ಕ್ಯಾಡ್ ಸೆಂಟರ್‌ನ ದಶಮಾನೋತ್ಸವ-ವಿಜ್ರಂಭಣೆಯ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆ ಬಳಿಯ ಡಾಯಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಕ್ಯಾಡ್ ಸೆಂಟರ್‌ಗೆ ಇದೀಗ ದಶಮಾನೋತ್ಸವ ಸಂಭ್ರಮ. ಈ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಸಂಸ್ಥೆಯು ಅ.15 ರಂದು ಕೇಕ್ ಕತ್ತರಿಸುವ ಮೂಲಕ ವಿಜ್ರಂಭಣೆಯಿಂದ ಆಚರಿಸಿತು.

ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ವಾರ್ಷಿಕೋತ್ಸವದ ಪ್ರಯುಕ್ತ ಪವಿತ್ರ ಜಲ ಸಿಂಪಡಿಸಿ ಆಶೀರ್ವಚನ ನೀಡುತ್ತಾ, ಪ್ರತಿಷ್ಠಿತ ಕ್ಯಾಡ್ ಸೆಂಟರ್ ಸಂಸ್ಥೆಯು ಪುತ್ತೂರಿನಲ್ಲಿ ಹತ್ತು ವರ್ಷಗಳನ್ನು ಪೂರೈಸಿದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬಳಕೆ ಬಹಳ ಅನಿವಾರ್ಯ. ತಂತ್ರಜ್ಞಾನ ಅಭಿವೃದ್ಧಿಯಾದಾಗ ದೇಶವು ಪ್ರಗತಿಯತ್ತ ಸಾಗಬಲ್ಲುದು. ಪ್ರಸ್ತುತ ವಿದ್ಯಮಾನದಲ್ಲಿ ಮಾನವ ತಂತ್ರಜ್ಞಾನದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದಾನೆ ಎಂಬುದು ಸತ್ಯ. ಇಲ್ಲಿನ ಕ್ಯಾಡ್ ಸೆಂಟರ್ ಸಂಸ್ಥೆಯು ಗಣಕೀತೃತ ತಂತ್ರಜ್ಞಾನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವೆನಿಸಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟು ಪ್ರಗತಿ ಹೊಂದುತ್ತಾ ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣ ಮುಂದುವರೆಯಲಿ ಎಂದು ಹೇಳಿ ಶುಭ ಹಾರೈಸಿದರು.


ಸಂಸ್ಥೆಯ ಮಾಲಕ ಅಶ್ವಿನ್ ಸಿಕ್ವೇರಾರವರ ಪತ್ನಿ ವೆರೀನಾ ಸಿಕ್ವೇರಾ ಹಾಗೂ ಕುಟುಂಬಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳಾದ ಬಿಸಿನೆಸ್ ಮ್ಯಾನೇಜರ್ ಜಿತೇಶ್, ಸಿಬ್ಬಂದಿಗಳಾದ ರಾಜೇಂದ್ರ, ದೀಕ್ಷಿತಾ, ಭವ್ಯ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 

ಅರ್ಹ 5 ಫಲಾನುಭವಿಗಳಿಗೆ ಉಚಿತ ಕೋರ್ಸ್…
ಸಂಸ್ಥೆಯು ಪುತ್ತೂರಿನಲ್ಲಿ ಇದೀಗ ಹತ್ತನೇ ವರ್ಷದ ವಿಜ್ರಂಭಣೆಯನ್ನು ಆಚರಿಸುತ್ತಿದೆ. ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲದಕ್ಕೂ ಪೆಟ್ಟು ನೀಡಿದೆ. ಕ್ಯಾಡ್ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಈಗಲೂ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಸಂಸ್ಥೆಯು ಇದೀಗ ಹತ್ತನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅರ್ಹ 5 ಮಂದಿ ಫಲಾನುಭವಿ ವಿದ್ಯಾರ್ಥಿಗಳಿಗೆ ಉಚಿತವಾಗಿ Auto CAD (ಅಟೋ ಕ್ಯಾಡ್) ಕೋರ್ಸ್ ಹಾಗೂ ಉದ್ಯೋಗಕ್ಕೆ ಸಹಾಯ ಮಾಡಿ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು 8970844844 ನಂಬರಿಗೆ ಸಂಪರ್ಕಿಸಿ.
-ಅಶ್ವಿನ್ ಸಿಕ್ವೇರಾ, ಮುಖ್ಯಸ್ಥರು, ಕ್ಯಾಡ್ ಸೆಂಟರ್
ಆಫರ್..

ಸಂಸ್ಥೆಯಲ್ಲಿ ಸಿವಿಲ್, ಮೆಕಾನಿಕಲ್, ಆಟೋ ಕ್ಯಾಡ್, ರೆವಿಟ್, ಕ್ಯಾಶಿಯಾ, ತ್ರಿಡಿಎಸ್ ಮ್ಯಾಕ್ಸ್, ಸೋಲಿಡ್ ವರ್ಕ್ಸ್, ಸ್ಕೆಚ್‌ಅಪ್, ANSYS, ಪ್ರೈಮ ವೆರಾ, ವಿ-ರೇ, ಲ್ಯುಮಿಯೋನ್ ಕೋರ್ಸ್‌ಗಳು ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲು ಉದ್ಧೇಶಿಸಿದೆ ಮಾತ್ರವಲ್ಲದೆ ಮೂರು ಕೋರ್ಸ್‌ಗಳನ್ನು ಪಡೆದುಕೊಂಡರೆ ಒಂದು ಕೋರ್ಸ್ ಉಚಿತವಾಗಿ ಕೊಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.