ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ:ವಿಷ್ಣು ಬೊಳುವಾರು

  • ರೂ.25.41 ಲಕ್ಷ ಲಾಭ, ಶೇ.10 ಡಿವಿಡೆಂಡ್

ಪುತ್ತೂರು: ಪಡೀಲಿನಲ್ಲಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘವು 2020-21ನೇ ಸಾಲಿನಲ್ಲಿ ರೂ.೨೫,೪೧,೫೧೬ ಲಾಭಗಳಿಸಿ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಘೋಷಣೆ ಮಾಡಿದರು.

ಸಭೆಯು ಅ.೧೯ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ನಡೆಯಿತು. ಪುತ್ತೂರು ಕಸಬಾ, ನೆಕ್ಕಿಲಾಡಿ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು, ಚಿಕ್ಕಮುಡ್ನೂರು, ಪಡ್ನೂರು, ಕಬಕ, ಕುಡಿಪ್ಪಾಡಿ, ಬಲ್ನಾಡು, ಆರ್ಯಾಪು ಹಾಗೂ ಕುರಿಯ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಘವು ವ್ಯವಹರಿಸುತ್ತಿದೆ. ವರ್ಷಾಂತ್ಯಕ್ಕೆ ಸಂಘದಲ್ಲಿ ೨೯೨ ಎ ತರಗತಿ ಸದಸ್ಯರಿಂದ ರೂ.೫,೧೯,೪೯೨ ಪಾಲು ಬಂಡವಾಳವನ್ನು ಹೊಂದಿದೆ. ರೂ.೪,೯೭,೨೮,೭೧೯.೦೯ ವಿವಿಧ ರೂಪದ ಠೇವಣಿ, ೮೫,೭೩,೩೭೭.೨೦ ನಿಧಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಹಾಗೂ ಮೂರ್ತೆದಾರರ ಮಹಾಮಂಡಲ ಬಿ.ಸಿ ರೋಡ್‌ನಲ್ಲಿ ತಲಾ ರೂ.೫೦೦೦ದಂತೆ ಪಾಲು ಬಂಡವಾಳ, ಒಟ್ಟು ರೂ.೫,೮೫,೫೯,೦೦೦ ಸಾಲ ವಿತರಿಸಲಾಗಿದ್ದು ವರ್ಷಾಂತ್ಯಕ್ಕೆ ರೂ.೫,೩೬,೦೮,೬೫೬ ಸಾಲ ಹೊರಬಾಕಿಯಿರುತ್ತದೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ೧೮ ಶೇಂದಿ ಮಾರಾಟದ ಪರವಾನಿಗೆಯಿದ್ದು ೧೦ಕೇಂದ್ರಗಳು ಕಾರ್ಯಾಚರಿಸುತ್ತಿದೆ. ಶೇಂದಿ ಮಾರಾಟದಿಂದ ರೂ.೩೨,೦೦೦ ಕಮಿಷನ್ ವಸೂಲಾಗಿದ್ದು ರೂ.೧೨,೧೦೦ಸರಕಾರಕ್ಕೆ ಪರವಾಣಿಗೆ ಶುಲ್ಕವಾಗಿ ಪಾವತಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣರವರು ವರದಿಯಲ್ಲಿ ತಿಳಿಸಿದರು.

ಸಂಘವು ಅಭಿವೃದ್ಧಿ ಹೊಂದಿ ಲಾಭ ಪಡೆಯುವಲ್ಲಿ ಸದಸ್ಯರ ಸಹಕಾರ ಬಹಳಷ್ಟಿದೆ. ಆಡಳಿತ ಮಂಡಳಿ ಶ್ರಮ ಮಾತ್ರ. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಕುರಿತು ಆಡಳಿತ ಮಂಡಳಿಯು ಬಹಳಷ್ಟು ಶ್ರಮಪಡುತ್ತಿದೆ. ನಾನಾ ಕಾರಣಗಳಿಂದ ಅಡಚಣೆ ಉಂಡಾಗುತ್ತಿದೆ. ಇದಕ್ಕಾಗಿ ಸಾಕಷ್ಟು ಅಲೆದಾಟ ನಡೆಯುತ್ತಿದೆ. ಮೂರ್ತೆದಾರಿಕೆ ಸಣ್ಣ ಕೆಲಸವಲ್ಲ. ಬಹಳ ಗೌರವದ ಕೆಲಸ. ಶೇಂದಿಗೂ ಬಹಳಷ್ಟು ದರವಿದೆ. ಯುವಕರು ಮೂರ್ತೆದಾರಿಕೆಯಲ್ಲಿ ಮುಂದೆ ಬರಬೇಕು ಅಧ್ಯಕ್ಷ ಸುಂದರ ಪೂಜಾರಿ ಬಡಾವು ತಿಳಿಸಿದರು.


ಸಂಘದಿಂದ ಆರ್ಥಿಕ ಸಹಕಾರ ನೀಡಬೇಕು:
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿಗೆ ಬಡವರ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹಾಗೂ ಮನೆ ನಿರ್ಮಾಣಗಳಿಗೆ ಸಂಘದಿಂದ ಸಹಕಾರ ನೀಡುವಂತೆ ಸದಸ್ಯ ಅಣ್ಣಿ ಪೂಜಾರಿಯವರು ಬೇಡಿಕೆ ಸಲ್ಲಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ಸುಂದರ ಪೂಜಾರಿಯವರು, ಅರ್ಹರ ಮಾಹಿತಿ ದೊರೆತ ಕೂಡಲೇ ಸ್ಪಂಧನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೋಡಿಂಬಾಡಿಯಲ್ಲಿ ಶಾಖೆ ಪ್ರಾರಂಭಿಸಿ:
ಕೋಡಿಂಬಾಡಿಯಲ್ಲಿ ಸಹಕಾರಿ ಸಂಘದ ಶಾಖೆ ತೆರೆಯುವಂತೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಅವಕಾಶವಿದ್ದರೆ ಶಾಖೆ ತೆರೆಯಬೇಕು. ಆ ಭಾಗವದಲ್ಲಿ ಮೂರ್ತೆದಾರಿಕೆ ಮಾಡುವವರಿದ್ದಾರೆ. ಅಲ್ಲದೆ ಅಲ್ಲಿ ಸಾಕಷ್ಟು ಠೇವಣಿಗಳು ಬರಲಿದೆ. ಜೊತೆಗೆ ಸ್ಥಳಿಯರಿಗೆ ಉದ್ಯೋಗವು ದೊರೆಯಲಿದೆ ಎಂದು ಸಂಘದ ಸದಸ್ಯರಾಗಿರುವ ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿಯವರು ತಿಳಿಸಿದರು. ಕೋಡಿಂಬಾಡಿ, ಕಬಕಗಳಲ್ಲಿ ಶಾಖೆ ತೆರೆಯುವ ಯೋಜನೆಯಿಂದೆ. ಸಂಘದ ಕೇಂದ್ರ ಕಚೇರಿಯ ಕಟ್ಟಡವಾದ ಬಳಿಕ ತೆರೆಯಲಾಗುವುದು ಎಂದು ಅಧ್ಯಕ್ಷ ಸುಂದರ ಪೂಜಾರಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಸಂಘದ ಆಡಳಿತ ಮಂಡಳಿಯ ಉತ್ತಮ ಆಡಳಿತ ಹಾಗೂ ಸಿಬಂದಿಗಳ ಪ್ರಾಮಾಣಿಕ ದುಡಿಮೆಯಿಂದ ಸಂಘವು ಲಾಭಗಳಿಸವಲ್ಲಿ ಸಹಕಾರಿಯಾಗಿದೆ. ಸದಸ್ಯರು ಸಂಘದಲ್ಲಿ ವ್ಯವಹರಿಸುವ ಮೂಲಕ ಸಂಘವು ಲಾಭ ಪಡೆಯುವಲ್ಲಿ ಸಹಕರಿಸಬೇಕು ಎಂದು ಹೇಳಿದರು.

ಬಿ.ಸಿ ರೋಡ್ ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ಆರ್.ಸಿ ನಾರಾಯಣ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದ ಅಮೂಲಾಗ್ರ ಬದಲಾವಣೆಯಲ್ಲಿ ಸಹಕಾರಿ ಕ್ಷೇತ್ರವು ಪ್ರಮುಖವಾಗಿದೆ. ತಾಲೂಕಿನಲ್ಲಿ ೫ ಮೂರ್ತೆದಾರರ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದ್ದು ದ. ಕ ಜಿಲ್ಲೆಯಲ್ಲಿ ಬಿಲ್ಲವ ಸಮಾಜದ ಕೊಡುಗೆಯು ಬಹಳಷ್ಟಿದೆ. ಸಂಘವು ನಿರಂತರವಾಗಿ ಲಾಭ ತರುವಲ್ಲಿ ಪ್ರಯತ್ನಿಸಿದ ಅಧ್ಯಕ್ಷ ಸುಂದರ ಪೂಜಾರಿಯವರು ಅಭಿನಂದನೀಯರು ಎಂದ ಅವರು ಇಬ್ಬರು ಸಚಿವರು ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರನ್ನು ನೀಡಿದ ಕೀರ್ತಿ ಬಿಲ್ಲವ ಸಮಾಜಕ್ಕಿದೆ ಎಂದರು.

ಸನ್ಮಾನ, ಪರಿಹಾರ ವಿತರಣೆ:
ಹಿರಿಯ ಮೂರ್ತೆದಾರರಾದ ಚಿಕ್ಕಮುಡ್ನೂರು ಗ್ರಾಮದ ತಿಮ್ಮಪ್ಪ ಪೂಜಾರಿ ಏಕ ಹಾಗೂ ಪಡ್ನೂರು ಗ್ರಾಮದ ಕೃಷ್ಣಪ್ಪ ಪೂಜಾರಿ ಮತಾವುರವರನ್ನು ಮಹಾಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಪಿಗ್ಮಿ ಸಂಗ್ರಾಹಕರಾದ ಸತೀಶ್ ಆರ್., ಭಾಸ್ಕರ್ ಕೆ., ದಿನೇಶ್ ಕೆ., ಶಿವಪ್ರಸಾದ್ ಎ., ಹಾಗೂ ಗಣೇಶ್ ಬಿಯವರಿಗೆ ತಲಾ ರೂ.೫೦೦೦ದಂತೆ ಕೋವಿಡ್-೧೯ ಪರಿಹಾರದ ಚೆಕ್‌ನ್ನು ವಿತರಿಸಲಾಯಿತು.

ಉಪಾಧ್ಯಕ್ಷ ಬಿ.ಕೆ ಆನಂದ ಸುವರ್ಣ ಬಪ್ಪಳಿಗೆ, ಬಾಳಪ್ಪ ಪೂಜಾರಿ ಕೇಪುಳು, ಶಯನಾ ಜಯಾನಂದ, ಪದ್ಮಪ್ಪ ಪೂಜಾರಿ ಮತಾವು, ವೀರಪ್ಪ ಪೂಜಾರಿ ಡೆಕ್ಕಾಜೆ, ಜಯಲಕ್ಷ್ಮೀ ಸುರೇಶ್, ಜಿನ್ನಪ್ಪ ಪೂಜಾರಿ ಮುರ, ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಿಗ್ಮಿ ಸಂಗ್ರಾಹಕರಾದ ದಿನೇಶ್ ಕೆ. ಪ್ರಾರ್ಥಿಸಿ, ಸತೀಶ್ ಆರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಚಂದಪ್ಪ ಪೂಜಾರಿ ಕಾಡ್ಲ ಸ್ವಾಗತಿಸಿ, ಗೋಪಾಲಕೃಷ್ಣ ಸುವರ್ಣ ಗೆಣಸಿನಕುಮೇರು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಎ. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಲೆಕ್ಕಿಗ ಸವಿತಾ ಹಾಗೂ ಗುಮಾಸ್ತ ಆದರ್ಶ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.