ಈಶ್ವರಮಂಗಲ: ಒಲಂಪಿಕ್ ಫಿಟ್ ನೆಸ್ ಜಿಮ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆರೋಗ್ಯ ರಕ್ಷಣೆಗೆ ಜಿಮ್ ಅವಶ್ಯಕ: ಸಂಜೀವ ಮಠಂದೂರು

ಈಶ್ವರಮಂಗಲ: ಹನುಮಗಿರಿ ಗಾನಸಿಂಧು ಕಾಂಪ್ಲೆಕ್ಸ್‌ನಲ್ಲಿ ಒಲಂಪಿಕ್ ಫಿಟ್ ನೆಸ್ ಜಿಮ್ ಅ.೧೮ ರಂದು ಶುಭಾರಂಭಗೊಂಡಿತು. ಶಾಸಕ ಸಂಜೀವ ಮಠಂದೂರುರವರು ಜಿಮ್ ಅನ್ನು ಉದ್ಘಾಟಿಸಿ ಮಾತನಾಡುತ್ತಾ, ಜನರು ದೈಹಿಕವಾಗಿ ಆರೋಗ್ಯವಂತರಾಗಿ ಇರಬೇಕಾದರೆ ಇಂತಹ ಜಿಮ್‌ಗಳ ಅವಶ್ಯಕತೆ ಇದೆ. ಮಾನಸಿಕವಾಗಿ ದೈಹಿಕವಾಗಿ ಅರೋಗ್ಯ ಇದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ವಯೋವೃದ್ಧರೂ ಕೂಡ ಬೆಳಿಗ್ಗೆ ವಾಕಿಂಗ್ ಹೋಗುತ್ತಾರೆ ಯಾಕೆಂರೆ ತಮ್ಮ ಅರೋಗ್ಯದ ರಕ್ಷಣೆಗೆ ಅದೇ ರೀತಿ ಇಂದಿನ ಆಧುನಿಕ ಯುಗದಲ್ಲಿ ಯುವಕರು ಜಿಮ್ ಗೆ ಹೋಗಿ ಅರೋಗ್ಯವಾಗಿದ್ದಾರೆ ಎಂದರು. ಹಿಂದಿನ ಕಾಲದಲ್ಲಿ ಆರೋಗ್ಯ ರಕ್ಷಣೆಗೆ ಗರಡಿಗಳು ಇದ್ದು ತಮ್ಮ ಬಲಿಷ್ಠತೆಯನ್ನು ಪ್ರದರ್ಶಿಸುತ್ತಿದ್ದರು ಎಂದ ಶಾಸಕರು, ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯರು ಕೂಡ ಗರಡಿಗಳಲ್ಲಿ ಪಳಗಿದವರಾಗಿದ್ದರು ಎಂದರು. ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ದೇಹದಾರ್ಡ್ಯತೆ ಮುಖ್ಯ. ಇದಕ್ಕೆ ಇಂತಜ ಜಿಮ್‌ಗಳ ಸಹಕರಿ ಎಂದರು. ಒಲಂಪಿಕ್ ಹೆಸರಿನಲ್ಲಿರುವ ಈ ಜಿಮ್‌ನಲ್ಲಿ ಕ್ರೀಡಾಪಟುಗಳು ಕೂಡ ಬೆಳೆಯಲಿ ಆ ಮೂಲಕ ಒಲಂಪಿಕ್ ಕ್ರೀಡೆಯಲ್ಲಿ ಪಾಲ್ಗೋಂಡು ಹೆಸರುಗಳಿಸಲಿ. ಈವರ್ಷವು ನಮ್ಮ ದೇಶ ಒಳ್ಳೆಯ ಸಾಧನೆಯನ್ನು ಮಾಡಿದೆ, ಯುವಕರು ರಾಜ್ಯ ರಾಷ್ಟ್ರ ಅಂತರರಾಷ್ಟ್ರಿಯ ಮಟ್ಟದಲ್ಲಿ ಸಾಧನೆಯನ್ನು ಮಾಡಲಿ ಎಂದು ಹೇಳಿ ಶುಭಹಾರೈಸಿದರು.

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ, ಒಲಂಪಿಕ್ ಜಿಮ್‌ನ ಮಾಲಕ ಶರತ್‌ರವರು ಓರ್ವ ಸಕಲಕಲಾವಲ್ಲಭರಾಗಿದ್ದಾರೆ. ಈಶ್ವರಮಂಗಲದಲ್ಲಿ ಇಂತಹ ಜಿಮ್ ಆರಂಭಿಸುವ ಮೂಲಕ ಯುವ ಜನತೆಗೆ ಪ್ರಯೋಜನ ಮಾಡಿಕೊಟ್ಟ ಇವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ಈ ಜಿಮ್‌ನ ಪ್ರಯೋಜನವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಆ ಮೂಲಕ ತಾಲೂಕು ಜಿಲ್ಲೆಗೆ ರಾಷ್ಟ್ರಕ್ಕೆ ಪದಕವನ್ನು ತರುವಂತೆ ಆಗಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ ಮಾತನಾಡಿ, ಈಶ್ವರಮಂಗಲ ಅತ್ಯಂತ ವೇಗವಾಗಿ ಬೆಳೆಯುವ ಈಶ್ವರಮಂಗಲಕ್ಕೆ ಇಂತಹ ಜಿಮ್‌ನ ಅವಶ್ಯಕತೆ ಇತ್ತು ಅದನ್ನು ಶರತ್‌ರವರು ನೀಗಿಸಿದ್ದಾರೆ. ನಾವೆಲ್ಲರೂ ಪ್ರೋತ್ಸಾಹ ನೀಡುವ ಮೂಲಕ ಸಂಸ್ಥೆ ಬೆಳೆಯಲಿ ಎಂದು ಶುಭ ಹಾರೈಸಿದರು. ಈಶ್ವರಮಂಗಲದ ಡಾ. ಶ್ರೀಕುಮಾರ್ ಕತ್ರಿಬೈಲು ಮಾತನಾಡಿ, ನಮ್ಮ ದೇಶ ಜನಸಂಖ್ಯೆಯಲ್ಲಿ ೨ ಸ್ಥಾನ ಇದೆ .ಆದ್ರೆ ಒಲಂಪಿಕ್ ನಲ್ಲಿ ೪೮ ಸ್ಥಾನ ಬಂದಿದೆ. ಪ್ರತಿ ಗ್ರಾಮದಲ್ಲಿ ಒಂದೊಂದು ಜಿಮ್ ತೆರೆದರೆ ಅದೆಷ್ಟೋ ಯುವಕರಿಗೆ,ಕ್ರೀಡಾ ಪಟುಗಳಿಗೆ ಪ್ರಯೋಜನವಾಗಲಿದೆ ಎಂದ ಅವರು, ಕೇವಲ ಜಿಮ್‌ಗೆ ಹೋದರೆ ಮಾತ್ರ ಸಾಲದು ಸರಿಯಾದ ಅಹಾರವನ್ನು ಕೂಡ ತೆಗೆದುಕೋಳ್ಳಬೇಕು ಆಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ಕಾವು ಪಂಚಲಿಂಗೇಶ್ವರ ಜಿಮ್ ಟ್ರೈನರ್ ಮಾಲಕ ಕೃಷ್ಣಪ್ಪ ಗೌಡ, ಮಾತನಾಡಿ ಜಿಮ್ ಅವಶ್ಯಕತೆ ಇದೆ. ನಾನು ೪೦ ವರ್ಷ ಮೋದಲೇ ಪ್ರಾರಂಭ ಮಾಡಿದ್ದೇನೆ, ದಿನಾಲು ೩-೬ ಗಂಟೆ ಅಭ್ಯಾಸ ಮಾಡಬೇಕು. ಯಾವುದೇ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ಒಂದು ಗುರಿ ಇರಬೇಕು, ಗುರಿ ಮತ್ತು ಗುರು ಇದ್ದಾಗ ಸಾಧನೆ ಮಾಡಲು ಸಾಧ್ಯ. ಅದೇ ರೀತಿ ಒಳ್ಳೆಯ ಟ್ರೈನ್ ಇದ್ದಾಗ ಒಲಂಪಿಕ್ ಹೋಗಬಹುದು. ಪೋಷಕರು ಇದಕ್ಕೆ ಪ್ರೋತ್ಸಾಹ ಕುಡಬೇಕು ಎಂದು ಹೇಳಿದರು. ಈಶ್ವರಮಂಗಲದ ಪ್ರಗತಿ ಪರ ಕೃಷಿಕ ಮುಂಡ್ಯ ಶ್ರೀಕೃಷ್ಣ ಭಟ್ ಮಾತನಾಡಿ, ಹಿಂದಿನ ಕಾಲದಲ್ಲಿ ಜನರು ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆ ಮೂಲಕ ಅವರಿಗೆ ಸರಿಯಾದ ವ್ಯಾಯಾಮ ಸಿಗುತ್ತಿತ್ತು ಆದರೆ ಇಂದಿನ ಕಾಲದಲ್ಲಿ ಜನರಿಗೆ ವ್ಯಾಯಾಮ ಸಿಗಬೇಕಾದರೆ ಇಂತಹ ಜಿಮ್‌ಗಳೆ ಬೇಕಾಗಿದೆ ಎಂದರು. ಉತ್ತಮ ಅರೋಗ್ಯಕ್ಕೆ ವ್ಯಾಯಾಮ ಅಗತ್ಯ, ಯುವಕರು ಜಿಮ್ ಮೂಲಕ ಆರೋಗ್ಯ ವೃದ್ಧಿಸಿಕೊಂಡು ಪ್ರಯೋಜನ ಪಡೆಯಲಿ ಎಂದು ಹೇಳಿದರು.

ರವಿಕಿರಣ ಶೆಟ್ಟಿ ಬೆದ್ರಾಡಿ ಮತನಾಡಿ, ಎಲ್ಲಾ ವ್ಯವಸ್ಥೆಗಳಿರುವ ಈಶ್ವರಮಂಗಲಕ್ಕೆ ಜಿಮ್‌ನ ಅವಶ್ಯಕತೆ ಇತ್ತು ಅದನ್ನು ಶರತ್‌ರವರು ನೀಗಿಸಿದ್ದಾರೆ. ಶರತ್ ಒಬ್ಬ ಕಠಿಣ ಶ್ರಮಜೀವಿ. ಕೈ ಕೆಸರಾರೆ ಬಾಯಿ ಮೋಸರು ಎಂಬಂತೆ ಕಠಿಣ ಪರಿಶ್ರಮದಿಂದ ಉದ್ಯಮಿಯಾಗಿ ಬೆಳೆದಿದ್ದಾರೆ. ಈ ಜಿಮ್ ನಿಂದ ಊರಿಗೆ ಹೆಸರು ಬರುವಂತೆ ಆಗಲಿ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯರಾದ ಪ್ರದೀಪ್ ರೈ ಕರ್ನೂರು, ಎಂ. ರಾಮ ಮೇನಾಲ, ಚಂದ್ರಹಾಸ ಈಶ್ವರಮಂಗಲ, ಪುತ್ತೂರು ವಿಜಯ ಕ್ರೆಡಿಟ್ ಕೋ.ಅಪರೇಟಿವ್ ಸೋಸೈಟಿಯ ಅಶ್ವತ್ ರೈ ನೆಲ್ಲಿತ್ತಡ್ಕ, ಕಾವು ಸಿಎ ಬ್ಯಾಂಕ್‌ನ ನಿರ್ದೇಶಕ ಮಂಜುನಾಥ ರೈ ಸಾಂತ್ಯ, ಪಾಣೆಮಂಗಳೂರು ಜಿಮ್ ಟ್ರೈನರ್ ಮತ್ತು ಮಾಲಕ ಇಲಿಯಾಸ್, ಮೇಕಪ್ ಕಲಾವಿದ ಪ್ರೇಮ್ ರಾಜ್ ಆರ್ಲಪದವು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಬಡಗನ್ನೂರು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಉಪಸ್ಥಿತರಿದ್ದರು. ಈಶ್ವರಮಂಗಲ ಒಲಂಪಿಕ್ ಫಿಟ್ ನೆಸ್ ಜಿಮ್‌ನ ಮಾಲಕ ಶರತ್ ಕುಮಾರ್ ರೈ ನೆಲ್ಲಿತ್ತಡ್ಕ ಸ್ವಾಗತಿಸಿದರು. ದೀಕ್ಷಿತ್ ರೈ ಕುತ್ಯಾಳ,ಅತುಲ್ ರೈ, ಜಮ್ಮಾಥ್ ರೈ ನೆಲ್ಲಿತ್ತಡ್ಕ ಹೂ ನೀಡಿ ಸ್ವಾಗತಿಸಿದರು. ಸಮೃದ್ಧಿ, ಸಮೀಕ್ಷಾ, ಸುಜಾತ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಖೇಶ್ ರೈ ಕಾರ್ರ್‍ಅಕ್ರಮ ನಿರೂಪಿಸಿದರು. ಈಶ್ವರಮಂಗಲ ಬಿಜೆಪಿ ಶಕ್ತಿ ಕೇಂದ್ರ ದ ಸಂಚಾಲಕ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.

ಸನ್ಮಾನ
ದೇಹದಾರ್ಡ್ಯ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪದಕ ಗಳಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಚಿನ್ ರೈ ಮತ್ತು ಸಂಶುದ್ಧೀನ್, ಇಲಿಯಾಸ್ ರವರನ್ನು ಸನ್ಮಾನಿಸಲಾಯಿತು.

ದೇಹದಾರ್ಡ್ಯ ಪ್ರದರ್ಶನ
ಇದೇ ಸಂದರ್ಭದಲ್ಲಿ ದೇಹದಾರ್ಡ್ಯ ಪ್ರದರ್ಶನ ನಡೆಯಿತು. ಹರಿಪ್ರಸಾದ್ ಕನ್ನಡ್ಕ, ಈಶ್ವರಮಂಗಲ ಒಲಂಪಿಕ್ ಫಿಟ್ ನೆಸ್ ಜಿಮ್ ಟ್ರೈನರ್ ಸಂಶುದ್ದೀನ್, ಧನುಷ್ ಮುಂಡ್ಯ, ಫಿಟ್‌ನೆಸ್ ಮಲ್ಟಿ ಜಿಮ್ ಆಂಡ್ ಮಾರ್ಷಲ್ ಆರ್ಟ್ಸ್ ಪಾಣೆಮಂಗಳೂರು ಇದರ ಶಾಹಿನ್, ಸಫ್ವಾನ್‌ರವರುಗಳಿಂದ ದೇಹದಾರ್ಡ್ಯ ಪ್ರದರ್ಶನ ಮನರಂಜಿಸಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.