ.4,99,821 ಮಾಡಿರುತ್ತದೆ ಎಂದು ತಿಳಿಸಿದರು. 2020-21 ನೇ ಸಾಲಿನಲ್ಲಿ ಒಟ್ಟು ರೂ.5,59,532.72 ಲಾಭ ಗಳಿಸಿ ಇದರಲ್ಲಿ ಆಡಳಿತ ವೆಚ್ಚ ಮತ್ತು ಇತರ ಖರ್ಚು ರೂ.3,69,540.45 ಕಳೆದ ರೂ.1,49,992.27 ನಿವ್ವಳ ಲಾಭ ಗಳಿಸಿಕೊಂಡಿರುತ್ತದೆ ಎಂದು ತಿಳಿಸಿದರು. ಇದರಲ್ಲಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಮತ್ತು ಲೀಟರ್‌ಗೆ 70ಪೈಸೆ ಬೋನಸ್ ನೀಡಲಾಗುತ್ತದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ದ.ಕ ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ.ಅನುದೀಪ್‌ರವರು ಹೈನುಗಾರಿಕೆ ಬಗ್ಗೆ ಮಾಹಿತಿ ನೀಡುತ್ತಾ, ಹೈನುಗಾರಿಕೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ ಎಂದರು. ದನಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಹಿಂಡಿಯನ್ನು ಕೊಡಬಾರದು ಎಂದ ಅವರು ಬೆಳಿಗ್ಗೆ ಹಸಿ ಹುಲ್ಲನ್ನು ಕೊಟ್ಟ ಬಳಿಕ ಹಿಂಡಿಯನ್ನು ಕೊಡುವುದು ಸೂಕ್ತ, ಹಿಂಡಿಯನ್ನು ಯಾವುದೇ ಕಾರಣಕ್ಕೂ ನೀರು ಮಾಡಿ ಕೊಡಬಾರದು ಎಂದು ತಿಳಿಸಿದರು. ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವ ಸಲುವಾಗಿ ದನಗಳಿಗೆ ಬೈಹುಲ್ಲು ಕೊಡುವುದು ಅತೀ ಅವಶ್ಯ ಎಂದರು. ದನಗಳಿಗೆ ಕಾಡುವ ರೋಗಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು, ಜಂತು ಹುಳದ ಬಾಧೆಗೆ ಮಾತ್ರೆಗಳನ್ನು ತಪ್ಪದೆ ಕೊಡಬೇಕು ಎಂದರು. ದನಗಳ ಆರೈಕೆ ಮತ್ತು ಉತ್ತಮ ಗುಣಮಟ್ಟದ ಹಾಲನ್ನು ಪಡೆಯಲು ನಾವು ವೈಜ್ಞಾನಿಕ ಕ್ರಮಗಳೊಂದಿಗೆ ಉತ್ತಮ ಪೋಷಕಾಂಶದ ಆಹಾರಗಳನ್ನು ಸರಿಯಾದ ರೀತಿಯಲ್ಲಿ ದನಗಳಿಗೆ ಕೊಡಬೇಕಾಗಿದೆ ಎಂದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ.ಯವರು ಮಾಹಿತಿ ನೀಡುತ್ತಾ, ಹೈನುಗಾರಿಕೆ ಮಾಡುವ ರೈತರಿಗೆ ಒಕ್ಕೂಟದಿಂದ ಸಿಗುವ ಸವಲತ್ತು, ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ರೈತರಿಗೆ ಹೈನುಗಾರಿಕೆ ಎನ್ನುವುದು ಎಲ್ಲಾ ವಿಧದಲ್ಲೂ ಪ್ರಯೋಜನಕಾರಿಯಾಗಿದೆ. ಒಂದು ಕಡೆಯಲ್ಲಿ ಹಾಲು ದೊರೆತರೆ ಇನ್ನೊಂದು ಕಡೆಯಲ್ಲಿ ಕೃಷಿಗೆ ಬೇಕಾದ ಗೊಬ್ಬರ ಕೂಡ ದೊರೆಯುತ್ತದೆ. ಆದ್ದರಿಂದ ಕಾಮಧೇನು ರೈತರಿಗೆ ಎಲ್ಲಾ ವಿಧದಲ್ಲೂ ದೇವರು ಎಂದು ಹೇಳಿದರು. ರೈತರು ಒಕ್ಕೂಟದಿಂದ ದೊರೆಯುವ ಸವಲತ್ತು, ಅನುದಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸವಲತ್ತುಗಳ ಪ್ರಯೋಜನ ಪಡೆದುಕೊಂಡು, ಇನ್ನಷ್ಟು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಬೆಳವಣಿಗೆಯಲ್ಲಿ ಎಲ್ಲಾ ಸದಸ್ಯರು ಪಾಲುದಾರರಬೇಕು ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬಹುಮಾನ ವಿತರಣೆ
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದವರನ್ನು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 15  ಸಾವಿರ ಲೀಟರ್‌ಗಿಂತಲೂ ಹೆಚ್ಚು ಹಾಲು ಹಾಕಿದ ವಿನಯ ಕುಮಾರ್‌ರವರು ಪ್ರಥಮ ಬಹುಮಾನ ಪಡೆದುಕೊಂಡರೆ, 14 ಸಾವಿರಕ್ಕಿಂತ ಹೆಚ್ಚು ಹಾಲು ಹಾಕಿದ ರಾಮಣ್ಣ ಗೌಡ ದ್ವಿತೀಯ ಬಹುಮಾನ ಪಡೆದುಕೊಂಡದರು. ಉಳಿದಂತೆ ೫ ಸಾವಿರಕ್ಕಿಂತ ಹೆಚ್ಚು ಹಾಲು ಹಾಕಿದವರಲ್ಲಿ ವಿನಯ ಕುಮಾರ್, ರಾಮಣ್ಣ ಗೌಡ, ವೀರಪ್ಪ ಮೂಲ್ಯ, ನಾರಾಯಣ ಪೂಜಾರಿ ಮತ್ತು ಸುಧಾಕರ ಆಳ್ವ ಕಲ್ಲಡ್ಕರವರಿಗೆ ಹಾಗೂ ಹಾಲು ಹಾಕುತ್ತಿರುವ ಸಂಘದ ಸದಸ್ಯರುಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಬಿ.ನಾರಾಯಣ ರೈ ಬಾರಿಕೆ, ಜೈರಾಜ್ ಭಂಡಾರಿ ಡಿಂಬ್ರಿ, ಮಿತ್ರದಾಸ ರೈ ಡೆಕ್ಕಲ, ಪ್ರೇಮ್‌ರಾಜ್ ರೈ ಪರ್ಪುಂಜ, ರಾಮಣ್ಣ ಗೌಡ ಪರನೀರು, ವೀರಪ್ಪ ಮೂಲ್ಯ ಬೈರಮೂಲೆ ಉಪಸ್ಥಿತರಿದ್ದರು. ನಿರ್ದೇಶಕಿ ಶರಣಾಕ್ಷಿ ಆಳ್ವ ಕುರಿಯ ಪ್ರಾರ್ಥಿಸಿದರು. ನಿರ್ದೇಶಕ, ಮಾಜಿ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳ ಸ್ವಾಗತಿಸಿದರು. ನಿರ್ದೇಶಕ ಸುಧಾಕರ ಆಳ್ವ ಕಲ್ಲಡ್ಕ ವಂದಿಸಿದರು. ಹಾಲು ಪರೀಕ್ಷಕಿ ಬೇಬಿ ಪರ್ಪುಂಜ ಸಹಕರಿಸಿದ್ದರು.

ಸಂಘದ ಕಟ್ಟಡ ನಿರ್ಮಾಣಕ್ಕೆ ೫ ಸೆಂಟ್ಸ್ ಜಾಗದ ಅವಶ್ಯಕತೆ ಇದೆ
ಪರ್ಪುಂಜ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡದ ಕೊರತೆ ಇರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ. ಬಿ.ಎಂ.ಸಿ ಸೇರಿದಂತೆ ವ್ಯವಸ್ಥಿತ ಕಟ್ಟಡ ನಿರ್ಮಾಣ ಮಾಡಲು ಸುಮಾರು ೫ ಸೆಂಟ್ಸ್ ಜಾಗದ ಅವಶ್ಯಕತೆ ಇದೆ. ಪರ್ಪುಂಜ ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ಜಾಗ ದೊರೆತರೆ ಬಹಳಷ್ಟು ಉತ್ತಮ. ಜಾಗ ಇದ್ದರೆ ಸಂಘಕ್ಕೆ ತಿಳಿಸಬಹುದಾಗಿದೆ ಎಂದು ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.