ಯೋಧನ ಪುತ್ರಿಯಿಂದ ಕನ್ಯಾ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬದಲ್ಲಿ ಬಾಲಕಿಯರ ಪಾದಪೂಜೆ ನೆರವೇರಿಸಿ ಗಮನ ಸೆಳೆದ ಬಿಪಿಟಿ ವಿದ್ಯಾರ್ಥಿನಿ

ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ಆಧ್ಯಾತ್ಮದಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತು ಪ್ರಚಲಿತದಲ್ಲಿರುವಾಗಲೇ ಕಡಬದ ಯುವತಿಯೊಬ್ಬರು ಅದರಲ್ಲೂ ಬಿಪಿಟಿ(ಬ್ಯಾಚುಲರ್ ಆಫ್ ಫಿಸಿಯೋಥೆರಫಿ) ವಿದ್ಯಾರ್ಥಿನಿ ನವರಾತ್ರಿ ಉತ್ಸವದಲ್ಲಿ ಕನ್ಯಾ ಪೂಜೆ ಮಾಡಿ ಗಮನ ಸೆಳೆದಿದ್ದಾರೆ.


ಮಂಗಳೂರಿನ ಶ್ರೀನಿವಾಸ ಕಾಲೇಜಿನ ಬಿಪಿಟಿ ವಿದ್ಯಾರ್ಥಿನಿ, ಕಡಬ ಸಮೀಪದ ಅಮೈಯವರಾಗಿದ್ದು ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ದಿ|ಗೋಪಾಲಕೃಷ್ಣರವರ ಪುತ್ರಿ ಜಯಶ್ರೀರವರು ಆಧುನಿಕತೆಯ ಮಧ್ಯೆಯೂ ಆಧ್ಯಾತ್ಮದಲ್ಲಿ ಒಲವು ತೋರಿ ಪರಿಸರದ ಎಂಟು ಕನ್ಯೆಯರ ಪಾದ ಪೂಜೆ ಮಾಡಿ ಸೇವೆ ಮಾಡಿದ್ದಾರೆ. ನವರಾತ್ರಿಯ ಉತ್ಸವದ ಒಂಬತ್ತು ದಿನಗಳಲ್ಲಿ ಕೇವಲ ಫಲಾಹಾರ ಮಾತ್ರ ಸೇವಿಸಿ ಕಠಿಣ ವೃತ ಮಾಡಿ ದೇವಿಯ ಪೂಜೆ ಮಾಡಿರುವ ಇವರು ಹೈಫೈ ವಿಚಾರಗಳೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುವ ಯುವತಿಯರಿಗೆ ಮಾದರಿಯಾಗಿದ್ದಾರೆ. ನವರಾತ್ರಿಯ ಕೊನೆಯ ದಿನವಾದ ಶುಕ್ರವಾರ ಪರಿಸರದ ಎಂಟು ಕನ್ಯೆಯರನ್ನು ಮನೆಗೆ ಕರೆಸಿಕೊಂಡು ಆರಂಭದಲ್ಲಿ ಪಾದ ತೊಳೆದು, ಆರತಿ ಎತ್ತಿ, ತಿಲಕವಿಟ್ಟು ಕನ್ಯೆಯರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ದೇವಿಯ ಪ್ರಸಾದ ರೂಪದಲ್ಲಿ ಉಪಹಾರ ನೀಡಿದ ಜಯಶ್ರೀ ಕನ್ಯೆಯರ ಕೈ ತೊಳೆದು ಸೇವೆ ಮಾಡಿದ್ದಾರೆ. ಇವರ ಆಧ್ಯಾತ್ಮ ನಿಲುವಿಗೆ ಇವರ ತಾಯಿ, ಸುದ್ದಿ ಬಿಡುಗಡೆಯ ಕಡಬ ಕಛೇರಿಯ ಸಿಬ್ಬಂದಿ ಗೀತಾ ಅವರು ಸಹಕಾರ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.