ಬೆಳ್ತಂಗಡಿ ಜೆಸಿಐನಿಂದ ಶಾಶ್ವತ ಯೋಜನೆಗಳ ಹಸ್ತಾಂತರ – ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ ಶಿವಾನಂದರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶಾಶ್ವತ ಯೋಜನೆಗಳ ಹಸ್ತಾಂತರ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಅ.18ರಂದು ಬೆಳ್ತಂಗಡಿ ಜೇಸಿ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಸುದ್ದಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಯು.ಪಿ ಶಿವಾನಂದರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಜೆಸಿಐ ಬೆಳ್ತಂಗಡಿ ಮಂಜುಶ್ರಿ ಅಧ್ಯಕ್ಷ ಸ್ವರೂಪ್ ಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೋವಿಡ್-೧೯ ಪ್ರತಿಕೂಲ ಪರಿಸ್ಥಿತಿಯಲ್ಲಿ ಉತ್ತಮ ಜನಸ್ಪಂದನೆ ಹಾಗೂ ಜನರಿಗೆ ಧೈರ್ಯ ತುಂಬಿದ ಸುದ್ದಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಸುದ್ದಿ ಪತ್ರಿಕೆಯ ಸಂಪಾದಕ ಯು.ಪಿ ಶಿವಾನಂದರವರನ್ನು ಗೌರವಿಸಲಾಯಿತು. ಜೊತೆಗೆ ಕೊರೊನಾದ ವೇಳೆ ಜನರಿಗೆ ನೆರವಾದ ನೆತ್ತರ ಸರಕಾರಿ ಕಿ.ಪ್ರಾ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸೀತಾರಾಮ ಬೆಳಾಲು, ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಾಣಾಧಿಕಾರಿ ರಕ್ಷಿತ್, ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಮೆಕ್ಯಾನಿಕ್ ಯೋಗೀಶ್ ಹಾಗೂ ಪಟ್ಟಣ ಪಂಚಾಯತ್ ನೀರು ಸರಬರಾಜು ಸಹಾಯಕ ಸಚಿನ್ ಇವರುಗಳನ್ನುಗುರುತಿಸಿ ಅಭಿನಂದಿಸಲಾಯಿತು ಹಾಗೂ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ಆನ್ ಲೈನ್ ನೃತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯು.ಪಿ ಶಿವಾನಂದ್ ರವರು ಜೆಸಿಐನಲ್ಲಿ ಯುವಕರ ಚುಟುವಟಿಕೆಗೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಯುವಕರ ಉತ್ಸಾಹ, ಚಿಂತನೆಗಳು ಸಮಾಜಮುಖಿಯಾಗಿರಬೇಕು ಎಂದರು. ಸುದ್ದಿ ಸಮೂಹ ಸಂಸ್ಥೆಗಳು ಕರೊನಾ ಸಮಯದಲ್ಲಿ ಜನರ ಜೊತೆಗಿರುವ ಪ್ರಯತ್ನ ಮಾಡಿದೆ. ಜನರು ಪರಸ್ಪರ ಸಂಬಂಧಗಳನ್ನು ಮರೆತು ವರ್ತಿಸುವ ಕಾಲದಲ್ಲೂ ನಮ್ಮ ವರದಿಗಾರರು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

ಜೊತೆಗೆ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಇಲಾಖೆಗಳ ಅಧಿಕಾರಿಗಳು ಜನರಿಂದ ಅಂತರ ಕಾಯ್ದುಕೊಂಡಿದ್ದರು. ಜನರು ಕೂಡ ಇಲಾಖೆಗಳಿಗೆ ಬರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಸ್ಟುಡಿಯೋದಲ್ಲಿ ಪ್ರತಿ ಇಲಾಖೆಯವರನ್ನು ಕೂರಿಸಿ ಜನರೊಂದಿಗೆ ಸಂಪರ್ಕ ಸಾಧಿಸುವ ಕೆಲಸವನ್ನು ಮಾಡಿದ್ದೇವೆ .ಸ್ವಾತಂತ್ರ್ಯ ರಥ, ಗಾಂಧಿ ರಥದ ನಂತರ ನಾವು ಇಲಾಖೆಗಳಲ್ಲಿನ ಕುಂದು ಕೊರತೆಗಳ ಕುರಿತು ವರದಿ ಮಾಡಿದ್ದೇವೆ. ಇಲಾಖೆಯ ಕೆಲ ಕುಂದುಕೊರತೆಗಳನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಗೆಹರಿಸಬಹುದು. ಇಂತಹ ಕೈಂಕರ್ಯದಲ್ಲಿ ಜೆಸಿಐ ಬೆಳ್ತಂಗಡಿ ಭಾಗಿಯಾಗಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷೆ ಹೇಮಲತಾ ಪ್ರದೀಪ್, ವಲಯ ಸಂಯೋಜಕ ಕಿರಣ್ ಕುಮಾರ್ ಶೆಟ್ಟಿ, ಜೇಸಿಐ ನಿಕಟಪೂರ್ವ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ಶಂಕರ್ ರಾವ್ ಬಿ, ಜೇಸಿರೇಟ್ ಅಧ್ಯಕ್ಷೆ ಶುಭ ಸ್ವರೂಪ್, ಜೂನಿಯರ್ ಜೇಸಿ ಅಧ್ಯಕ್ಷ ಸೃಜನ್ ಆರ್ ರೈ, ಕಾರ್ಯಕ್ರಮ ಸಂಯೋಜಕಿ ಆಶಾಲತಾ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಬೆಳ್ತಂಗಡಿ ವ್ಯವಸ್ಥಾಪಕ ಮಂಜುನಾಥ್ ರೈ, ಜೆಸಿಐ ಮಂಜುಶ್ರೀ ಪೂರ್ವಾಧ್ಯಕ್ಷರುಗಳಾದ ಪ್ರಮೋದ್ ಆರ್ ನಾಯಕ್, ಸುಭಾಶ್ಚಂದ್ರ ಎಂ.ಪಿ, ಕೇಶವ ಪೈ, ವಿಶ್ವನಾಥ್ ಶೆಟ್ಟಿ, ದಯಾನಂದ ನಾಯಕ್, ಅಶೋಕ್ ಕುಮಾರ್ ಬಿ.ಪಿ, ಕೇಶವ ಪಿ. ಬೆಳಾಲು, ತುಕರಾಮ್ ಬಿ, ನಾರಾಯಣ ಶೆಟ್ಟಿ, ಚಿದಾನಂದ ಇಡ್ಯ, ವಸಂತ್ ಶೆಟ್ಟಿ, ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪ್ರಶಾಂತ್ ಲಾಯಿಲ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.