ರಾಮಾಯಣ, ಮಹಾಭಾರತ, ಹಿಂದೂ ದೇವತೆಗಳಿಗೆ ನಿಂದನೆ – ಪ್ರೊ|ಭಗವಾನ್ ಸಹಿತ ಮೂವರ ವಿರುದ್ಧ ಚಾರ್ಜ್‌ಶೀಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದ ಪತ್ರಕರ್ತ ಶ್ಯಾಮಸುದರ್ಶನ್
  • ಬೆಂಗಳೂರು ಹೈಗ್ರೌಂಡ್ಸ್ ಪೊಲೀಸರಿಂದ ದೋಷಾರೋಪಣಾ ಪಟ್ಟಿ

ಬೆಂಗಳೂರು: ರಾಮಾಯಣ, ಮಹಾಭಾರತದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಲ್ಲದೆ, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೋಮುಭಾವನೆ ಕೆರಳಿಸಿದ್ದ ಆರೋಪದಲ್ಲಿ ಸಾಹಿತಿ ಪ್ರೊ| ಕೆಎಸ್ ಭಗವಾನ್ ಸಹಿತ ಮೂವರ ಮೇಲೆ ಉಪ್ಪಿನಂಗಡಿಯಲ್ಲಿ ಪತ್ರಕರ್ತ ಶ್ಯಾಮ ಸುದರ್ಶನ್ ಹೊಸಮೂಲೆ ನೀಡಿದ್ದ ದೂರಿನ ಆಧಾರದಲ್ಲಿ ದಾಖಲಾಗಿದ್ದ ಪ್ರಕರಣ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆಯಾಗಿ ತನಿಖೆ ನಡೆದು ಪೋಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಪ್ರೊ|ಕೆ.ಎಸ್. ಭಗವಾನ್ ಮೊದಲ ಆರೋಪಿಯಾದರೆ, ಸಾಹಿತಿ ಚಂಪಾ(ಚಂದ್ರಶೇಖರ್ ಪಾಟೀಲ್ ) ಅವರನ್ನು ಎರಡನೇ ಆರೋಪಿಯಾಗಿ, ಕಲೈಸೆಲ್ವಿ ಅವರನ್ನು ಮೂರನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.ಹಿಂದೂಗಳ ಪ್ರವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ತುಚ್ಛವಾಗಿ ಮಾತಾಡಿದ್ದಲ್ಲದೆ, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೋಮು ಭಾವನೆ ಕೆರಳಿಸಿದ್ದಾರೆ ಎಂದು ಆರೋಪಿಸಿ ಪ್ರೊ|ಕೆ.ಎಸ್. ಭಗವಾನ್ ಅವರ ವಿರುದ್ಧ ಕಹಳೆ ನ್ಯೂಸ್‌ನ ಶ್ಯಾಮ ಸುದರ್ಶನ್ ಭಟ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ 2015ರ ಸೆಪ್ಟೆಂಬರ್ 21ರಂದು ದೂರು ನೀಡಿದ್ದರು.

ಪ್ರೊ|ಕೆ.ಎಸ್. ಭಗವಾನ್
ಚಂದ್ರಶೇಖರ ಪಾಟೀಲ್ (ಚಂಪ)

`ರಾಮಾಯಣದ ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಹಿಂದೂ ದೇವತೆಗಳು ವ್ಯಭಿಚಾರಿಗಳು, ಮಹಾಭಾರತ ಓದಬೇಡಿ, ಭಗವದ್ಗೀತೆ ಓದಿದವರು ಭಯೋತ್ಪಾದಕರಾಗುತ್ತಾರೆ, ಉಪನಿಷತ್ತು ಕೆಟ್ಟ ಗ್ರಂಥ, ಹಿಂದೂ ದೇವಸ್ಥಾನಗಳು ಕೇವಲ ಹಣ ಮಾಡುವ ಯಂತ್ರಗಳಾಗಿವೆ ‘ ಎಂಬಿತ್ಯಾದಿಯಾಗಿ ಕೋಮುಭಾವನೆ ಕೆರಳಿಸುವಂಥ ಹೇಳಿಕೆ ನೀಡಿದ್ದಾರೆ ಎಂದು ಶ್ಯಾಮಸುದರ್ಶನ್ ಭಟ್ ಅವರು ದೂರಿನಲ್ಲಿ ಆರೋಪಿಸಿದ್ದರು.ಈ ಪ್ರಕರಣ ಉಪ್ಪಿನಂಗಡಿಯಿಂದ ಬೆಂಗಳೂರು ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆಗೊಂಡು ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಬೆಂಗಳೂರಿನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ದಾಖಲಿಸಿದ್ದಾರೆ 295(a) & 153 (a) 34ಸೆಕ್ಷನ್ ಆಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.