ಆಲಂಕಾರಿನಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೃಷಿಯಿಂದ ಬದುಕನ್ನು ನಿರ್ವಹಣೆ ಮಾಡಬಹುದು – ಸಚಿವ ಅಂಗಾರ ಎಸ್.

ಆಲಂಕಾರು: ತೋಟಗಾರಿಕೆ ಇಲಾಖೆ ಜಿ.ಪಂ ಪುತ್ತೂರು, ಗ್ರಾಮ ಪಂಚಾಯತ್ ಆಲಂಕಾರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರ ಸಹಬಾಗಿತ್ವದಲ್ಲಿ 2021-22ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿಯಲ್ಲಿ 2 ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಸಚಿವರಾದ ಅಂಗಾರ.ಎಸ್. ರವರು ಮಾತನಾಡಿ ಕೃಷಿಯಿಂದ ತನ್ನ ಬದುಕನ್ನು ನಿರ್ವಹಣೆ ಮಾಡಬಹುದು. ನಮ್ಮ ದೇಶದಲ್ಲಿರುವ ಎಲ್ಲಾ ಜನರಿಗೆ ಸರಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ ಅ ನಿಟ್ಟಿನಲ್ಲಿ ಸರ್ಕಾರ ಕೂಡ ಸ್ವ-ಉದ್ಯೋಗಕ್ಕೆ ಹೆಚ್ಚು ಒತ್ತನ್ನು ನೀಡುವ ಕೆಲಸ ಮಾಡುತ್ತಿದೆ. ಅದರಲ್ಲಿ ಜೇನು ಕೃಷಿಯು ಕೂಡ ಒಂದು ಭಾಗವಾಗಿದೆ. ನಮ್ಮ ಭಾಗದ ಜೇನು ತಳಿಗಳನ್ನು ಅಭಿವೃದ್ದಿ ಪಡಿಸುವಂತೆ ಇಲಾಖೆಗೆ ಸೂಚನೆ ನೀಡಿ ಜೇನುತಳಿಗೆ ಬೇಕಾದ ಪೆಟ್ಟಿಗೆಯನ್ನು ಜೇನು ಕುಳಿತುಕೊಳ್ಳಲು ಯೋಗ್ಯ ಇರುವ ಮರದಲ್ಲಿ ಪೆಟ್ಟಿಗೆ ತಯಾರು ಮಾಡುವಂತೆ ತಿಳಿಸಿದರು. ಮೀನು ಕೃಷಿಯು ಕೂಡ ಹೆಚ್ಚು ಲಾಭ ತರುವ ಕೃಷಿಯಾಗಿದ್ದು ಇದಕ್ಕೆ ಜನರು ಹೆಚ್ಚು ಒತ್ತು ನೀಡುವಂತೆ ತಿಳಿಸಿ ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಮೀನು ಕೃಷಿ ಹಾಗು ಮುತ್ತಿನ ಚಿಪ್ಪು ಬೆಳೆಯ ಬಗ್ಗೆ ತಮ್ಮ ಇಲಾಖೆ ವತಿಯಿಂದ ಮಾಹಿತಿ ಕಾರ್ಯಗಾರವನ್ನು ಮಾಡುವುದಾಗಿ ತಿಳಿಸಿ ಶುಭ ಹಾರೈಸಿದರು.


ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೇಖಾರವರು ಪ್ರಸ್ತಾವಿಕವಾಗಿ ಮಾತನಾಡಿ ರೈತರಿಗೆ ಜೇನು ಕೃಷಿಯ ತಾಂತ್ರಿಕ ಮಾಹಿತಿ ನೀಡಿ ಜೇನು ಕೃಷಿಗೆ ಸರಕಾರದ ಸಹಾಯಧನ ನೀಡುವುದು, ಜೇನು ಕೃಷಿ ಪ್ರೋತ್ಸಾಹಿಸುವುದರ ಮೂಲಕ ತೋಟಗಾರಿಕೆಯಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ಹೆಚ್ಚಿಸಿ ಹೆಚ್ಚು ಇಳುವರಿಯನ್ನು ಪಡೆಯುವುದು ಹಾಗು ರೈತರ ಕೃಷಿ ಚಟುವಟಿಕೆಯಲ್ಲಿ ತೋಡಗಿಸಿ ಹೆಚ್ಚು ಅರ್ಥಿಕ ಸದೃಡ ಮಾಡುವಂತಾದೇ ಈ ತರಬೇತಿಯ ಮೂಲ ಉದ್ದೇಶ ಎಂದು ತಿಳಿಸಿದರು.

ಲಕ್ಷೀ ನಾರಾಯಣ ಎನ್ನುವ ರೈತನಿಗೆ ಜೇನು ಪೆಟ್ಟಿಗೆ ಯನ್ನು ಸಚಿವರು ವಿತರಿಸಿದರು. ಪ್ರಗತಿಪರ ಜೇನು ಕೃಷಿಕ ಮನಮೋಹನ ಬೆಟ್ಟಂಪ್ಪಾಡಿಯವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಉಫಾದ್ಯಕ್ಷ ಪ್ರದೀಪ್ ರೈ ಮನವಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ, ಆಲಂಕಾರು ಗ್ರಾ.ಪಂ ಉಪಾದ್ಯಕ್ಷೆ ರೂಪಶ್ರೀ ಪಟ್ಟೆ, ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಪ್ರಾರ್ಥಿಸಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಪನ್ಮೂಲ ವ್ಯಕ್ತಿ ವೀರಪ್ಪ ಗೌಡ, ರಾಧಾಕೃಷ್ಣ ಬೆಟ್ಟಂಪಾಡಿ ಸಹಕರಿಸಿದರು. ತರಬೇತಿ ಕಾರ್ಯಗಾರದಲ್ಲಿ ಒಟ್ಟು 118 ಮಂದಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.