ಆಜಾದಿಕಾ ಅಮೃತ ಮಹೋತ್ಸವ ಅನುಭವಿಸಲು ದೂರದೃಷ್ಟಿಯಿಂದ ಕೆಲಸ ಮಾಡಿ – ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಮೃತ ಗ್ರಾ.ಪಂ, ವಸತಿ ಯೋಜನೆ ಉದ್ಘಾಟನೆಯಲ್ಲಿ ಶಾಸಕ ಸಂಜೀವ ಮಠಂದೂರು
  • ಉಪ್ಪಿನಂಗಡಿ, ಕಬಕ, ಆರ್ಯಾಪು, ಇಡ್ಕಿದುಗೆ ಅಮೃತ ಗ್ರಾ.ಪಂ ಯೋಜನೆಗೆ ಆಯ್ಕೆ
  • ಬಲ್ನಾಡು, ಪಾಣಾಜೆ, ನಿಡ್ಪಳ್ಳಿ, ಇಡ್ಕಿದುಗೆ ಅಮೃತ ವಸತಿ ಯೋಜನೆಗೆ ಆಯ್ಕೆ


ಪುತ್ತೂರು: ದೇಶದ ಪ್ರಧಾನಿ ಹತ್ತಾರು ಕಾರ್ಯಕ್ರಮ ಕೊಡುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮ ಆಚರಿಸುವಲ್ಲಿ 125 ಕೋಟಿ ಜನ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟದ ವಿಚಾರವನ್ನು ಮನಗೊಳ್ಳಬೇಕು. ರಾಷ್ಟ್ರೋತ್ಥಾನದ ಕನಸು ಈಗ ನಾವು ಕಂಡರೆ ಮುಂದಿನ 25 ವರ್ಷದಲ್ಲಿ ಅದು ಸಾಕಾರಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಇವತ್ತು ಆಜಾದಿಕ ಅಮೃತ ಮಹೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಆಯ್ಕೆಗೊಂಡ ಪಂಚಾಯತ್‌ಗಳು ಅಮೃತ ಮಹೋತ್ಸವವನ್ನು ಅನುಭವಿಸಲು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ವಿಶಿಷ್ಟ ಸಾಧನೆ ಮಾಡಬೇಕೆಂದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್, ಇದರ ಆಶ್ರಯದಲ್ಲಿ ಭಾರದತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಮೃತ ಗ್ರಾಮಪಂಚಾಯತ್ ಹಾಗು ಅಮೃತ ವಸತಿ ಯೋಜನೆಯ ಕಾರ್ಯಕ್ರಮವನ್ನು ಪುತ್ತೂರು ತಾ.ಪಂ ಕಿರು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಭಾರತ ಮುಂದಿನ 100ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಜಗತ್ತಿನಲ್ಲಿ ನಮ್ಮ ಸ್ಥಾನ ಮಾನ ಹೇಗಿರಬೇಕು ಎಂದು ದೇಶದ ಜನರು ಚಿಂತನೆ ಮಾಡುವ ಕೆಲಸವನ್ನು ಭಾರತ ಪ್ರಧಾನಿಯವರು ಮತ್ತು ರಾಜ್ಯದ ಮುಖ್ಯಮಂತ್ರಿಯವರು ಮಾಡುತ್ತಿದ್ದಾರೆ. ಅವರ ಚಿಂತನೆಯನ್ನು ಸಾಕಾರಗೊಳಿಸುವುದು ಜನಸಾಮಾನ್ಯರ ಕರ್ತವ್ಯ.

ಬೇರೆ ಬೇರೆ ಮುಂದುವರಿದ ರಾಷ್ಟ್ರಗಳು ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯದ ಬಗ್ಗೆ ಆರ್ಥಿಕತೆಗೆ ಕೆಲಸ ಮಾಡಿದಕ್ಕಿಂತ ಹೆಚ್ಚಾಗಿ ಈ ದೇಶದಲ್ಲಿ ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ಮತ್ತು ಆರ್ಥಿಕ ಚೈತನ್ಯ ತುಂಬಿಸುವ ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಆಜಾಧಿಕ ಸಂಭ್ರಮ ಆಚರಿಸುತ್ತಿದ್ದೇವೆ. 25 ವರ್ಷದ ಹಿಂದೆ ನಾನು ತಾ.ಪಂ ಸದಸ್ಯನಾಗಿದ್ದೆ. 75ನೇ ವರ್ಷಕ್ಕೆ ನಾನು ಶಾಸಕನಾಗಿದ್ದೇನೆ ಹಾಗೆ ಗ್ರಾ.ಪಂ ಜನಪ್ರತಿಧಿನಿಗಳು ಮುಂದಿನ 25 ವರ್ಷದಲ್ಲಿ ಅಮೃತವನ್ನು ಸವಿಯಬೇಕು. ಅದಕ್ಕಾಗಿ ಜಗತ್ತಿನಲ್ಲಿ ಭಾರತ ಸೂಪರ್ ಪವರ್ ದೇಶವಾಗಬೇಕು. ಅದಕ್ಕಾಗಿ ಆಜಾದಿಕ ಅಮೃತ ಮಹೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ ಆಯ್ಕೆಗೊಂಡ ಪಂಚಾಯತ್‌ಗಳು ಅದನ್ನು ಅನುಭವಿಸಬೇಕು. ಅನುಭವಿಸುವ ಸಂದರ್ಭದಲ್ಲಿ ಪಂಚಾಯತ್‌ಗಳು ತಿಂಗಳಿಗೊಂದರಂತೆ ವರ್ಷಕ್ಕೆ 12 ಕಾರ್ಯಕ್ರಮ ಮಾಡಬೇಕು. ಸ್ವಾತಂತ್ರ್ಯಕ್ಕಾಗಿ ಯಾರ್‍ಯಾರು ತಮ್ಮ ಸರ್ವಸ್ವವನ್ನು ದೇಶಕ್ಕೆ ಸಮರ್ಪಿಸಿದ್ದಾರೋ ಅವರ ಸ್ಮರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಪಂಚಾಯತ್‌ಗಳಲ್ಲೂ ಮಹತ್ಮಾಗಾಂಧಿ, ಸುಭಾಶ್ಚಂದ್ರ ಭೋಸ್, ಅಬ್ದುಲ್ ಕಲಾಂ ಅವರ ದೊಡ್ಡ ದೊಡ್ಡ ಭಾವಚಿತ್ರ, ಶ್ಲೋಗನ್ ಹಾಕುವ ಮೂಲಕ ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ನೆನಪಿಸುವ ಕೆಲಸ ಮಾಡಬೇಕು. ಸ್ವಚ್ಚತೆ, ಆರೋಗ್ಯ, ಪರಿಸರ ಉಳಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳು ಪ್ರತಿ ತಿಂಗಳು ಆಗಬೇಕು. ಮುಂದಿನ 25 ವರ್ಷದಲ್ಲಿ ನಮ್ಮಪಂಚಾಯತ್ ಹೇಗಿರಬೇಕೆಂದು ಈಗಲೇ ಕೆಲಸಮಾಡಬೇಕು. ಇಲ್ಲಿ ಕೇವಲ ಸಂಭ್ರಮದ ಕಾರ್ಯಕ್ರಮ ಅಲ್ಲ. ಸಂದೇಶ ಕೊಡುವ ಕಾರ್ಯಕ್ರಮ ಆಗಬೇಕೆಂದರು.

ಪ್ರತಿ ಗ್ರಾ.ಪಂಗೆ ರೂ. 25ಲಕ್ಷ:
ತಾಪಂ ಆಡಳಿತಾಧಿಕಾರಿ ಸಂಧ್ಯಾ ಕೆ.ಎಸ್. ಮಾತನಾಡಿ, ರಾಜ್ಯದಲ್ಲಿ 750 ಮತ್ತು ದ.ಕ.ದಲ್ಲಿ 27 ಗ್ರಾಪಂಗಳನ್ನು ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಆರಿಸಲಾಗಿದೆ. ಇದರಡಿಯಲ್ಲಿ ಪ್ರತೀ ಗ್ರಾಪಂಗೆ 25 ಲಕ್ಷ ರೂ. ಸಿಗಲಿದೆ. ಇದರಲ್ಲಿ ಸೌರ ವಿದ್ಯುತ್, ಘನ- ದ್ರವ್ಯ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಯೋಜನೆಗಳನ್ನು ಜಾರಿಗೊಳಿಸಬೇಕು. ಅಮೃತ ವಸತಿ ಗ್ರಾಪಂಗಳು ತಮ್ಮಲ್ಲಿನ ವಸತಿ ರಹಿತರಿಗೆ ವಸತಿ ನೀಡಲು ಯೋಜನೆ ಹಮ್ಮಿಕೊಳ್ಳಬೇಕು ಎಂದರು.

ರಾಜ್ಯದ ತಂಡದಿಂದ ತಪಾಸಣೆ:
ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾ.ಪಂ ಯೋಜನೆಯಲ್ಲಿ ಬೀದಿ ದೀಪ, ವೈಜ್ಞಾನಿಕವಾಗಿ ಘನತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ, ಸೌರ ದೀಪ, ಡಿಜಿಟಲ್ ಲೈಬ್ರೇರಿ, ಅದೇ ರೀತಿ ಗ್ರಾ.ಪಂ ವಸತಿ ಮತ್ತು ನಿವೇಶನ ರಹಿತರಿಗೆ ಈ ವರ್ಷ ಎಲ್ಲರಿಗೂ ಶೇ.100 ರಷ್ಟು ವಸತಿ ಯೋಜನೆ ನೀಡಲುವ ಯೋಜನೆ ಇದಾಗಿದೆ. ಈ ಯೋಜನೆ ಅನುಷ್ಟಾನ ಆದ ತಕ್ಷಣ ರಾಜ್ಯದಿಂದ ಪ್ರತ್ಯೇಕ ತಂಡವೊಂದು ಬಂದು ತಪಾಸಣೆ ನಡೆಸುತ್ತದೆ ಎಂದರು.

ತಹಸೀಲ್ದಾರ್ ರಮೇಶ್ ಬಾಬು, ಬಂಟ್ವಾಳ ತಾಪಂ ಸಹಾಯಕ ನಿರ್ದೇಶಕ ದಿನೇಶ್ ಎಂ., ಕಡಬ ತಾಪಂ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ವಂದಿಸಿರು. ನರೇಗ ಮಾಹಿತಿ ಶಿಕ್ಷಣ ಸಂವಾಹಕ ಭರತ್‌ರಾಜ್ ಕಾರ್ಯಕ್ರಮ ನಿರೂಪಿಸಿರು. ವಸತಿ ಯೋಜನೆಯ ನೋಡೆಲ್ ಅಧಿಕಾರಿ ಸಿರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಿಟಕಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಆಶ್ರಯಯ ಯೋಜನೆ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ, ಅಮೃತ ಗ್ರಾಮಪಂಚಾಯತ್ ಯೋಜನೆಯಡಿ ಆಯ್ಕೆಗೊಂಡ ಉಪ್ಪಿನಂಗಡಿ ಗ್ರಾ.ಪಂ ಅಧ್ಯಕ್ಷೆ ಉಷಾ ಮುಳಿಯ, ಕಾರ್ಯದರ್ಶಿ ದಿನೇಶ್, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕಲ್ಲೇಗ, ಪಿಡಿಒ ಆಶಾ, ಆರ್ಯಾಪು ಗ್ರಾ.ಪಂ ಅಧ್ಯಕ್ಷ ಸರಸ್ವತಿ, ಪಿಡಿಒ ನಾಗೇಶ್, ಮತ್ತು ಇಡ್ಕಿದು ಗ್ರಾಮಪಂಚಾಯತ್‌ನ ಅಧ್ಯಕ್ಷ ಸುಧೀರ್ ಶೆಟ್ಟಿ, ಪಿಡಿಒ ಗೋಕುಲ್, ಹಾಗೂ ಅಮೃತ ವಸತಿ ಯೋಜನೆಗೆ ಆಯ್ಕೆಯಾದ ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷೆ ಪರಮೇಶ್ವರಿ, ಪಿಡಿಒ ಶರೀಪ್, ಪಾಣಾಜೆ ಗ್ರಾ.ಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಅಬೂಬಕ್ಕರ್, ಪಿಡಿಒ ಚಂದ್ರಮತಿ, ನಿಡ್ಪಳ್ಳಿ ಗ್ರಾ.ಪಂ ಅಧ್ಯಕ್ಷೆ ಗೀತ, ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಿಡಿಒ ಸಂಧ್ಯಾ ಲಕ್ಷ್ಮೀ, ಮತ್ತು ಇಡ್ಕಿದು ಗ್ರಾಮಪಂಚಾಯತ್ ಅಧ್ಯಕ್ಷ, ಪಿಡಿಒ ಉಪಸ್ಥಿತರಿದ್ದರು.

ತಿಂಗಳಿಗೊಮ್ಮೆ ಭೇಟಿ ನೀಡುತ್ತೇನೆ
ಅಮೃತ ಗ್ರಾಮಪಂಚಾಯತ್ ಹಾಗು ಅಮೃತ ವಸತಿ ಯೋಜನೆಯಲ್ಲಿ ಆಯ್ಕೆಗೊಂಡ ಪಂಚಾಯತ್‌ಗಳು 1 ವರ್ಷದಲ್ಲಿ 12 ಕಾರ್ಯಕ್ರಮ ಮಾಡಬೇಕು. ಸರ್ವಜನಾಂಗದ ಶಾಂತಿ ಮತ್ತು ಸುಂದರ ತೋಟ ಮಾಡಿ. ಸ್ವಚ್ಛತೆ, ಸಂಸ್ಕಾರ, ಜಾಗೃತಿ ಮೂಡಿಸುವ ಕೆಲಸ ಮಾಡಿ. ನನ್ನ ಕಲ್ಪಣೆ ಮುಂದಿಟ್ಟಿದ್ದೇನೆ. ನಿಮ್ಮ ಕಲ್ಪಣೆ ಅಲ್ಲಿ ಅನುಷ್ಠಾನ ಆಗಬೇಕು. ಈ ಕುರಿತು ನಾನು ತಿಂಗಳಿಗೊಮ್ಮೆ ಪ್ರತಿ ಪಂಚಾಯತ್‌ಗೆ ಭೇಟಿ ನೀಡುತ್ತೇನೆ.
ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.