ಆಲಂಕಾರು ಹಸಿ ಮೀನು ಮಾರುಕಟ್ಟೆ ಏಲಂ – ಉದ್ಯೋಗದ ದೃಷ್ಟಿಯಿಂದ ಗ್ರಾಮಸ್ಥರಿಗೆ ಅವಕಾಶ ಕಲ್ಪಿಸಿದ ಪಂಚಾಯತ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಆಲಂಕಾರು ಗ್ರಾ.ಪಂ ಪಂಚಾಯತ್ ಹಸಿ ಮೀನು ಮಾರುಕಟ್ಟೆಯು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಆಲಂಕಾರು ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಮಾತ್ರ ಹಸಿ ಮೀನು ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಯುವಕರು ಪಂಚಾಯತ್ ಗೆ ಲಿಖಿತ ಮನವಿಯನ್ನು ನೀಡಿದ್ದರು. ಕೊರೋನಾ ಮಹಾಮಾರಿಯಿಂದಾಗಿ ಗ್ರಾಮಸ್ಥರಿಗೆ ಉದ್ಯೋಗವನ್ನು ನೀಡಬೇಕೆನ್ನುವ ನೆಲೆಗಟ್ಟಿನ ಮೇಲೆ ಹಾಗು ಯುವಕರ ಮನವಿಯನ್ನು ಪುರಸ್ಕರಿಸಿದ ಪಂಚಾಯತ್ ಈ ಭಾರಿ ಏಲಂನಲ್ಲಿ ಭಾಗವಹಿಸಲು ಆಲಂಕಾರು ಗ್ರಾ.ಪಂ ಗ್ರಾಮಸ್ಥರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಳೆದ ಬಾರಿ ಏಲಂ ನಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡಲಾಗಿತ್ತು.ಬಿಡ್ಡುದಾರರಾಗಿ ಆಲಂಕಾರು ಗ್ರಾಮಸ್ಥರಾದ ಚಂದ್ರಶೇಖರ,ಅಬುಬಕ್ಕರ್ ನೆಕ್ಕರೆ, ಮಲ್ಲಿಕಾರ್ಜುನ,ನಾಣ್ಯಪ್ಪ ಗೌಡ,ಹರೀಶ ಎನ್, ಜುಬೇರ್ ,ಕೇಶವ ಗೌಡ ಆಲಡ್ಕ ಭಾಗವಹಿಸಿದ್ದರು. ಆಲಂಕಾರಿನ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಸ್ಟಾಲ್ 1 ರ ಅರಂಬಿಕ ಪಂಚಾಯತ್ ಬಿಡ್ಡು ರೂ 1, 50,000 ಆಗಿತ್ತು ಅಂತಿಮ ವಾಗಿ ಕೇಶವ ಗೌಡ ಆಲಡ್ಕರವರು ರೂ 3,90,000 ಕ್ಕೆ ಏಲಂ ನಲ್ಲಿ ಪಡೆದರು. ಆಲಂಕಾರು ಹಸಿ ಮೀನು ಮಾರುಕಟ್ಟೆ ಇರುವ ಸ್ಟಾಲ್ ನಂಬ್ರ 2 ರ ಪಂಚಾಯತ್ ಆರಂಬಿಕ ಬಿಡ್ಡು ರೂ 100000 ಆಗಿತ್ತು ಅಂತಿಮವಾಗಿ ಸ್ಟಾಲ್ ನಂಬರ್ 2 ನ್ನು 1,06,000 ಕ್ಕೆ ಏಲಂನಲ್ಲಿ ಮಲ್ಲಿಕಾರ್ಜುನ ರವರು ಪಡೆದರು. 3 ನೇ ಸ್ಟಾಲ್ ಗೆ ಪಂಚಾಯತ್ ಬಿಡ್ಡು 1,00,000 ಆಗಿತ್ತು. ಆದರೆ ಯಾವುದೇ ಬಿಡ್ಡುದಾರರು 3ನೇ ಸ್ಟಾಲ್ ಗೆ ಅಸಕ್ತಿ ತೊರದ ಕಾರಣ 3ನೇ ಸ್ಟಾಲ್ ನ ಏಲಂ ನ್ನು ಮುಂದುಡಲಾಯಿತು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಏಲಂ ಪ್ರಕ್ರಿಯೆ ಶರ್ತ ಗಳನ್ನು ಬಿಡ್ಡುದಾರರಿಗೆ ತಿಳಿಸಿದರು.ಕಾರ್ಯದರ್ಶಿ ವಸಂತ ಶೆಟ್ಟಿ ಏಲಂ ಪ್ರಕ್ರಿಯೆಯನ್ನು ನಡೆಸಿ ಸ್ವಾಗತಿಸಿ,ವಂದಿಸಿದರು .ಪಂಚಾಯತ್ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ ಸದಸ್ಯರಾದ ಚಂದ್ರಶೇಖರ, ರವಿಕುಂಞಲಡ್ಡ, ಶ್ವೇತಾಕುಮಾರ್, ಸುನಂದಾ ಬಾರ್ಕುಳಿ ,ಶಾರದ ಉಪಸ್ಥಿತರಿದ್ದರು.ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.